36ನೇ ವಯಸ್ಸಿನಲ್ಲಿ ಕೊನೆಗೂ ಹಸೆಮಣೆ ಏರಲು ಸಜ್ಜಾದ ನಿತ್ಯಾ ಮೆನನ್!‌ ಕಿಚ್ಚ ಸುದೀಪ್‌ ಸಿನಿಮಾ ಹಿರೋಯಿನ್ ಕೈಹಿಡಿಯೋ ಗಂಡು ಇವರೇ!!

Actress nithya menon Marriage: ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದು ಎಲ್ಲರನ್ನೂ ತನ್ನತ್ತ ನೋಡುವಂತೆ ಮಾಡಿದ ಖ್ಯಾತ ನಟಿ ನಿತ್ಯಾ ಮೆನನ್ ಸದ್ಯ ಮದುವೆಗೆ ರೆಡಿಯಾಗಿದ್ದಾರೆ.. ಹಾಗಾದ್ರೆ ಹುಡುಗ ಯಾರು? 

Written by - Savita M B | Last Updated : Oct 22, 2024, 03:58 PM IST
  • ನಿತ್ಯಾ ಮೆನನ್ ಟಾಲಿವುಡ್‌ನ ಬಹುಮುಖ ನಟಿಯರಲ್ಲಿ ಒಬ್ಬರು.
  • ಕನ್ನಡದಲ್ಲಿಯೂ ಹಲವಾರು ಸಿನಿಮಾಗಳನ್ನು ಮಾಡಿದ ಈ ಚೆಲುವೆ
36ನೇ ವಯಸ್ಸಿನಲ್ಲಿ ಕೊನೆಗೂ ಹಸೆಮಣೆ ಏರಲು ಸಜ್ಜಾದ ನಿತ್ಯಾ ಮೆನನ್!‌ ಕಿಚ್ಚ ಸುದೀಪ್‌ ಸಿನಿಮಾ ಹಿರೋಯಿನ್ ಕೈಹಿಡಿಯೋ ಗಂಡು ಇವರೇ!!  title=

nithya menon: ನಿತ್ಯಾ ಮೆನನ್ ಟಾಲಿವುಡ್‌ನ ಬಹುಮುಖ ನಟಿಯರಲ್ಲಿ ಒಬ್ಬರು. ಕನ್ನಡದಲ್ಲಿಯೂ ಹಲವಾರು ಸಿನಿಮಾಗಳನ್ನು ಮಾಡಿದ ಈ ಚೆಲುವೆ ಕಿಚ್ಚ ಸುದೀಪ್‌ ಅಭಿನಯದ ಕೋಟಿಗೊಬ್ಬ ಸಿನಿಮಾದ ಮೂಲಕ ಅತೀ ಹೆಚ್ಚು ಜನಪ್ರಿಯತೆ ಗಳಿಸಿದರು..  

ಮೊದಲ ಸಿನಿಮಾದಲ್ಲೇ ಸೂಪರ್ ಹಿಟ್ ಪಡೆದು ಎಲ್ಲರನ್ನೂ ತನ್ನತ್ತ ನೋಡುವಂತೆ ಮಾಡಿದಳು. ಆ ನಂತರ ನಿತಿನ್ ಜೊತೆಗಿನ 'ಇಷ್ಕ್' ನಿತ್ಯಾ ಮೆನನ್ ವೃತ್ತಿಜೀವನಕ್ಕೆ ಉತ್ತಮ ಬ್ರೇಕ್ ನೀಡಿತು. ಈ ಸಿನಿಮಾ ಕಮರ್ಷಿಯಲ್ ಹಿಟ್ ಆಗಿದ್ದಲ್ಲದೆ ನಿತ್ಯಾಗೆ ಹೆಸರು ತಂದುಕೊಟ್ಟಿತ್ತು.

ಇದನ್ನೂ ಓದಿ-ಈ ಖ್ಯಾತ ವ್ಯಕ್ತಿಯಿಂದ ಐಶ್ವರ್ಯಾ-ಅಭಿಷೇಕ್ ದಾಂಪತ್ಯದಲ್ಲಿ ಬಿರುಕು?! ಡಿವೋರ್ಸ್‌ ಫಿಕ್ಸ್?!‌

ಇಷ್ಕ್ ನಂತರ, ಅವರು 'ಗುಂಡೆ ಜಾರಿ ಗಲ್ಲಂಥಯ್ಯಿಂದೆ' ಮತ್ತು 'ಮಲ್ಲಿ ಪಾರ್ಹಿ ಈ ರಾಣಿ ರೋಗು' ನಂತಹ ಬ್ಯಾಕ್-ಟು-ಬ್ಯಾಕ್ ಹಿಟ್‌ಗಳೊಂದಿಗೆ ಟೈರ್ 2 ನಾಯಕರಿಗೆ ಮೋಸ್ಟ್ ವಾಂಟೆಡ್ ನಾಯಕಿಯಾದರು. ಆದರೆ ಒಂದು ಕಾಲದಲ್ಲಿ ಹಿಟ್‌ಗಳ ಸರಣಿಯನ್ನು ಕಂಡ ಈ ಚೆಲುವೆ ಸೋಲುಗಳಿಂದ ಕೊಂಚ ಹಿಂದೆ ಸರಿದಿದ್ದರು. 

ಬಳಿಕ ನಿತ್ಯಾ ಪವನ್ ಕಲ್ಯಾಣ್ ಅವರ 'ಭೀಮಲಾನಾಯಕ್' ಮತ್ತು ಧನುಷ್ ಅವರ 'ತಿರು' ಚಿತ್ರದ ಮೂಲಕ ಸಖತ್ ಕಮ್ ಬ್ಯಾಕ್ ನೀಡಿದರು. ಕಮ್ ಬ್ಯಾಕ್ ಎಂದರೆ ಮಾಮೂಲಿ ಕಮ್ ಬ್ಯಾಕ್ ಅಲ್ಲ.. ರಾಷ್ಟ್ರಪ್ರಶಸ್ತಿ ಕೂಡ ಅವರನ್ನು ತಲುಪುವ ರೇಂಜ್ ಗೆ ಹೋಯಿತು. ಸದ್ಯಕ್ಕೆ ನಿತ್ಯಾ ಮೆನನ್ ಕೈಯಲ್ಲಿ ಎರಡ್ಮೂರು ಚಿತ್ರಗಳಿವೆ. ಇದೇ ವೇಳೆ ಈ ಚೆಲುವೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಇದನ್ನೂ ಓದಿ-ಈ ವಾರ ತೆರೆಗೆ "ಯಲಾಕುನ್ನಿ" ; ವಜ್ರಮುನಿ ಲುಕ್ ನಲ್ಲಿ ಕೋಮಲ್ ಕಮಾಲ್

ಚೆನ್ನೈ ಟಾಕ್ ಪ್ರಕಾರ, ನಿತ್ಯಾ ಮೆನನ್ ತಮಿಳು ಹೀರೋ ಜೊತೆ ಮದುವೆಯಾಗಲಿದ್ದಾರೆ ಎಂಬ ಮಾಹಿತಿ ಇದೆ. ಇದರಲ್ಲಿ ನಿಜ ಏನಿದೆಯೋ ಗೊತ್ತಿಲ್ಲ ಆದರೆ ಈ ಸುದ್ದಿ ವೈರಲ್ ಆಗುತ್ತಿದೆ. ಆದರೆ ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಮತ್ತು ಇದು ಕೇವಲ ವದಂತಿಗಳಾಗಿದ್ದು, ಇದನ್ನು ನಂಬಬೇಡಿ ಎನ್ನುತ್ತಾರೆ ನಿತ್ಯಾ ಮೆನನ್ ಆಪ್ತರು.

ಈ ಹಿಂದೆ ನಿತ್ಯಾ ಮೆನನ್ ಕೂಡ ತನ್ನ ಮದುವೆಗೆ ಕೆಲವು ಷರತ್ತುಗಳನ್ನು ಹಾಕಿದ್ದಾಗಿ ಹೇಳಿದ್ದರು. ನಿತ್ಯಾ ಮದುವೆಯ ಬಗ್ಗೆ ಸ್ಥಿರವಾದ ಅಭಿಪ್ರಾಯಗಳನ್ನು ಹೊಂದಿದ್ದಾಳೆ. ಮದುವೆಯು ಸಾಮಾಜಿಕ ಮತ್ತು ಆರ್ಥಿಕ ಭದ್ರತೆಗೆ ಸಂಬಂಧಿಸಿದ ಒಂದು ಸೆಟಪ್ ಆಗಿದೆ. ಆದರೆ ತನಗೆ ಅಂತಹ ಭದ್ರತೆ ಬೇಕಿಲ್ಲ, ಅದಕ್ಕೂ ಮೀರಿ ಯೋಚಿಸುವ ವ್ಯಕ್ತಿ ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ ಎನ್ನುತ್ತಾರೆ ನಿತ್ಯಾ ಮೆನನ್.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News