ಕನಿಷ್ಠ ವೇತನ ಮಿತಿಯಲ್ಲಿ ಹೆಚ್ಚಳ : ಸರ್ಕಾರದ ನಿರ್ಧಾರದಿಂದ ಖಾಸಗಿ ವಲಯದ ಉದ್ಯೋಗಿಗಳು ಕೂಡಾ ಫುಲ್ ಖುಷ್

EPFO ​​ಅಡಿಯಲ್ಲಿ, ದೇಶಾದ್ಯಂತ ಉದ್ಯೋಗಿಗಳ ಕನಿಷ್ಠ ವೇತನವನ್ನು 21,000 ರೂ.ಗೆ ಹೆಚ್ಚಿಸಲಾಗಿದೆ. ನಿವೃತ್ತಿಯ ಸಮಯದಲ್ಲಿ ಈ ಪ್ರಯೋಜನವು ಲಭ್ಯವಿರುತ್ತದೆ.

Written by - Ranjitha R K | Last Updated : Nov 15, 2024, 11:32 AM IST
  • ನೌಕರರ ಸಂಘಟನೆಗಳು ವೇತನ ಮಿತಿ ಹೆಚ್ಚಳಕ್ಕೆ ಆಗ್ರಹ
  • ಶೀಘ್ರದಲ್ಲೇ ಇಪಿಎಫ್‌ಒ ಅಡಿಯಲ್ಲಿ ನೌಕರರ ಕನಿಷ್ಠ ವೇತನ ಹೆಚ್ಚಳ
  • 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸುವ ಬಗ್ಗೆ ಚಿಂತನೆ
ಕನಿಷ್ಠ ವೇತನ ಮಿತಿಯಲ್ಲಿ ಹೆಚ್ಚಳ : ಸರ್ಕಾರದ ನಿರ್ಧಾರದಿಂದ ಖಾಸಗಿ ವಲಯದ ಉದ್ಯೋಗಿಗಳು ಕೂಡಾ ಫುಲ್ ಖುಷ್ title=

EPFO Wage Ceiling Hike : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಶೀಘ್ರದಲ್ಲೇ ಇಪಿಎಫ್‌ಒ ಅಡಿಯಲ್ಲಿ ನೌಕರರ ಕನಿಷ್ಠ ವೇತನವನ್ನು 15,000 ರೂ.ನಿಂದ 21,000 ರೂ.ಗೆ ಹೆಚ್ಚಿಸುವ ಬಗ್ಗೆ ಯೋಜಿಸುತ್ತಿದೆ. ಕೆಲವು ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಈ ವೇತನ ಮಿತಿಯನ್ನು 6,500ರಿಂದ ರೂ.15,000ಕ್ಕೆ ಏರಿಸಿತ್ತು. 

15,000 ವೇತನ ಮಿತಿಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕೆಲವು ನೌಕರರು ಮತ್ತು ನೌಕರರ ಸಂಘಟನೆಗಳು ವೇತನ ಮಿತಿಯನ್ನು 25,000 ರೂ.ಗೆ ಏರಿಸುವಂತೆ ಒತ್ತಾಯಿಸುತ್ತಿವೆ. ಈ ನಿಟ್ಟಿನಲ್ಲಿ ಸರ್ಕಾರ ಕನಿಷ್ಠ ವೇತನ ಮಿತಿಯಲ್ಲಿ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸುತ್ತಿದೆ. 

ಇದನ್ನೂ ಓದಿ : ಇದು ಪ್ರಪಂಚದಲ್ಲೇ ಅತ್ಯಂತ ದುಬಾರಿ ಎಮ್ಮೆ; ಅಷ್ಟು ದುಡ್ಡಿಗೆ ಬೆಂಗಳೂರಿನ ಒಳ್ಳೆ ಏರಿಯಾದಲ್ಲಿ ಮನೆ ಅಥವಾ ಫಾರಂ ಔಸ್ ಸಿಗುತ್ತೆ!

ಇಪಿಎಫ್‌ಒಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತೊಂದು ದೊಡ್ಡ ಘೋಷಣೆ ಮಾಡುವ ಸಾಧ್ಯತೆಯಿದೆ. ಇಪಿಎಫ್‌ಒಗೆ ಸೇರಲು ಕಂಪನಿಗಳಿಗೆ ಕನಿಷ್ಠ ಸಂಖ್ಯೆಯ ಉದ್ಯೋಗಿಗಳನ್ನು ಕಡಿಮೆ ಮಾಡುವ ಬಗ್ಗೆ ಇಪಿಎಫ್‌ಒ ನಿರ್ಧಾರ ತೆಗೆದುಕೊಳ್ಳಬಹುದು. ಸದ್ಯ ಇಪಿಎಫ್‌ಒಗೆ ಸೇರಬೇಕಾದರೆ ಕಂಪನಿಯಲ್ಲಿ 20ರಷ್ಟು ಉದ್ಯೋಗಿಗಳು ಇರಬೇಕು ಎನ್ನುವ ನಿಯಮವಿದೆ. ಆದರೆ ಈ ಮಿತಿಯನ್ನು ಕೂಡಾ ಸರ್ಕಾರ 10ರಿಂದ 15ಕ್ಕೆ ಇಳಿಸುವ ಸಾಧ್ಯತೆ ಇದೆ. ಇದರೊಂದಿಗೆ ಸಣ್ಣ ಕಂಪನಿಗಳು ಕೂಡಾ ಈಗ EPFO​​ಗೆ ಸೇರಬಹುದು.

EPFO ಅಡಿಯಲ್ಲಿ ದೇಶಾದ್ಯಂತ ಉದ್ಯೋಗಿಗಳ ಕನಿಷ್ಠ ವೇತನದ ಮಿತಿಯನ್ನು 21,000 ರೂ.ಗೆ ಬದಲಾಯಿಸಿದರೆ, ಈ ಪ್ರಯೋಜನವು ನಿವೃತ್ತಿಯ ನಂತರವೂ  ಲಭ್ಯವಿರುತ್ತದೆ. ಇದು ಪಿಂಚಣಿ ಮತ್ತು ಇಪಿಎಫ್ ಮೊತ್ತದ ಮೇಲೆ ನೇರ ಪರಿಣಾಮ ಬೀರುತ್ತದೆ. ಇಪಿಎಫ್ ಚಂದಾದಾರರ ಕೊಡುಗೆಯೂ ಹೆಚ್ಚಾಗುತ್ತದೆ.

ವೇತನ ಮಿತಿ ಹೆಚ್ಚಾದರೆ ಇಪಿಎಫ್ ಕೊಡುಗೆ ಹೆಚ್ಚಾಗುತ್ತದೆ :
- ಉದ್ಯೋಗಿಗಳ ಭವಿಷ್ಯ ನಿಧಿ ಅಡಿಯಲ್ಲಿ ಕನಿಷ್ಠ ವೇತನ ಮಿತಿಯನ್ನು ಕಳೆದ ವರ್ಷ 2014 ರಲ್ಲಿ ಬದಲಾಯಿಸಲಾಗಿದೆ. 
- ನಂತರ ಕನಿಷ್ಠ ವೇತನ ಮಿತಿಯನ್ನು.6,500 ರಿಂದ 15,000 ಕ್ಕೆ ಏರಿಸಲಾಯಿತು. 
- ಆದರೆ, ಕಳೆದ 10 ವರ್ಷಗಳಿಂದ ಈ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
- ಮಾಧ್ಯಮ ವರದಿಗಳ ಪ್ರಕಾರ, ಪ್ರಸ್ತುತ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ, ಈ ನಿಟ್ಟಿನಲ್ಲಿ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ.
- ಕನಿಷ್ಠ ವೇತನ ಮಿತಿಯನ್ನು ಹೆಚ್ಚಿಸುವ ಅವಶ್ಯಕತೆಯಿದೆ ಎನ್ನುವುದನ್ನು  ಸರ್ಕಾರವೂ ಒಪ್ಪಿಕೊಳ್ಳುತ್ತದೆ. 

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

- ನೌಕರರ ಭವಿಷ್ಯ ನಿಧಿಗಾಗಿ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲು ಸರ್ಕಾರ ಯೋಜಿಸುತ್ತಿದೆ.
- ವೇತನ ಮಿತಿಯನ್ನು 15,000 ರಿಂದ 21,000 ಕ್ಕೆ ಏರಿಸಿದರೆ, ಖಾಸಗಿ ವಲಯದ ಉದ್ಯೋಗಿಗಳ ಪಿಂಚಣಿ ಮತ್ತು ಇಪಿಎಫ್ ಕೊಡುಗೆ ಹೆಚ್ಚಾಗುತ್ತದೆ.
- ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದರೆ, ಪಿಂಚಣಿ ಮೊತ್ತವನ್ನು ಹೆಚ್ಚಿಸಲಾಗುವುದು. 
- ಹೀಗಾಗಿ, ನೌಕರರು ನಿವೃತ್ತಿಯ ನಂತರ ಹೆಚ್ಚಿನ ಮೊತ್ತವನ್ನು ಪಡೆಯುತ್ತಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News