ಭಾರತದಲ್ಲಿ ಸ್ಟ್ರಾಂಗೆಸ್ಟ್ ಸಿಎಂ‌ ಇದ್ದರೇ ಅದು ಸಿದ್ದರಾಮಯ್ಯ ಮಾತ್ರ: ಸಾಹಿತಿ ಕುಂ.ವೀರಭದ್ರಪ್ಪ

Kum. Veerabhadrappa: 14 ಸೈಟ್ ವಿವಾದ ಆಗಿರುವುದು ತಾಂತ್ರಿಕ ಕಾರಣದಿಂದ,  ಸೈಟ್ ಹಿಂತಿರುಗಿಸಿದ ಬಳಿಕ ಬಾಯಿ ಮುಚ್ಚಿಕೊಂಡು ಇರಬೇಕಲ್ವಾ! ಅನಾವಶ್ಯಕವಾಗಿ, ಕಾರಣ ಇಲ್ಲದೇ ಸಿದ್ದರಾಮಯ್ಯ ಪದಚ್ಯುತಗೊಳಿಸಲು ನಡೆಸಿರುವ ಸಂಚಿದು ಎಂದು ಸಾಹಿತಿ ಕುಂ.ವೀರಭದ್ರಪ್ಪ ಆರೋಪಿಸಿದರು.

Written by - Puttaraj K Alur | Last Updated : Nov 19, 2024, 11:33 PM IST
  • ಮುಡಾ ಪ್ರಕರಣದಲ್ಲಿ ಆಗಿರುವುದು ತಾಂತ್ರಿಕ ನ್ಯೂನತೆ ಎಲ್ಲಾ ರಾಜಕಾರಣಿಗಳು ಸೈಟ್ ಮಾಡಿದ್ದಾರೆ
  • ಅನಾವಶ್ಯಕವಾಗಿ, ಕಾರಣವಿಲ್ಲದೇ ಸಿದ್ದರಾಮಯ್ಯರನ್ನ ಪದಚ್ಯುತಗೊಳಿಸಲು ನಡೆಸಿರುವ ಸಂಚಿದು
  • ಸೈಟ್ ಹಿಂತಿರುಗಿಸಿದ ಬಳಿಕ ಬಾಯಿ ಮುಚ್ಚಿಕೊಂಡು ಇರಬೇಕಲ್ವಾ! ಎಂದ ಸಾಹಿತಿ ಕುಂ.ವೀರಭದ್ರಪ್ಪ
ಭಾರತದಲ್ಲಿ ಸ್ಟ್ರಾಂಗೆಸ್ಟ್ ಸಿಎಂ‌ ಇದ್ದರೇ ಅದು ಸಿದ್ದರಾಮಯ್ಯ ಮಾತ್ರ: ಸಾಹಿತಿ ಕುಂ.ವೀರಭದ್ರಪ್ಪ title=
ಎಲ್ಲಾ ರಾಜಕಾರಣಿಗಳು ಸೈಟ್ ಮಾಡಿದ್ದಾರೆ

ಚಾಮರಾಜನಗರ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಬಿಜೆಪಿ ಆಪಾದನೆ ಮಾಡಿಕೊಂಡೇ ಬರುತ್ತಿದೆ, ಸಿಎಂ ಸಿದ್ದರಾಮಯ್ಯರನ್ನ ಇಳಿಸಿ ಅಂತಾ ಪ್ರತಿಭಟನೆ ಮಾಡುತ್ತಾರೆ. ಯಾವ ಕಾರಣಕ್ಕೆ ಸಿದ್ದರಾಮಯ್ಯರನ್ನ ಇಳಿಸುತ್ತೀರಿ ಎಂದು ಖ್ಯಾತ ಸಾಹಿತಿ ಕುಂ.ವೀರಭದ್ರಪ್ಪ ಪ್ರಶ್ನಿಸಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕಕ್ಕೆ ಸಿದ್ದರಾಮಯ್ಯನವರು ಈ ಸಂದರ್ಭದ ಸೂಕ್ತ ಮುಖ್ಯಮಂತ್ರಿ. ಕಾಂಗ್ರೆಸ್ ಉಳಿದಿದೆ ಎಂದರೇ ಅದಕ್ಕೆ ಸಿದ್ದರಾಮಯ್ಯನೇ ಕಾರಣ, ಭಾರತದಲ್ಲಿ ಯಾರಾದರೂ ಸ್ಟ್ರಾಂಗೆಸ್ಟ್ ಸಿಎಂ‌ ಇದ್ದರೇ ಅದು ಸಿದ್ದರಾಮಯ್ಯ ಮಾತ್ರ ಅಂತಾ ಹೇಳಿದರು.  

ಇದನ್ನೂ ಓದಿ: ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ 50 ಕೋಟಿ ಆಫರ್, ನನ್ನನ್ನು ಯಾರೂ ಸಂಪರ್ಕಿಸಿಲ್ಲ: ಶಾಸಕ ಎ.ಆರ್.ಕೃಷ್ಣಮೂರ್ತಿ

ಮುಡಾ ಪ್ರಕರಣದಲ್ಲಿ ಆಗಿರುವುದು ತಾಂತ್ರಿಕ ನ್ಯೂನತೆ. ಎಲ್ಲಾ ರಾಜಕಾರಣಿಗಳು ಸೈಟ್ ಮಾಡಿದ್ದಾರೆ, ‌ರಾಜಕಾರಣಿಗಳು ಸಂಬಂಧಿಕರ ಹೆಸರಲ್ಲಿ ಸೈಟ್ ಮಾಡಿದ್ದಾರೆ, 14 ಸೈಟ್ ವಿವಾದ ಆಗಿರುವುದು ತಾಂತ್ರಿಕ ಕಾರಣದಿಂದ,  ಸೈಟ್ ಹಿಂತಿರುಗಿಸಿದ ಬಳಿಕ ಬಾಯಿ ಮುಚ್ಚಿಕೊಂಡು ಇರಬೇಕಲ್ವಾ! ಅನಾವಶ್ಯಕವಾಗಿ, ಕಾರಣ ಇಲ್ಲದೇ ಸಿದ್ದರಾಮಯ್ಯ ಪದಚ್ಯುತಗೊಳಿಸಲು ನಡೆಸಿರುವ ಸಂಚಿದು ಎಂದು ಅವರು ಆರೋಪಿಸಿದರು.

ಇನ್ನು ಕಸಾಪ ಸಮ್ಮೇಳನದ ಅಧ್ಯಕ್ಷತೆ ಕುರಿತು ಮಾತನಾಡಿದ ಅವರು, ʼಮತೀಯ ಶಕ್ತಿ ಬೆಂಬಲದಿಂದ ಅಧಿಕಾರ ಪಡೆದಿರುವ ಮಹೇಶ್ ಜೋಷಿ ಕಾಲಿಟ್ಟ ಕ್ಷಣದಿಂದ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕಸಾಪದಲ್ಲಿ ಈಗ ಡೆಮೊಕ್ರಾಸಿ ಇಲ್ಲ. ಜಿಲ್ಲಾಧ್ಯಕ್ಷ, ತಾಲೂಕು ಅಧ್ಯಕ್ಷರಿಗೆ ಸ್ವಾತಂತ್ರ್ಯ ಇಲ್ಲದಂತಾಗಿದೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ರಾಯಚೂರಿನಲ್ಲಿ ವಾಹನಗಳ ಮೇಲೆ ಕಲ್ಲು ತೂರಿ ದರೋಡೆಗೆ ಯತ್ನ!

ಸಾಹಿತೇತರ ಶಕ್ತಿಗಳು, ಮತಿಯ ಶಕ್ತಿಗಳು ಮಂಡ್ಯ ಸಮ್ಮೇಳನಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಸಾಹಿತೇತರನ್ನು‌ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಬೇಕು ಎಂಬುದು ಅಪ್ರಬುದ್ಧ ನಿಲುವು. ಯಾವ ಕಾರಣಕ್ಕೂ ಸಾಹಿತ್ಯೇತರು ಸಮ್ಮೇಳನದ ಅಧ್ಯಕ್ಷರಾಗಬಾರದು, ಸಾಹಿತಿಗಳಿಗೆ ಪ್ರಾಧ್ಯಾನತೆ ಕೊಡಬೇಕು. ಅದು ಕನ್ನಡ ಪರಿಷತ್ ಅಲ್ಲ- ಕನ್ನಡ ಸಾಹಿತ್ಯ ಪರಿಷತ್. ಸಾಹಿತ್ಯ ಲೋಕದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರು ಅಧ್ಯಕ್ಷರಾಗಬೇಕು ಎಂದು ಇದೇ ವೇಳೆ ಅವರು ಆಗ್ರಹಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News