ಇಂಜಿನಿಯರಿಂಗ್‌ ಸೀಟು ಹಂಚಿಕೆಯ ಹಗರಣ..! ಎಂಟು ಮಂದಿಯನ್ನು ಬಂಧಿಸಿದ ಪೊಲೀಸರು..?

ವಿವಿಧ ಪದವಿಪೂರ್ವ ಇಂಜಿನಿಯರಿಂಗ್‌ ಕೋರ್ಸ್ ಗಳಿಗೆ  ಸೀಟು ಹಂಚಿಕೆಯ ಹಗರಣದ ಪ್ರಕರಣದಲ್ಲಿ ಪೋಲಿಸರು ಎಂಟು ಮದಿ ಆರೋಪಿಗಳನ್ನು ಬಂದಿಸಿದ್ದಾರೆ.

Last Updated : Dec 3, 2024, 03:10 PM IST
  • ವಿವಿಧ ಪದವಿಪೂರ್ವ ಇಂಜಿನಿಯರಿಂಗ್‌ ಕೋರ್ಸ್ ಗಳಿಗೆ ಪ್ರವೇಶದ ಸಂದರ್ಭದಲ್ಲಿ ಶಂಕಿತ ಬ್ಲಾಕಿಂಗ್‌ ಹಗರಣದ ಬಗ್ಗೆ.
  • ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿದ್ದು ಯಾವೆಲ್ಲಾ ಸಾಕ್ಷ್ಯಾದಾರಗಳ ಮೇಲೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • ಎಫ್‌ ಐ ಆರ್‌ ಪ್ರಕಾರ ಸೀಟು ತೆಗೆದುಕೊಳ್ಳುವ ಉದ್ದೇಶವಿಲ್ಲದ ಕೆಲವು ಅಭ್ಯರ್ಥಿಗಳನ್ನು ಕಾಲೇಜುಗಳಿಗೆ ಆಯ್ಕೆ
ಇಂಜಿನಿಯರಿಂಗ್‌ ಸೀಟು ಹಂಚಿಕೆಯ ಹಗರಣ..! ಎಂಟು ಮಂದಿಯನ್ನು ಬಂಧಿಸಿದ ಪೊಲೀಸರು..? title=

SEAT BLOCKING CASE: ವಿವಿಧ ಪದವಿಪೂರ್ವ ಇಂಜಿನಿಯರಿಂಗ್‌ ಕೋರ್ಸ್ ಗಳಿಗೆ  ಸೀಟು ಹಂಚಿಕೆಯ ಹಗರಣದ ಪ್ರಕರಣದಲ್ಲಿ ಪೋಲಿಸರು ಎಂಟು ಮದಿ ಆರೋಪಿಗಳನ್ನು ಬಂದಿಸಿದ್ದಾರೆ.

ಪೊಲೀಸರ ಪ್ರಕಾರ ,ನವೆಂಬರ್‌ 13 ರಂದು ಕೆಇಎ ಅಧಿಕಾರಿಗಳು ಮಲ್ಲೇಶ್ವರಂ ಪೊಲೀಸ್‌ ಠಾಣೆಯಲ್ಲಿ 2024-2025 ರ ವಿವಿಧ ಪದವಿಪೂರ್ವ ಇಂಜಿನಿಯರಿಂಗ್‌ ಕೋರ್ಸ್ ಗಳಿಗೆ ಪ್ರವೇಶದ ಸಂದರ್ಭದಲ್ಲಿ ಶಂಕಿತ ಬ್ಲಾಕಿಂಗ್‌ ಹಗರಣದ ಬಗ್ಗೆ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿದ್ದಾರೆ, ಈ ಸಂದರ್ಭದಲ್ಲಿ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ.

ಕೆಇಎ ನೀಡಿದ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆಯ ವಿವಧ ಸಕ್ಷೆನ್‌ ಗಳ ವಂಚನೆ,ಕ್ರಿಮಿನಲ್‌ ನಂಬಿಕೆ ಉಲ್ಲಂಘನೆ ಮತ್ತು ಐಟಿ ಕಾಯ್ದೆಯ ಸೆಕ್ಷೆನ್‌ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು, ಪರಿಶೀಲನೆ ನಡೆಸತ್ತಿದೆ.

ಎಂಜಿನಿಯರಿಂಗ್‌ ಸೀಟು ತಡೆ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಕರ್ನಾಟಕದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ಬೆಳಿಗ್ಗೆ ತಿಳಿಸಿದ್ದಾರೆ.
ತನಿಖೆ ಸಂದರ್ಭದಲ್ಲಿ ,ದೂರಿನ  ಪ್ರಕಾರ ಮೂರು ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಆಡಳಿತವನ್ನು ಪ್ರಶ್ನಿಸಲಾಗಿದ್ದು ಯಾವೆಲ್ಲಾ ಸಾಕ್ಷ್ಯಾದಾರಗಳ ಮೇಲೆ ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾವು ಎಂಟು ಜನರನ್ನು ಬಂಧಿಸಿದ್ದೇವೆ, ಅವರಲ್ಲಿ ಒಬ್ಬರು ಕೆಇಎ ಸಿಬ್ಬಂಧಿ, ಇತರರು ಮಧ್ಯವರ್ತಿಗಳು ಮತ್ತು ಕೆಲವು ಎಂಜಿನಿಯರಿಂಗ್‌ ಕಾಲೇಜುಗಳ ಕೆಲವು ಸಿಬ್ಬಂಧಿಗಳು ಎಂದು ಹೇಳಿದ್ದು, ಆರೋಪಿಗಳನ್ನು ಸೋಮವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ,ನಂತರ ಅವರನ್ನು 10 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಕೆಇಎ ನೀಡಿದ ದೂರಿನ ಆಧಾರದ  ಮೇಲೆ ಭಾರತೀಯಾ ನ್ಯಾಯ ಸಂಹಿತೆ ವಿವಿಧ ಸೆಕ್ಷೆನ್‌ ಗಳ ಅಡಿಯಲ್ಲಿ ವಂಚನೆ, ಕ್ರಿಮಿನಲ್‌ ನಂಬಿಕೆ ಉಲ್ಲಂಘನೆ ಮತ್ತು ಕಾಯ್ದೆಯ ಐಟಿ ಸೆಕ್ಷೆನ್‌ ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ.

ಎಫ್‌ ಐ ಆರ್‌ ಪ್ರಕಾರ ಸೀಟು ತೆಗೆದುಕೊಳ್ಳುವ ಉದ್ದೇಶವಿಲ್ಲದ ಕೆಲವು ಅಭ್ಯರ್ಥಿಗಳನ್ನು ಕಾಲೇಜುಗಳಿಗೆ ಆಯ್ಕೆಯನ್ನು ನಮೂದಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News