Fruits for uric acid: ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಅನೇಕರು ಹಲವು ಸಮಸ್ಯೆಗಳನ್ನು ಅನುಭವಿಸುತ್ತಾರೆ. ಇದರಿಂದ ತೀವ್ರ ಅಸ್ವಸ್ಥತೆ ಕೂಡ ಉಂಟಾಗುತ್ತದೆ. ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡಬೇಕು ಎಂದರೆ ಕೆಲವು ಆಹಾರಗಳನ್ನು ತ್ಯಜಿಸಬೇಕಾಗುತ್ತದೆ, ಕಟ್ಟಿನಿಟಿನ ಆಹಾರ ಕ್ರಮವನ್ನು ಪಾಲಿಸಬೇಕಾಗುತ್ತದೆ. ಆದರೆ, ಕೆಲವು ರೀತಿಯ ಹಣ್ಣುಗಳನ್ನು ಸೇವಿಸುವುದರಿಂದ ನೀವು ನಿಮ್ಮ ದೇಹದಲ್ಲಿನ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಬಹುದು. ಹಾಗಾದರೆ ಆ ಹಣ್ಣುಗಳು ಯಾವುದು ತಿಳಿಯಲು ಮುಂದೆ ಓದಿ...
ದೇಹದಲ್ಲಿ ಯೂರಿಕ್ ಸಮಸ್ಯೆ ಇದ್ದರೆ, ವೈದ್ಯರು ಕೆಲವೊಂದು ಆಹಾರಗಳನ್ನು ಸೇವಿಸದಂತೆ ಪಥ್ಯ ಇಡುತ್ತಾರೆ, ಹಾಗೂ ಔಷಧಿಗಳನ್ನು ನೀಡುಯತ್ತಾರೆ, ಕೆಲವೊಬ್ಬರಿಗೆ ನಿರಂತರವಾಗಿ ಔಷಧಿಗಳನ್ನು ಸೇವಿಸಿದ ನಂತರವೂ ಕೂಡ ದೇಹದಲ್ಲಿನ ಯೂರಿಕ್ ಆಸಿಡ್ ಅಂಶ ಕಡಿಮೆಯಾಗುವುದಿಲ್ಲ. ಕೇವಲ ಔಷಧಿಗಳಿಂದ ಯೂರಿಕ್ ಆಸಿಡ್ ಅನ್ನು ಕಡಿಮೆ ಮಾಡುವುದು ಅಸಾಧ್ಯ ಅದಕ್ಕಾಗಿಯದೆ ವೈದ್ಯರು ಕೆಲವೊಂದು ಹಣ್ಣುಗಳನ್ನು ನಿಯಮಿತವಾಗಿ ಸೇವಿಸುವಂತೆ ಸೂಚನೆ ನೀಡುತ್ತಾರೆ. ನೀವು ಸೇವಿಸುವ ಔಷಧಿಗಳ ಜೊತೆ ಜೊತೆಗೆ ಈ ಹಣ್ಣುಗಳನ್ನು ಸೇವಿಸುವುದರಿಂದ ನೀವು ನಿಮ್ಮ ದೇಹದಲ್ಲಿನ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಬಹುದು.
ಕಲ್ಲಂಗಡಿ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಲ್ಲಿನ ಯೂರಿಕ್ ಆಸಿಡ್ ಅಂಶ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಹಣ್ಣಿನಲ್ಲಿ ಸಿಟ್ರುಲಿನ್ ಎಂಬ ಅಂಶವಿದೆ. ಇದು ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಮೂತ್ರಪಿಂಡದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಅನಾನಸ್ ಹಣ್ಣು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ, ಇದೊಂದು ಸೀಸನಲ್ ಫ್ರೂಟ್ ಆದರೂ ಕೂಡ ಇದರಲ್ಲಿನ ಆರೋಗ್ಯ ಪ್ರಯೋಜನಗಳು ಹಲವಾರು, ಈ ಹಣ್ಣು ವಿವಿಧ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಬ್ರೋಮೆಲಿನ್ ಎಂಬ ಉತ್ತೇಜಕವಿದೆ, ಇದು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ದೇಹದಲ್ಲಿ ಯೂರಿಕ್ ಆಸಿಡ್ ಹರಳುಗಳು ರೂಪುಗೊಂಡಾಗ ಗೌಟ್ ನೋವು ಪ್ರಾರಂಭವಾಗುತ್ತದೆ. ಈ ಹಣ್ಣನ್ನು ಸೇವಿಸುವುದರಿಂದ ಈ ಹರಳುಗಳನ್ನು ಆರಂಭದಲ್ಲೆ ತದೆದು ಹಾಕಲು ಸಹಾಯ ಮಾಡುತ್ತದೆ.
ಪ್ರತಿದಿನ ಒಂದು ಸೇಬನ್ನು ಸೇವಿಸುವುದರಿಂದ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ವೈದ್ಯರು ಸಲಹೆ ನೀಡುತ್ತಾರೆ. ಏಕೆಂದರೆ, ಸೇಬಿನಲ್ಲಿ ಹಲವಾರು ಆರೋಗ್ಯವನ್ನು ಕಾಪಾಡುವ ಅಂಶಗಳಿವೆ. ಪ್ರತಿದಿನ ನೀವು ಸೇಬನ್ನು ಸೇವಿಸುವುದರಿಂದ ನೀವು ನಿಮ್ಮ ದೇಹದಲ್ಲಿನ ಯೂರಿಕ್ ಆಸಿಡ್ ಅಂಶವನ್ನು ಒಡೆದು ಹಾಕಬಹುದು.
ಕಿತ್ತಲೆ ಹಣ್ಣು ಅನೇಕ ಆರೋಗ್ಯ ಪ್ರಯೋಜನೆಗಳನ್ನು ಒಳಗೊಂಡಿದೆ, ಇದು ಸಿಟ್ರಸ್ ಆಸಿಡ್ ಎಂಬ ಅಂಶದಿಂದ ಸಮೃದ್ಧವಾಗಿದ್ದು, ಇದುದೇಹದಲ್ಲಿನ ಯೂರಿಕ್ ಆಸಿಡ್ ಅಂಶವನ್ನು ದೇಹದಿಂದ ತೆಗೆದು ಹಾಕಲು ಸಹಾಯ ಮಾಡುತ್ತದೆ. ಕಿತ್ತಲೆ ಹಣ್ಣು ಅಷ್ಟೆ ಅಲ್ಲ ಕಿವಿ ಹಣ್ಣನ್ನೂ ಕೂಡ ನೀವು ಪವ್ರತಿನಿತ್ಯ ಸೇವಿಸುವುದರಿಂದ ನೀವು ನಿಮ್ಮ ದೇಹದಲ್ಲಿನ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಬಹುದು.
ಬ್ಲೂಬೆರ್ರಿ ಹಣ್ಣುಗಳು ಗಾತ್ರದಲ್ಲಿ ಸಣ್ಣದಾಗಿ ಇರಬಹದು ಆದರೆ, ಇವು ನಮ್ಮ ಆರೋಗ್ಯಕ್ಕೆ ನೀಡುವ ಪ್ರಯೋಜನ ಅಪಾರ. ಈ ಪುಟ್ಟ ಬೆರ್ರಿ ಹಣ್ಣುಗಳಲ್ಲಿ ಆಂಥೋಸಯಾನಿನ್ ಎಂಬ ಅಂಶ ಸಮೃದ್ದವಾಗಿದೆ, ಇದು ದೇಹದಲ್ಲಿನ ಯೂರಿಕ್ ಆಸಿಡ್ ಅಂಶವನ್ನು ಕಡಿಮೆ ಮಾಡಿ ನಿಮ್ಮನ್ನು ಇದರಿಂದ ಆಗುವ ಹೆಚ್ಚು ಆರೋಗ್ಯ ಸಮಸ್ಯೆಗಳಿಂದ ತಪ್ಪಿಸುವಲ್ಲಿ ಸಹಾಯ ಮಾಡುಯತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.