ಈ ಗಿಡ ಬಿಡುವುದು ಹೂವು ಹಣ್ಣುಗಳನ್ನಲ್ಲ, ಬದಲಿಗೆ ರಾಶಿ ರಾಶಿ ಹಾವುಗಳನ್ನು! ಇಲ್ಲಿದೆ ನೋಡಿ ಸ್ನೇಕ್ ಗಾರ್ಡನ್ ವಿಡಿಯೋ

Snake garden : ಇಲ್ಲೊಂದು ಉದ್ಯಾನವನವಿದೆ.ಇಲ್ಲಿನ ಸಸಿಗಳನ್ನು ನೋಡಿದರೆ ಮೈ ಜುಮ್ಮೆನಿಸುತ್ತದೆ. ಯಾಕೆಂದರೆ ಈ ಸಸಿಗಳ ತುಂಬಾ ಇರುವುದು ಹೂವಲ್ಲ ಹಾವು.   

Written by - Ranjitha R K | Last Updated : Oct 16, 2024, 12:40 PM IST
  • ಈ ಉದ್ಯಾನವನದಲ್ಲಿ ಇರುವುದು ಹೂವಿನ ಗಿಡವಲ್ಲ ಹಾವು
  • ಮರದ ರೆಂಬೆ ಕೊಂಬೆಯಲೆಲ್ಲಾ ಬರೀ ಹಾವುಗಳೇ
  • ಇಲ್ಲಿನ ಸಸಿಗಳನ್ನು ನೋಡಿದರೆ ಮೈ ಜುಮ್ಮೆನಿಸುತ್ತದೆ.
ಈ ಗಿಡ ಬಿಡುವುದು ಹೂವು ಹಣ್ಣುಗಳನ್ನಲ್ಲ, ಬದಲಿಗೆ ರಾಶಿ ರಾಶಿ ಹಾವುಗಳನ್ನು! ಇಲ್ಲಿದೆ ನೋಡಿ ಸ್ನೇಕ್ ಗಾರ್ಡನ್ ವಿಡಿಯೋ   title=

Snake garden :ಪುಟ್ಟದಾದರೂ ಪರವಾಗಿಲ್ಲ, ಮನೆ ಅಂದ ಮೇಲೆ ಒಂದು ಉದ್ಯಾನವಿರಬೇಕು. ಆಗ ಆ ಮನೆಯ ಸೌಂದರ್ಯ ಇಮ್ಮಡಿಯಾಗುತ್ತದೆ.  ಸುಮ್ಮನೆ ಬೇಜಾರಾದಾಗಲೋ ಅಥವಾ ಏನೂ ಕೆಲಸ ಇಲ್ಲದಾಗ ಉದ್ಯಾನವನದ ಬಳಿ ಹೋಗಿ ಕುಳಿತರೆ ಸಾಸಮಯ ಕಳೆಯುವುದೇ ಗೊತ್ತಾಗುವುದಿಲ್ಲ. ಉದ್ಯಾನ ಅಥವಾ ಗಾರ್ಡನ್ ಅಂದ ಕೂಡಲೇ ನಮ್ಮ ಕಣ್ಣ ಮುಂದೆ ಬರುವುದು ಬೇರೆ ಬೇರೆ ಹೂವಿನ ಸಸಿಗಳು. ಇನ್ನು ಸ್ವಲ್ಪ ದೊಡ್ಡ ತೋಟ ಎಂದರೆ ಅಲ್ಲಿ ಬೇರೆ ಬೇರೆ ವಿಧದ ಹಣ್ಣುಗಳ ಮರ ಕೂಡಾ ಇರುವುದು ಸಾಧ್ಯ. 

ಆದರೆ ಇಲ್ಲೊಂದು ಉದ್ಯಾನವನವಿದೆ. ಇಲ್ಲಿರುವ ಸಸಿಗಳನ್ನು ನೋಡಿದರೆ ಮನಸ್ಸಿಗೆ ಮುದ ಸಿಗುವುದಲ್ಲ ಮೈ ಜುಮ್ಮೆನಿಸುತ್ತದೆ. ಯಾಕೆಂದರೆ ಈ ಸಸಿಗಳ ತುಂಬಾ ಇರುವುದು ಹೂವಲ್ಲ ಹಾವು. ಅದು ಕೂಡಾ ರಾಶಿ ರಾಶಿಯಲ್ಲಿ.ಇಲ್ಲಿಯ ಸಸಿಯ ತುಂಬೆಲ್ಲಾ ಹಾವುಗಳೇ ತುಂಬಿಕೊಂಡಿರುತ್ತವೆ. ಹೌದು, ಈ ಮಾತು ಕೇಳುವುದಕ್ಕೆ ವಿಚಿತ್ರ ಎಂದೆನಿಸಿದರೂ ಸತ್ಯ. ವಿಯೆಟ್ನಾಂನಲ್ಲಿ ವಿಶಿಷ್ಟವಾದ ಹಾವಿನ ಉದ್ಯಾನವಿದೆ. ಇದನ್ನು ಟ್ರೈ ರಾನ್ ಡಾಂಗ್ ಟಾಮ್ ಎಂದು ಕರೆಯಲಾಗುತ್ತದೆ. 12 ಹೆಕ್ಟೇರ್‌ಗಳಷ್ಟು ವಿಸ್ತಾರವಾಗಿರುವ ಈ ತೋಟದ ಗಿಡಗಳ ತುಂಬಾ ಹಾವೇ ಇರುವುದು. 

ಇದನ್ನೂ ಓದಿ : Viral Video: ಪಾಪದ ಕರುವನ್ನು ತಿಂದು ತೇಕಿದ ಪಾಪಿ ಹೆಬ್ಬಾವು..! ಹಾವಿನ ಹೊಟ್ಟೆಯಿಂದ

ರೆಂಬೆ ಕೊಂಬೆಗಳಲೆಲ್ಲಾ ಹಾವು  : 
ಈ ಗಾರ್ಡನ್ ಬಹಳ ವಿಶೇಷವಾದದ್ದು.ಯಾಕೆಂದರೆ ಇಲ್ಲಿರುವ ಸಸಿಯ ರೆಂಬೆ ಕೊಂಬೆಗಳಲ್ಲಿ ಹಣ್ಣುಗಳ ಬದಲಿಗೆ ಹಾವುಗಳಿವೆ.ಕೊಂಬೆಗಳ ಮೇಲೆ ಹಾವುಗಳೇ  ನೇತಾಡುತ್ತದೆ.ಇಲ್ಲಿ  400ಕ್ಕೂ ಹೆಚ್ಚು ಜಾತಿಯ ವಿಷಕಾರಿ ಹಾವುಗಳಿವೆ.ಈ ಹಾವುಗಳನ್ನು ಅವುಗಳ ವಿಷಕ್ಕಾಗಿಯೇ ಸಾಕಲಾಗುತ್ತದೆ.ಇದನ್ನು ಔಷಧಗಳು ಮತ್ತು ಆಂಟಿ ಡಾಟ್ಸ್  ಉತ್ಪಾದಿಸಲು ಬಳಸಲಾಗುತ್ತದೆ. 

ಇಲ್ಲಿದೆ ಸ್ನೇಕ್ ಗಾರ್ಡನ್ ವೀಡಿಯೊ  : 

 

ಇದನ್ನೂ ಓದಿ : Viral Video: ಸತ್ತನೆಂದು ಚಟ್ಟವೇರಿಸಿ ಬೆಂಕಿ ಕೊಟ್ಟಿದ್ದಷ್ಟೇ... ಎದ್ದು ನಿಂತೇಬಿಡ್ತು ತಾತನ ಹೆಣ! ಮುಂದೇನಾಯ್ತು...? ವಿಡಿಯೋ ನೋಡಿ

ಇವುಗಳ ವಿಷದಿಂದಲೇ ಅನೇಕರಿಗೆ ಜೀವದಾನ : 
ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ಗೆ ಭೇಟಿ ನೀಡುತ್ತಾರೆ.ಪ್ರತಿ ವರ್ಷ ಸುಮಾರು 1,500 ಜನರು ಹಾವಿನ ದಾಳಿಗೆ ಒಳಗಾದವರು   ಡಾಂಗ್ ಟಾಮ್ ಸ್ನೇಕ್ ಫಾರ್ಮ್‌ನಲ್ಲಿ ಚಿಕಿತ್ಸೆ ಪಡೆಯುತ್ತಾರೆ. ವಿಶೇಷ ಚಿಕಿತ್ಸೆಗಳ ಲಭ್ಯತೆ ಮತ್ತು ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಯು ಹಾವು ಕಡಿತದ ಘಟನೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಕೊಡುಗೆ ನೀಡುತ್ತದೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News