ಪಿಂಚಣಿದಾರರಿಗೆ ಸರ್ಕಾರದ ಅಲರ್ಟ್ !ಈ ಅಪ್ಡೇಟ್ ತಿಳಿದುಕೊಳ್ಳದಿದ್ದಲ್ಲಿ ಆಗುವುದು ಭಾರೀ ನಷ್ಟ !

ಯುಪಿಎಸ್ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯಾಗಿರುವುದರಿಂದ ಅನೇಕರಿಗೆ ಇದರ ಬಗ್ಗೆ ನಾನಾ ಅನುಮಾನ, ಪ್ರಶ್ನೆಗಳು ಮೂಡುವುದು ಸಹಜ.ಇದನ್ನೇ ಆನ್‌ಲೈನ್ ವಂಚಕರು ತಮ್ಮ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ.   

Written by - Ranjitha R K | Last Updated : Nov 29, 2024, 11:33 AM IST
  • ಪಿಂಚಣಿದಾರರಿಗೆ ಕಾಲಕಾಲಕ್ಕೆ ಸಿಗುತ್ತದೆ ಅಪ್ಡೇಟ್
  • ಪಿಂಚಣಿದಾರರಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ಸರ್ಕಾರದ ಕ್ರಮ
  • ಏಕೀಕೃತ ಪಿಂಚಣಿ ಯೋಜನೆ ಪರಿಚಯ
ಪಿಂಚಣಿದಾರರಿಗೆ ಸರ್ಕಾರದ ಅಲರ್ಟ್ !ಈ ಅಪ್ಡೇಟ್ ತಿಳಿದುಕೊಳ್ಳದಿದ್ದಲ್ಲಿ ಆಗುವುದು ಭಾರೀ ನಷ್ಟ ! title=

ಕೇಂದ್ರ ಸರ್ಕಾರವು ಪಿಂಚಣಿದಾರರಿಗೆ ಕಾಲಕಾಲಕ್ಕೆ ಅಪ್ಡೇಟ್ ಗಳನ್ನು ನೀಡುತ್ತಾ ಇರುತ್ತದೆ. ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಿಸಲು ಮತ್ತು ಪಿಂಚಣಿದಾರರಿಗೆ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. 

ಏಕೀಕೃತ ಪಿಂಚಣಿ ಯೋಜನೆ :
ಆಗಸ್ಟ್‌ನಲ್ಲಿ, ಸರ್ಕಾರವು ಹೊಸ ಪಿಂಚಣಿ ಯೋಜನೆ, ಏಕೀಕೃತ ಪಿಂಚಣಿ ಯೋಜನೆಯನ್ನು (ಯುಪಿಎಸ್) ಪರಿಚಯಿಸಿತು. ಅಂದಿನಿಂದ ಡಿಜಿಟಲ್ ಅಪರಾಧಿಗಳು ಅದನ್ನೇ ತಮ್ಮ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಯುಪಿಎಸ್ ಹೊಸದಾಗಿ ಜಾರಿಗೆ ತಂದಿರುವ ಯೋಜನೆಯಾಗಿರುವುದರಿಂದ ಅನೇಕರಿಗೆ ಇದರ ಬಗ್ಗೆ ನಾನಾ ಅನುಮಾನ, ಪ್ರಶ್ನೆಗಳು ಮೂಡುವುದು ಸಹಜ.ಇದನ್ನೇ ಆನ್‌ಲೈನ್ ವಂಚಕರು ತಮ್ಮ ದಾಳವಾಗಿ ಬಳಸಿಕೊಳ್ಳುತ್ತಿದ್ದಾರೆ. 

ಇದನ್ನೂ ಓದಿ :  ಸರ್ಕಾರಿ ನೌಕರರಿಗೆ ಹೊಸ ವರ್ಷದಲ್ಲಿ ಡಬಲ್ ಜಾಕ್‌ಪಾಟ್ !ಮೂಲ ವೇತನದಲ್ಲಿಯೇ ಆಗುವುದು ಭಾರೀ ಏರಿಕೆ !ಎಷ್ಟಾಗುವುದು ಹೆಚ್ಚಳ ಇಲ್ಲಿದೆ ಲೆಕ್ಕಾಚಾರ

ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಅನೇಕ ಜನರು ಅನೇಕ ನಕಲಿ ಫೋನ್ ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ಹೀಗೆ ನಕಲಿ ಕರೆಗಳನ್ನು ಮಾಡಿ ಖಾತೆ ವಿವರಗಳನ್ನು ಹಂಚಿಕೊಳ್ಳುವಂತೆ ಒತ್ತಡ ಹೇರಲಾಗುತ್ತಿದೆ.  

ವಂಚಕರು ಪಿಪಿಒ ಸಂಖ್ಯೆ, ಜನ್ಮ ದಿನಾಂಕ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕೇಳುತ್ತಾರೆ.ಆತಂಕಕ್ಕೊಳಗಾದ ಪಿಂಚಣಿದಾರರು ಕೆಲವೊಮ್ಮೆ ಈ ನಕಲಿ ಕರೆಗಳನ್ನು ಅಸಲಿ ಎಂದು ನಂಬಿ ತಮ್ಮ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುತ್ತಾರೆ. 

ಸರ್ಕಾರದಿಂದ ಎಚ್ಚರಿಕೆ : 
ಪಿಂಚಣಿದಾರರು ತಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಸರ್ಕಾರ ಕೇಳಿಕೊಂಡಿದೆ. ಒಂದು ವೇಳೆ ತಮ್ಮ ಮಾಹಿತಿಯನ್ನು ಶೇರ್ ಮಾಡಿದರೆ ಒಂದೇ ಸೆಕೆಂಡಿನಲ್ಲಿ ಖಾತೆಯಲ್ಲಿರುವ ಸಂಪೂರ್ಣ ಹಣ ಖಾಲಿಯಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಹೇಳಿದೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ವಂಚಕರು ಮಾಹಿತಿ ನೀಡದಿದ್ದಲ್ಲಿ ಡಿಸೆಂಬರ್ 1ರೊಳಗೆ ಪಿಂಚಣಿ ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಇಂಥಹ ಬೆದರಿಕೆಗಳಿಗೆ ಹೆದರುವ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ.

ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 

ಕೇಂದ್ರ ಪಿಂಚಣಿ ಖಾತೆಗಳ ಕಚೇರಿಯಿಂದ ಸಲಹೆ :
ನಕಲಿ ಕರೆಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಕೇಂದ್ರ ಪಿಂಚಣಿ ಖಾತೆಗಳ ಕಚೇರಿಯ ಗಮನಕ್ಕೆ ಬಂದಿದೆ. ಏಕೆಂದರೆ ಹಣಕಾಸು ಸಚಿವಾಲಯದ ಅಧೀನದಲ್ಲಿರುವ ಕೇಂದ್ರ ಪಿಂಚಣಿ ಖಾತೆಗಳ ಕಚೇರಿಯ ಅಧಿಕಾರಿಯಂತೆ ನಟಿಸಿ ವಂಚಕರು ಕರೆ ಮಾಡುತ್ತಿದ್ದಾರೆ. ಅದರಲ್ಲಿ, 'ವಂಚಕರು ಪಿಂಚಣಿದಾರರಿಗೆ ವಾಟ್ಸಾಪ್, ಇಮೇಲ್ ಮತ್ತು ಎಸ್‌ಎಂಎಸ್ ಮೂಲಕ ಅರ್ಜಿಗಳನ್ನು ಭರ್ತಿ ಮಾಡುವಂತೆ ಕೇಳುತ್ತಾರೆ. ಈ ಫಾರ್ಮ್ ಅನ್ನು ಭರ್ತಿ ಮಾಡದಿದ್ದರೆ ಮುಂದಿನ ತಿಂಗಳಿನಿಂದ ಪಿಂಚಣಿ ನಿಲ್ಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಆದರೆ, ಇಂಥಹ ಮೋಸದ ಜಾಲಕ್ಕೆ ಬೀಳದಂತೆ ಸರ್ಕಾರ ಪಿಂಚಣಿದಾರರನ್ನು ಎಚ್ಚರಿಸಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News