ಬೆಂಗಳೂರು: ಜನಪ್ರಿಯ ಟಾಲಿವುಡ್ ಸ್ಟಾರ್ಗಳಾದ ನಟಿ ಸಾಯಿ ಪಲ್ಲವಿ ಮತ್ತು ವಿಜಯ್ ದೇವರಕೊಂಡ ಇಂದು ತಮ್ಮ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಕಾರಣದಿಂದಾಗಿ ಕೇಕ್ ಕತ್ತರಿಸಿ ಅದ್ಧೂರಿಯಾಗಿ ಹುಟ್ಟು ಹಬ್ಬ ಆಚರಿಸಲು ಸಾಧ್ಯವಾಗದಿದ್ದರೂ ಈ ಇಬ್ಬರೂ ಸ್ಟಾರ್ಗಳ ಅಭಿಮಾನಿಗಳು ಇವರ ಜನ್ಮದಿನಕ್ಕಾಗಿ ಶುಭಾಶಯಗಳನ್ನು ಹೇಳುತ್ತಿದ್ದು ಸಾಯಿ ಪಲ್ಲವಿ, ವಿಜಯ್ ದೇವೇರಕೊಂಡ ಟ್ವಿಟರ್ನಲ್ಲಿ ಟಾಪ್ ಟ್ರೆಂಡ್ ಆಗಿದ್ದಾರೆ. ಬನ್ನಿ ಅಭಿಮಾನಿಗಳ ಕೆಲವು ಆಸಕ್ತಿದಾಯಕ ಟ್ವಿಟರ್ ಪ್ರತಿಕ್ರಿಯೆಗಳನ್ನು ಪರಿಶೀಲಿಸೋಣ.
Happy birthday to our sweet angel @Sai_Pallavi92 ❤️
Alot of talent you got #SaiPallavi#HappyBirthdaySaipallavi pic.twitter.com/kVkKnWzVaZ— Rajagopal (@saipallavi92fan) May 9, 2020
To the most talented actress , our #SaiPallavi .
She have most viewed songs in both Telugu and Tamil.
She is ruling without any glamour roles.
Looking forward to see more of her movies. pic.twitter.com/W0hKVvjiVr
— Gayathri Lakshmi (@gayulakhsmi) May 9, 2020
Any Rowdy baby fans here#HappyBirthdaySaiPallavi pic.twitter.com/ZbgHbM4W9b
— Kaviya ( Your Sister ) (@KaviyaNow) May 9, 2020
Happy Birthday Vijay Deverakonda Brother@TheDeverakonda#VijayDeverakonda #HBDVijayDeverakonda #HappyBirthdayVijayDeverakonda #Chennai #TamilCinema pic.twitter.com/4WV9JmxEwR
— Actor Kayal Devaraj (@kayaldevaraj) May 8, 2020
#HappyBirthdayVijayDeverakonda
Here's The @TheDeverakonda Birthday Mashup 🔥
💯 Percent Goosebumbs 👌
Watch Full Video And Subscribe ❤️Link 👇https://t.co/Yb3ymwtAkp@VjayDeverakonda @VJDeverakondaFC @saiVDfan @soumyaaa_vd_fan @TEAMVDOE @vijaydeverakond @telugucinemacom pic.twitter.com/ms1XKzGacP
— Mersal Suba∆ (@Mersal__Suba) May 8, 2020
#HappyBirthdayVijayDeverakonda
Future projects are all commercial entertainers 🔥♥️
He will come close to family audience very soon!!!
Expect a rage like #GeethaGovindam pic.twitter.com/5wHRq4TrCZ
— #HBDVijayDeverakonda (@TheSakthiRowdy) May 9, 2020
ಸಾಯಿ ಪಲ್ಲವಿ ಸೆಂಥಮರೈ ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 2015ರಲ್ಲಿ ಮೊದಲ ಬಾರಿಗೆ ಮಲಯಾಳಂ ಚಿತ್ರ ಪ್ರೇಮಂನಲ್ಲಿ ಕಾಣಿಸಿಕೊಂಡರು, ಇದು ಅವರಿಗೆ ಹಲವಾರು ಪ್ರಶಸ್ತಿಗಳನ್ನು ಮತ್ತು ಮನ್ನಣೆಯನ್ನು ನೀಡಿತು. ಪ್ರೇಮಂನಲ್ಲಿನ ಅಭಿನಯಕ್ಕಾಗಿ ಸಾಯಿ ಪಲ್ಲವಿ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರ- ಮಲಯಾಳಂ ಫಿಲ್ಮ್ಫೇರ್ ಪ್ರಶಸ್ತಿಯನ್ನು ಪಡೆದರು. ಇದು ಇತರ ಅನೇಕ ದೊಡ್ಡ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.
2016 ರಲ್ಲಿ, ಅವರು ದುಲ್ಕರ್ ಸಲ್ಮಾನ್ 'ಕಾಳಿ' ಅವರೊಂದಿಗೆ ಕಾಣಿಸಿಕೊಂಡರು. ವರುಣ್ ತೇಜ್ ಜೊತೆಯಾಗಿ ನಟಿಸಿರುವ 2017ರ ರೊಮ್ಯಾಂಟಿಕ್ ಚಿತ್ರ 'ಫಿದಾ' ಚಿತ್ರದೊಂದಿಗೆ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ 2018ರಲ್ಲಿ ವಿಜಯ್ ನಿರ್ದೇಶನದ 'ದಿಯಾ' ಚಿತ್ರದ ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದರು.
ಸಾಯಿ ಪಲ್ಲವಿ ವೃತ್ತಿಯಲ್ಲಿ ವೈದ್ಯೆ. ಜಾರ್ಜಿಯಾದ ಟಿಬಿಲಿಸಿ ಸ್ಟೇಟ್ ಮೆಡಿಕಲ್ ಯೂನಿವರ್ಸಿಟಿಯಿಂದ 2016ರಲ್ಲಿ ಅವರು ಎಂಬಿಬಿಎಸ್ ಮುಗಿಸಿದಳು.
ಮತ್ತೊಂದೆಡೆ ತೆಲುಗು ತಾರೆ ವಿಜಯ್ ದೇವೇರಕೊಂಡ ಅವರು 2011ರಲ್ಲಿ ಬಿಡುಗಡೆಯಾದ ನುವಿಲಾ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ನಂತರ 2015ರಲ್ಲಿ ಯೆವಾಡೆ ಸುಬ್ರಮಣ್ಯಂ ಬಂದಿದ್ದು ವಿಜಯ್ಗೆ ಪ್ರಾಮುಖ್ಯತೆ ನೀಡಿತು. ತೆಲುಗಿನ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ತೆಲುಗಿನ ಅತ್ಯುತ್ತಮ ಚಿತ್ರಕ್ಕಾಗಿ ಫಿಲ್ಮ್ಫೇರ್ ಪ್ರಶಸ್ತಿಯನ್ನು ಗೆದ್ದ 2016ರ ರೊಮ್ಯಾಂಟಿಕ್ ಹಾಸ್ಯ ಪೆಲ್ಲಿ ಚೂಪುಲು ಅವರೊಂದಿಗೆ ಅವರು ಹಾರ್ಟ್ ಥ್ರೋಬ್ ಆದರು.
2017ರಲ್ಲಿ ಸಂದೀಪ್ ವಂಗಾ ಅವರ 'ಅರ್ಜುನ್ ರೆಡ್ಡಿ' ಚಿತ್ರದೊಂದಿಗೆ ವಿಜಯ್ ದೇವೇರಕೊಂಡ ಭಾರಿ ಸ್ಟಾರ್ಡಮ್ ಗಳಿಸಿದರು. ಈ ಚಿತ್ರ ಅವರಿಗೆ ಅಪಾರ ಯಶಸ್ಸು ಮತ್ತು ಮನ್ನಣೆಯನ್ನು ನೀಡಿತು. ಅದೇ ವರ್ಷ ತೆಲುಗಿನ ಅತ್ಯುತ್ತಮ ನಟನೆಗಾಗಿ ಫಿಲ್ಮ್ಫೇರ್ ಪ್ರಶಸ್ತಿ ಪಡೆದರು.
ಮಹಾನತಿ, ಗೀತಾ ಗೋವಿಂದಂ ಮತ್ತು ಟ್ಯಾಕ್ಸಿವಾಲಾ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಫೋರ್ಬ್ಸ್ ಇಂಡಿಯಾ ಅವರ 2019ರ 30 ವರ್ಷದೊಳಗಿನವರ 30 ಜನರ ಪಟ್ಟಿಯಲ್ಲಿ ಅವರ ಹೆಸರೂ ಇತ್ತು ಎಂಬುದು ಹೆಮ್ಮೆಯ ವಿಷಯ.
ನಮ್ಮ ಝೀ ವಾಹಿನಿ ಪರವಾಗಿ ಸಾಯಿ ಪಲ್ಲವಿ ಮತ್ತು ವಿಜಯ್ ದೇವೇರಕೊಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು !