ರೈತರಿಗೆ ಗುಡ್ ನ್ಯೂಸ್: ಬೆಳೆ ಸಾಲ ತೆಗೆದುಕೊಂಡಿರುವ ರೈತರಿಗೆ ಪರಿಹಾರ

ಕೇಂದ್ರೀಯ ಬ್ಯಾಂಕ್ ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ ಅಲ್ಪಾವಧಿಯ ಬೆಳೆ ಸಾಲ ಬಡ್ಡಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಎರಡು ಶೇಕಡಾ (2%) ವಿನಾಯಿತಿ ಮತ್ತು ಪಿಆರ್‌ಐಗೆ ಮೂರು ಪ್ರತಿಶತದಷ್ಟು (3%) ಪ್ರೋತ್ಸಾಹವನ್ನು ಮುಂದುವರಿಸಲು ರೈತರಿಗೆ ಸೂಚಿಸಲಾಗಿದೆ.

Last Updated : Apr 23, 2020, 10:35 AM IST
ರೈತರಿಗೆ ಗುಡ್ ನ್ಯೂಸ್: ಬೆಳೆ ಸಾಲ ತೆಗೆದುಕೊಂಡಿರುವ ರೈತರಿಗೆ ಪರಿಹಾರ title=

ನವದೆಹಲಿ: ದೇಶವು ಪ್ರಸ್ತುತ ಕೊರೊನಾವೈರಸ್ (Coronavirus)  ಸಾಂಕ್ರಾಮಿಕ ಕೋವಿಡ್ 19 ಜೊತೆಗೆ ಹೋರಾಡುತ್ತಿದೆ. ಕರೋನಾ ಮಹಾಮಾರಿಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಸರ್ಕಾರವು ಮೇ 3ರವರೆಗೆ ರಾಷ್ಟ್ರವ್ಯಾಪಿ  ಲಾಕ್‌ಡೌನ್ (Lockdown)  ಘೋಷಿಸಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಪರಿಹಾರ ನೀಡಲು ಸರ್ಕಾರ ದೊಡ್ಡ ಹೆಜ್ಜೆ ಇಟ್ಟಿದ್ದು ಬೆಳೆ ಸಾಲ (Crop loan) ಕ್ಕೆ ಎರಡು ಶೇಕಡಾ (2%) ರಿಯಾಯಿತಿ ನೀಡಲು ಮುಂದಾಗಿದೆ. 

ಬೆಳೆ ಸಾಲ ತೆಗೆದುಕೊಳ್ಳುವ  ರೈತರಿಗೆ (Farmers ಭಾರತೀಯ ರಿಸರ್ವ್ ಬ್ಯಾಂಕ್ ದೊಡ್ಡ ಪರಿಹಾರ ನೀಡಿದ್ದು ಅಂತಹ ಸಾಲಗಳಿಗೆ ಆರ್‌ಬಿಐ ಮೂರು ತಿಂಗಳ ನಿಷೇಧ ಹೇರಿದೆ. ಇದು ರೈತರಿಗೆ ಪರಿಹಾರ ನೀಡುತ್ತದೆ. ಈ ಪ್ರೋತ್ಸಾಹಕ ಯೋಜನೆಯನ್ನು 2020 ರ ಮೇ 31 ರವರೆಗೆ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಂಗಳವಾರ ಮಾಹಿತಿ ನೀಡಿದೆ.

* ಕೃಷಿಗಾಗಿ ನೀಡಲಾದ ಸಾಲಗಳ ಮೇಲೆ ರಿಯಾಯಿತಿ:
ಬೆಳೆ ಸಾಲ ಸೇರಿದಂತೆ ಎಲ್ಲಾ ಟರ್ಮ್ ಸಾಲಗಳ ಮಾಸಿಕ ಕಂತಿನ ಪಾವತಿಯ ಮೇಲೆ ಕೇಂದ್ರ ಬ್ಯಾಂಕ್ 2020ರ ಮಾರ್ಚ್ 27ರ ಸುತ್ತೋಲೆಯ ಮೂಲಕ ಮೂರು ತಿಂಗಳ ನಿಷೇಧ ಸೌಲಭ್ಯವನ್ನು ನೀಡಿದೆ. ಕರೋನವೈರಸ್ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಮಾರ್ಚ್ 25 ರಿಂದ ದೇಶಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದೆ ಮತ್ತು ಇದು ಮೇ 3, 2020 ರವರೆಗೆ ಮುಂದುವರಿಯುತ್ತದೆ. ಆದಾಗ್ಯೂ ಈ ಅವಧಿಯಲ್ಲಿ ಸರ್ಕಾರವು ಕೃಷಿ ಚಟುವಟಿಕೆಗಳಿಗೆ ವಿನಾಯಿತಿ ಘೋಷಿಸಿದೆ.

* ಈ ದರದಲ್ಲಿ ಈ ಬೆಳೆಗೆ ಸಾಲ ಲಭ್ಯ:
ಕೇಂದ್ರೀಯ ಬ್ಯಾಂಕ್ ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ ಅಲ್ಪಾವಧಿಯ ಬೆಳೆ ಸಾಲ ಬಡ್ಡಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಎರಡು ಶೇಕಡಾ (2%) ವಿನಾಯಿತಿ ಮತ್ತು ಪಿಆರ್‌ಐಗೆ ಮೂರು ಪ್ರತಿಶತದಷ್ಟು (3%) ಪ್ರೋತ್ಸಾಹವನ್ನು ಮುಂದುವರಿಸಲು ರೈತರಿಗೆ ಸೂಚಿಸಲಾಗಿದೆ. ಈ ಹಂತದಿಂದ ರೈತರು ಈ ಎರಡೂ ಯೋಜನೆಗಳ ಲಾಭವನ್ನು ಮೇ ಅಂತ್ಯದವರೆಗೆ ಪಡೆಯುತ್ತಾರೆ. ರೈತರಿಗೆ ವಾರ್ಷಿಕ ಏಳು ಶೇಕಡಾ ದರದಲ್ಲಿ ಮೂರು ಲಕ್ಷ ರೂಪಾಯಿಗಳ ಅಲ್ಪಾವಧಿಯ ಬೆಳೆ ಸಾಲವನ್ನು ನೀಡಲು ಸರ್ಕಾರ ಎರಡು ಶೇಕಡಾ ದರದಲ್ಲಿ ಬ್ಯಾಂಕುಗಳಿಗೆ ಬಡ್ಡಿ ಸಬ್ವೆನ್ಷನ್ ನೀಡುತ್ತದೆ.

* ರೈತರ ಖಾತೆಗೆ ಹಣ:
ಕರೋನವೈರಸ್ ಕಾರಣದಿಂದಾಗಿ ನಡೆಯುತ್ತಿರುವ ಲಾಕ್ ಡೌನ್ ಮಧ್ಯೆ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಾದ ಪಿಎಂ-ಕಿಸಾನ್ ಯೋಜನೆ (PM Kisan Yojana)  ಯಿಂದ ಸುಮಾರು 8.89 ಕೋಟಿ ಲಾಭ ಪಡೆದ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಲ್ಲಿ ಇದುವರೆಗೆ 17,793 ಕೋಟಿ ರೂ. ಜಮಾ ಮಾಡಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಈ ಮಾಹಿತಿಯನ್ನು ನೀಡಿದೆ.

* ಕೃಷಿ ಉದ್ಯಮಕ್ಕೆ ವಿನಾಯಿತಿ:
ದೇಶದ ಒಟ್ಟು ಜಿಡಿಪಿಯಲ್ಲಿ ಶೇಕಡಾ 34.64 ರಷ್ಟು ಕೃಷಿ ವಲಯದ ಕೊಡುಗೆ ಇದೆ. ಅಂತಹ ಪರಿಸ್ಥಿತಿಯಲ್ಲಿ ಕೃಷಿ ಮತ್ತು ಸಂಬಂಧಿತ ಕೈಗಾರಿಕೆಗಳಿಗೆ ದೊಡ್ಡ ಪ್ರಮಾಣದಲ್ಲಿ ಲಾಕ್‌ಡೌನ್‌ನಿಂದ ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಕೈಗಾರಿಕೆಗಳಲ್ಲಿ ಆಹಾರ ಸಂಸ್ಕರಣೆ ಉದ್ಯಮ, ಕೋಲ್ಡ್ ಸ್ಟೋರೇಜ್, ಗೋದಾಮಿನ ಸೇವೆ, ಮೀನು ಮಾರಾಟ, ಸಂಸ್ಕರಣೆ, ಪ್ಯಾಕೇಜಿಂಗ್, ಮಾರ್ಕೆಟಿಂಗ್, ವಾಣಿಜ್ಯ ಅಕ್ವೇರಿಯಂಗಳು, ಮೀನು ಉತ್ಪನ್ನಗಳು, ಮೀನು ಬೀಜ, ಚಹಾ, ಕಾಫಿ, ರಬ್ಬರ್, ಗೋಡಂಬಿ ಸಂಸ್ಕರಣೆ, ಪ್ಯಾಕೇಜಿಂಗ್, ಹಾಲು ಸಂಗ್ರಹಣೆ, ಸಂಸ್ಕರಣೆ, ಮೆಕ್ಕೆಜೋಳದ ಉತ್ಪಾದನೆ ಮತ್ತು ವಿತರಣೆ ಸೇರಿವೆ.

Trending News