Top-10 Digital Stars : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮವು ಬಹಳ ಜನಪ್ರಿಯವಾಗಿದೆ. ಕಂಟೆಂಟ್ ಕ್ರಿಯೇಟರ್ಸ್ ಅದರಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.ಮನರಂಜನೆ ಮಾತ್ರವಲ್ಲ, ಫ್ಯಾಷನ್, ಸೌಂದರ್ಯ,ತಂತ್ರಜ್ಞಾನದಂತಹ ಅನೇಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುತ್ತಾರೆ. 2024ರ ಟಾಪ್ 100 ಡಿಜಿಟಲ್ ಸ್ಟಾರ್ಗಳ ಪಟ್ಟಿಯಲ್ಲಿ ಭಾರತದ ಅತ್ಯುತ್ತಮ ಕಂಟೆಂಟ್ ರಚನೆಕಾರರಿಗೂ ಸ್ಥಾನ ಸಿಕ್ಕಿದೆ.
2024ರ Top 10 digital creators ಪಟ್ಟಿ :
ಫೋರ್ಬ್ಸ್ ಇತ್ತೀಚೆಗೆ 2024ರ ಟಾಪ್ 100 ಡಿಜಿಟಲ್ ಸ್ಟಾರ್ಗಳ ಪಟ್ಟಿಯನ್ನು ಹಂಚಿಕೊಂಡಿದೆ.ಅನೇಕ ರೀತಿಯ ಕಂಟೆಂಟ್ ಕ್ರಿಯೇಟರ್ಗಳು ಇದರಲ್ಲಿ ಸ್ಥಾನ ಪಡೆದಿದ್ದಾರೆ. ಈ ಪೈಕಿ ಟಾಪ್ 10 ಕಂಟೆಂಟ್ ಕ್ರಿಯೇಟರ್ ಗಳ ಹೆಸರು ಇಲ್ಲಿದೆ.
ಇದನ್ನೂ ಓದಿ : ಮಂಗಳನ ಮೇಲ್ಮೈಯಲ್ಲಿ ಮಾನವನ ಮುಖ ? ನಾಸಾದ ರೋವರ್ ಸೆರೆ ಹಿಡಿದ ಫೋಟೋ ಇದು
ನ್ಯಾನ್ಸಿ ತ್ಯಾಗಿ :
ನ್ಯಾನ್ಸಿ ತ್ಯಾಗಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಮತ್ತು ಫ್ಯಾಷನ್ ಮತ್ತು ಜೀವನಶೈಲಿಯ ಬಗ್ಗೆ ಕಂಟೆಂಟ್ ಕ್ರಿಯೇಟರ್ ಮಾಡುತ್ತಾರೆ. ಜೀವನ ಶೈಲಿ ಸಲಹೆಗಳು, ಫ್ಯಾಷನ್ ಪ್ರವೃತ್ತಿಗಳನ್ನು ಒಳಗೊಂಡ ಕಂಟೆಂಟ್ ಕ್ರಿಯೇಟರ್ ಮಾಡುತ್ತಾರೆ.
ಸಾಕ್ಷಿ ಕೇಸ್ವಾನಿ :
ಸಾಕ್ಷಿ ಕೇಸ್ವಾನಿ ಬಹಳ ಪ್ರಸಿದ್ಧ ಹಾಸ್ಯ ಕಲಾವಿದೆ.ಅವರ ಹಾಸ್ಯವನ್ನು ಸಾಕಷ್ಟು ಜನ ಇಷ್ಟ ಪಡುತ್ತಾರೆ.
ಡ್ಯಾನಿ ಪಂಡಿತ್ :
ಡ್ಯಾನಿ ಪಂಡಿತ್ ಬಹಳ ಪ್ರಸಿದ್ಧ ಹಾಸ್ಯನಟ. ಅವರ ಕಂಟೆಂಟ್ ಅನ್ನು ಬಹಳ ಮಂದಿ ಇಷ್ಟಪಡುತ್ತಾರೆ.ಡ್ಯಾನಿ ಆಗಾಗ observational humor ಮಾಡುತ್ತಾರೆ.
ಧರ್ನಾ ದುರ್ಗಾ :
ಧರ್ನಾ ಹಾಸ್ಯಕ್ಕೆ ಹೆಸರುವಾಸಿಯಾಗಿದೆ. ಅವರು ನಿತ್ಯ ಜೀವನದ ಕಥೆಗಳು ಮತ್ತು ಎಲ್ಲರೂ ಅನುಭವಿಸುವ ವಸ್ತುವನ್ನು ಇಟ್ಟುಕೊಂಡೇ ಹಾಸ್ಯ ಮಾಡುತ್ತಾರೆ. ಆನ್ಲೈನ್ ಕಾಮಿಡಿ ಜಗತ್ತಿನಲ್ಲಿ ಇವರಿಗೆ ಬಹಳ ದೊಡ್ಡ ಹೆಸರಿದೆ.
ಮಹೇಶ್ ಕೇಶ್ವಾಲಾ :
ಮಹೇಶ್ ತಮ್ಮ ತಮಾಷೆಯ ವೀಡಿಯೊಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ಸಾಮಾನ್ಯವಾಗಿ ಚಿಕ್ಕ ವೀಡಿಯೊಗಳನ್ನು ಮಾಡುತ್ತಾರೆ ಮತ್ತು ನಮ್ಮ ದೈನಂದಿನ ಜೀವನಕ್ಕೆ ಸಂಬಂಧಿಸಿದ ಪ್ರಸಿದ್ಧ ವ್ಯಕ್ತಿಗಳನ್ನು ಅನುಕರಿಸುತ್ತಾರೆ.
ಇದನ್ನೂ ಓದಿ : ಟಿವಿಯನ್ನೇ ಕಂಪ್ಯೂಟರ್ ಆಗಿ ಪರಿವರ್ತಿಸಿಕೊಳ್ಳುವ ಸುಲಭ ವಿಧಾನ!ಇದು ಹೊಸ ಟೆಕ್ನಾಲಜಿ ಪರಿಚಯ
ಹರ್ಷಿತಾ ಗುಪ್ತಾ :
ಹರ್ಷಿತಾ ಹಾಸ್ಯ ಕಲಾವಿದೆಯಾಗಿದ್ದು, ಸ್ಟ್ಯಾಂಡ್-ಅಪ್ ಕಾಮಿಡಿ ಮಾಡುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಕಿರು ವೀಡಿಯೊಗಳನ್ನು ಶೇರ್ ಮಾಡುತ್ತಾರೆ.ಇವರ ಕಂಟೆಂಟ್ ಅನ್ನು ಯುವ ಜನತೆಗೆ ತುಂಬಾ ಇಷ್ಟವಾಗುತ್ತದೆ.
ರಾಜವರ್ಧನ್ ಗ್ರೋವರ್ :
ರಾಜವರ್ಧನ್ ಅವರ ಹಾಸ್ಯವು ವಿಡಂಬನೆ ಮತ್ತು ನಮ್ಮೆಲ್ಲರ ನಿತ್ಯ ಜೀವನದಲ್ಲಿ ನಡೆಯುವ ಘಟನೆಗಳನ್ನು ಆಧರಿಸಿಯೇ ಇರುತ್ತದೆ. ಆದ್ದರಿಂದಲೇ ಜನ ಅವರ ಕಂಟೆಂಟ್ ಅನ್ನು ತುಂಬಾ ಇಷ್ಟಪಡುತ್ತಾರೆ.ಆಗಾಗ ಇಂದಿನ ಟ್ರೆಂಡ್, ಸಮಾಜದ ಸಮಸ್ಯೆಗಳ ಬಗ್ಗೆ ಹಾಸ್ಯಮಯವಾಗಿ ಮಾತನಾಡುತ್ತಾರೆ.
ಅಪೂರ್ವ ಮುಖಿಜಾ :
ಅಪೂರ್ವ ತನ್ನ ಹಾಸ್ಯದಲ್ಲಿ ದೈನಂದಿನ ಜೀವನದ ಬಗ್ಗೆ ಮಾತನಾಡುತ್ತಾರೆ. ಸಣ್ಣ ಸಣ್ಣ ವಿಷಯದಲ್ಲೂ ನಗು ಹುಡುಕುತ್ತಾರೆ.
ತಾರಿಣಿ ಪೇಶಾವಾರಿಯಾ :
ಸೌಂದರ್ಯ ಲೋಕದಲ್ಲಿ ತಾರಿಣಿ ಅತ್ಯಂತ ಪ್ರಸಿದ್ಧಳು. ಮೇಕಪ್ ಮಾಡುವುದು ಹೇಗೆ, ತ್ವಚೆಯನ್ನು ಹೇಗೆ ಕಾಳಜಿ ವಹಿಸಬೇಕು ಮತ್ತು ಯಾವ ಉತ್ಪನ್ನಗಳು ಒಳ್ಳೆಯದು ಎಂದು ಜನರಿಗೆ ತಿಳಿಸುತ್ತಾರೆ . ಅಂದಹಾಗೆ ಸೌಂದರ್ಯವನ್ನು ಇಷ್ಟಪಡುವವರು ತಾರಿಣಿಯನ್ನು ಫಾಲೋ ಮಾಡುತ್ತಾರೆ.
ಕಿರಣ್ ದತ್ತಾ :
ಕಿರಣ್ ತುಂಬಾ ಆಸಕ್ತಿದಾಯಕ ವೀಡಿಯೊಗಳನ್ನು ಮಾಡುತ್ತಾರೆ. ನಾವು ಅನುಭವಿಸುವ ಸಮಸ್ಯೆಗಳನ್ನು ಹಿಡಿದುಕೊಂಡೇ ಹಾಸ್ಯ ಮಾಡುತ್ತಾರೆ. ಅದಕ್ಕಾಗಿಯೇ ಅವರು ಆನ್ಲೈನ್ನಲ್ಲಿ ಬಹಳ ಪ್ರಸಿದ್ಧರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.