ಬೆಂಗಳೂರು: ಕೊರೋನಾವೈರಸ್ ಪೀಡಿತರ ಚಿಕಿತ್ಸೆಯಲ್ಲಿ ನಿರತರಾಗಿರುವ ಸುಗಂಧ ಎಂಬ ಶುಶ್ರೂಷಕಿಯ ಕರುಣಾಜನಕ ಕಥೆ ಇದು. ವಾಸ್ತವವಾಗಿ ಕೊರೊನಾವೈರಸ್ನಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಯಲ್ಲಿ ನಿರತರಾಗಿರುವ ನರ್ಸ್ ತನ್ನ ಅಳುವ ಮಗುವನ್ನೂ ಭೇಟಿಯಾಗಲಾರದೆ ಇರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗುತ್ತಿರುವ ದೃಶ್ಯದ ತುಣುಕನ್ನು ಗಮನಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yeddyurappa) ನರ್ಸ್ಗೆ ಕರೆ ಮಾಡಿ ಅವರ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು ಧೈರ್ಯ ತುಂಬುವ ಮಾತುಗಳನ್ನಾಡಿದ್ದಾರೆ.
ಮುಖ್ಯಮಂತ್ರಿ ಶ್ರೀ @BSYBJP ಅವರು, ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ #ಕೊರೊನ ವಾರ್ಡ್ನಲ್ಲಿ ಶುಶ್ರೂಷಕಿಯಾಗಿ ಕಾರ್ಯನಿರ್ವಹಿಸುವ ಸಲುವಾಗಿ, 15 ದಿನಗಳಿಂದ ಮನೆಗೆ ಹೋಗಲಾಗದೇ ಮಗುವನ್ನು ನೋಡದೆ ದೂರ ಉಳಿದಿರುವ ಸುನಂದಾ ಅವರಿಗೆ ಧೈರ್ಯ ತುಂಬಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.#ಮನೆಯಲ್ಲೇಇರಿ#KarnatakaFightsCorona pic.twitter.com/daftFgqH1E
— CM of Karnataka (@CMofKarnataka) April 8, 2020
ಕೊರೋನಾ ಸೋಂಕಿತರ ಸಂಖ್ಯೆ 5,734ಕ್ಕೆ, ಸತ್ತವರ ಸಂಖ್ಯೆ 166ಕ್ಕೆ ಏರಿಕೆ:
ದೇಶದಲ್ಲಿ ಕೊರೋನಾ (Coronavirus) ಮಹಾಮಾರಿಯ ಸೋಂಕು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 540 ಜನರಿಗೆ ಕಾಣಿಸಿಕೊಂಡಿದೆ. ಇದರ ಪರಿಣಾಮ ಭಾರತದಲ್ಲಿ ಸೋಂಕಿತರ ಸಂಖ್ಯೆ 5,734ಕ್ಕೆ ಏರಿಕೆಯಾಗಿದೆ. ಇದುವರೆಗೂ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 166ಕ್ಕೆ ಏರಿಕೆಯಾಗಿದೆ. ಈ ಪೈಕಿ 472 ಮಂದಿ ಮಾತ್ರ ಗುಣಮುಖರಾಗಿದ್ದಾರೆ.
ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚು ಅಂದರೆ 1,135 ಮಂದಿಗೆ ಕೊರೋನಾ ಸೋಕು ತಗುಲಿದೆ. ನಂತರದ ಸ್ಥಾನದಲ್ಲಿ ತಮಿಳುನಾಡು- 738, ದೆಹಲಿ- 669, ತೆಲಂಗಾಣ- 427, ರಾಜಸ್ಥಾನ- 381, ಉತ್ತರ ಪ್ರದೇಶ- 361, ಆಂಧ್ರ ಪ್ರದೇಶ- 348, ಕೇರಳ- 345, ಮಧ್ಯಪ್ರದೇಶ- 229, ಕರ್ನಾಟಕ- 181, ಗುಜರಾತ್- 179, ಜಮ್ಮು ಮತ್ತು ಕಾಶ್ಮೀರ- 158, ಹರಿಯಾಣ- 147, ಪಶ್ಚಿಮ ಬಂಗಾಳ- 103, ಪಂಜಾಬ್- 101, ಒಡಿಶಾ- 42, ಬಿಹಾರ್- 38, ಉತ್ತರಾಖಂಡ- 33, ಅಸ್ಸಾಂ- 28, ಚಂಡೀಗಢ- 18, ಹಿಮಾಚಲ ಪ್ರದೇಶ 18 ಲಡಾಖ್- 14, ಅಂಡಮಾನ್- ನಿಕೋಬಾರ್ ದ್ವೀಪ- 11, ಛತ್ತೀಸಗಡ- 10, ಗೋವಾ- 7, ಪುದುಚೆರಿ- 5, ಜಾರ್ಖಂಡ್- 4, ಮಣಿಪುರ- 1, ತ್ರಿಪುರ-1, ಮಿಜೋರಾಮ್-1 ಮತ್ತು ಅರುಣಾಚಲ ಪ್ರದೇಶದಲ್ಲಿ 1 Covid-19 ಸೋಂಕು ಪ್ರಕರಣಗಳು ವರದಿಯಾಗಿವೆ.