ಇದ್ದಕ್ಕಿದ್ದಂತೆ ಇಳಿದ iPhone 15 Plus ಬೆಲೆ ! ಈಗ ಈ ದರಕ್ಕೆ ಸಿಗುವುದು ದುಬಾರಿ ಫೋನ್

iPhone 15 Plus ಫೋನ್ ಮೇಲೇ ಭಾರೀ ರಿಯಾಯಿತಿ ಸಿಗುತ್ತಿದೆ. ದುಬಾರಿ ಫೋನ್ ಅನ್ನು ಈಗ ಅಗ್ಗದ ಬೆಲೆಗೆ ಖರೀದಿಸಬಹುದಾಗಿದೆ.   

Written by - Ranjitha R K | Last Updated : Oct 23, 2024, 12:08 PM IST
  • ಇಂದಿನಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇಲ್ ಶುರುವಾಗಿದೆ.
  • ಹಲವು ವಸ್ತುಗಳನ್ನು ಈ ಸೇಲ್ ನಲ್ಲಿ ಅಗ್ಗದ ಬೆಲೆಗೆ ಖರೀದಿಸಬಹುದು.
  • ಈ ಸೇಲ್ ನಲ್ಲಿ Apple iPhone 15 Plus ಸಹ ಅಗ್ಗದ ಬೆಲೆಗೆ ಸಿಗುತ್ತಿದೆ
ಇದ್ದಕ್ಕಿದ್ದಂತೆ ಇಳಿದ iPhone 15 Plus ಬೆಲೆ ! ಈಗ ಈ ದರಕ್ಕೆ ಸಿಗುವುದು ದುಬಾರಿ ಫೋನ್  title=

ಬೆಂಗಳೂರು : ಇಂದಿನಿಂದ ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ಸೇಲ್ ಶುರುವಾಗಿದೆ. ಫೋನ್‌, ಲ್ಯಾಪ್‌ಟಾಪ್‌, ಟಿವಿ ಮತ್ತು ಇತರ ಹಲವು ವಸ್ತುಗಳನ್ನು ಈ ಸೇಲ್ ನಲ್ಲಿ ಅಗ್ಗದ ಬೆಲೆಗೆ ಖರೀದಿಸಬಹುದು. ಅನೇಕ ಉತ್ತಮ ಬ್ರಾಂಡ್‌ಗಳ ಫೋನ್‌ಗಳು ಈ ಸೇಲ್ ನಲ್ಲಿ  ಕಡಿಮೆ ಬೆಲೆಗೆ ಲಭ್ಯವಿದೆ.ಈ ಸೇಲ್ ನಲ್ಲಿ Apple iPhone 15 Plus ಸಹ ಅಗ್ಗದ ಬೆಲೆಗೆ ಸಿಗುತ್ತಿದೆ.ಹಳೆಯ ಫೋನ್ ನೀಡುವ ಮೂಲಕ  ರಿಯಾಯಿತಿ ಬೆಲೆಯಲ್ಲಿ ಈ ದುಬಾರಿ ಫೋನ್ ಅನ್ನು ಖರೀದಿಸಬಹುದು. 

iPhone 15 Plus ರಿಯಾಯಿತಿ : 
ಐಫೋನ್ 15 ಪ್ಲಸ್ ಈ ಹಿಂದೆ 89,900 ರೂ. ಆಗಿತ್ತು.ಆದರೆ iPhone 16 ಬಂದಾಗ ಅದರ ಬೆಲೆ 10,000 ರೂಪಾಯಿಗಳಷ್ಟು ಕಡಿಮೆಯಾಯಿತು.ಈಗ ಫ್ಲಿಪ್‌ಕಾರ್ಟ್‌ನಲ್ಲಿ ಸೇಲ್  ನಡೆಯುತ್ತಿದೆ. ಈ ಸೇಲ್ ನಲ್ಲಿ ಐಫೋನ್ ಅನ್ನು 64,999 ರೂ.ಗೆ ಖರೀದಿಸಬಹುದು. ಬ್ಯಾಂಕ್ ಕಾರ್ಡ್ ಬಳಸಿದರೆ, 5,000 ರೂ.ವರೆಗೆ ಹೆಚ್ಚಿನ ರಿಯಾಯಿತಿ ಸಿಗುತ್ತದೆ. 

ಇದನ್ನೂ ಓದಿ : ಹುಷಾರ್! ಈ ಸಂಖ್ಯೆಗಳಿಂದ ಬರುವ ಕಾಲ್ ರಿಸೀವ್ ಮಾಡಿದ್ರೆ ಎರಡೇ ನಿಮಿಷದಲ್ಲಿ ಖಾಲಿಯಾಗುತ್ತೆ ಬ್ಯಾಂಕ್ ಅಕೌಂಟ್!

iPhone 15 Plus ಖರೀದಿಸಿದರೆ, ಬ್ಯಾಂಕ್‌ನಿಂದ 2,800 ರೂ.ವರೆಗೆ ರಿಯಾಯಿತಿ ಪಡೆಯಬಹುದು.SBI ಕಾರ್ಡ್ ಮೂಲಕ ಈ ಫೋನ್ ಅನ್ನು EMI ನಲ್ಲಿ ಖರೀದಿಸಿದರೆ, 10% ಹೆಚ್ಚಿನ ರಿಯಾಯಿತಿ ಸಿಗುತ್ತದೆ. ಇನ್ನು ನಿಮ್ಮ ಹಳೆಯ ಫೋನ್ ಅನ್ನು ನೀಡಿದರೆ  2,000 ವರೆಗೆ ರಿಯಾಯಿತಿ ಸಿಗುತ್ತದೆ. iPhone 15 Plus 128GB ಮತ್ತು 256GB ಸ್ಟೋರೇಜ್ ನೊಂದಿಗೆ ಬರುತ್ತದೆ. 

iPhone 15 Plus ವಿಶೇಷಣಗಳು :
ಐಫೋನ್ 15 ಪ್ಲಸ್ ಉತ್ತಮ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, A16 ಬಯೋನಿಕ್ ಚಿಪ್ ಅನ್ನು ಹೊಂದಿದೆ. ಇದರಲ್ಲಿ 512GB ಡೇಟಾವನ್ನು ಸ್ಟೋರ್ ಮಾಡಬಹುದು. ಈ ಫೋನ್ ಐದು ಬಣ್ಣಗಳಲ್ಲಿ ಬರುತ್ತದೆ. ಇದು iOS 18 ಹೆಸರಿನ ಸಾಫ್ಟ್‌ವೇರ್ ಅನ್ನು ಹೊಂದಿದೆ. ಇದರಲ್ಲಿ ವೈರ್‌ಲೆಸ್ ಮತ್ತು ವೈರ್ಡ್ ಚಾರ್ಜಿಂಗ್ ಎರಡೂ ಲಭ್ಯವಿದೆ.ಎರಡು ಸಿಮ್ ಕಾರ್ಡ್‌ಗಳನ್ನು ಸಹ ಇದರಲ್ಲಿ ಹಾಕಬಹುದು. ಇದು USB ಟೈಪ್ C ಪೋರ್ಟ್ ಅನ್ನು ಹೊಂದಿದ್ದು, Wi-Fi ಸಹ ಲಭ್ಯವಿದೆ. ಹಿಂಭಾಗದಲ್ಲಿ  48 ಮೆಗಾಪಿಕ್ಸೆಲ್‌ಗಳು ಮತ್ತು 12 ಮೆಗಾಪಿಕ್ಸೆಲ್‌ನ ಎರಡು ಕ್ಯಾಮೆರಾಗಳಿವೆ. ಸೆಲ್ಫಿಗಾಗಿ 12 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಕೂಡಾ ಇದೆ.

ಇದನ್ನೂ ಓದಿ : BSNL ನಲ್ಲಿ ಈಗ ಉಚಿತ ವೈಫೈ ರೋಮಿಂಗ್ ಸೌಲಭ್ಯ..! ಉಚಿತ ನೋಂದಣಿಗೆ ಹೀಗೆ ಮಾಡಿ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News