ನವದೆಹಲಿ: ಅಮೆರಿಕ ಮತ್ತು ಚೀನಾ(China) ನಡುವಿನ ಸಂಬಂಧವು ಅತ್ಯಂತ ಕೆಟ್ಟ ಹಂತವನ್ನು ತಲುಪಿದೆ. ಅಮೆರಿಕವು (America) ಚೀನಾ ವಿರುದ್ಧ ಇಂತಹ ವಿಶೇಷ ಯೋಜನೆಯನ್ನು ರೂಪಿಸಿದೆ, ಅದರ ಅಡಿಯಲ್ಲಿ ಚೀನಾವನ್ನು ಮನಸ್ಸಿನಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ರೂಪಿಸಿರುವ ಅಮೆರಿಕ ಚೀನಾದ ಆಟವನ್ನು ನಿಯಂತ್ರಿಸಲು ತಯಾರಿ ನಡೆಸಿದ್ದು 18 ವಿಶೇಷ ಯೋಜನೆಗಳನ್ನು ರೂಪಿಸಿದೆ.
ಕೊರೋನಾವೈರಸ್ (Coronavirus) ಗೆ ಸಂಬಂಧಿಸಿದಂತೆ ಇಡೀ ವಿಶ್ವದ ಕೆಂಗಣ್ಣಿಗೆ ತುತ್ತಾಗಿರುವ ಚೀನಾವನ್ನು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಬಹಿಷ್ಕರಿಸಲು ಪ್ರಾರಂಭಿಸಿವೆ. ಇದರಲ್ಲಿ ಮುಂಚೂಣಿಯಲ್ಲಿರುವ ಅಮೆರಿಕ ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಈ ಮಾರಕ ವೈರಸ್ ಕೊವಿಡ್-19 (Covid-19) ಬಗ್ಗೆ ಚೀನಾದಿಂದ ಸರಿಯಾದ ಉತ್ತರವನ್ನು ಪಡೆಯಬೇಕು ಮತ್ತು ಅದರ ತಪ್ಪನ್ನು ಸರಿಪಡಿಸಬೇಕು ಎಂದು ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಚೀನಾವನ್ನು ಕಟ್ಟಿಹಾಕಲು ಯೋಜನೆಗಳನ್ನು ರೂಪಿಸಿರುವ ಅಮೆರಿಕ ಈ ಕುರಿತಂತೆ ಭಾರತದೊಂದಿಗೂ ಮಾತನಾಡಲಿದೆ ಎಂದು ಹೇಳಲಾಗುತ್ತಿದೆ.
ಯುಎಸ್ (US) ಸಂಸದ ಥಾಮ್ ಟಿಲ್ಲಿಸ್ ಚೀನಾ ವಿರುದ್ಧ 18 ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದ್ದು ಈ ಯೋಜನೆಯ ಮೂಲಕ ಚೀನಾದ ಸುಳ್ಳುಗಳು ಇಡೀ ಜಗತ್ತಿಗೆ ತೆರೆದುಕೊಳ್ಳುತ್ತವೆ ಎನ್ನಲಾಗಿದೆ. ಅಮೆರಿಕದಲ್ಲೂ ಚೀನಾ ವಿರುದ್ಧದ ಮಸೂದೆಯನ್ನು ಮಂಡಿಸಲಾಗಿದೆ. ಇದರೊಂದಿಗೆ ಡೊನಾಲ್ಡ್ ಟ್ರಂಪ್ ಅವರು ಚೀನಾ ವಿರುದ್ಧ ಬಲವಾದ ನಿರ್ಬಂಧಗಳನ್ನು ವಿಧಿಸಲು ಮುಂದಾಗಿದ್ದಾರಂತೆ.
ಚೀನಾ ವಿರುದ್ಧ ಮಂಡಿಸಲಾದ ಈ ಯೋಜನೆಯಲ್ಲಿ ಮಿಲಿಟರಿ, ಆರ್ಥಿಕ, ರಾಜತಾಂತ್ರಿಕ ಕ್ಷೇತ್ರ ಹೀಗೆ ಪ್ರತಿಯೊಂದು ರಂಗದಲ್ಲೂ ಚೀನಾವನ್ನು ಮಣಿಸುವ ಪ್ರಯತ್ನವಿದೆ ಎನ್ನಲಾಗಿದೆ. ಅಷ್ಟೇ ಅಲ್ಲ ಈ ಯೋಜನೆಯ ಒಂದು ಭಾಗದಲ್ಲಿ ಭಾರತವನ್ನು ಸಹ ಪಾಲುದಾರರನ್ನಾಗಿ ಮಾಡಲಾಗಿದೆ ಎಂದು ಯೋಜನೆ ಹೇಳುತ್ತದೆ.
ಚೀನಾ ವಿರುದ್ಧ ಅಮೆರಿಕದ 18 ಅಂಶಗಳ ಯೋಜನೆ:
- ಅಮೆರಿಕ ತನ್ನ ಪ್ರಾದೇಶಿಕ ಮಿತ್ರರಾಷ್ಟ್ರಗಳೊಂದಿಗೆ ಮಿಲಿಟರಿ ಸಂಬಂಧವನ್ನು ಗಾಢವಾಗಿಸಬೇಕು.
- ಚೀನಾವನ್ನು ಸೋಲಿಸಲು ಭಾರತ, ತೈವಾನ್ ಮತ್ತು ವಿಯೆಟ್ನಾಂ ಜೊತೆ ಮಿಲಿಟರಿ ಒಪ್ಪಂದಗಳಿಗೆ ಉತ್ತೇಜನ.
- ಚೀನಾದಲ್ಲಿರುವ ಅಮೆರಿಕದ ಉತ್ಪಾದನಾ ಕಂಪನಿಗಳನ್ನು ಮರುಪಡೆಯಬೇಕು ಮತ್ತು ಕ್ರಮೇಣ ಪೂರೈಕೆಗಾಗಿ ಚೀನಾವನ್ನು ಅವಲಂಬಿಸುವುದನ್ನು ತೆಗೆದುಹಾಕಬೇಕು.
- ಮಿಲಿಟರಿ ಬಲವನ್ನು ಹೆಚ್ಚಿಸಲು, 20 ಬಿಲಿಯನ್ ಯುಎಸ್ ಡಾಲರ್ಗಳ ತಕ್ಷಣದ ಸಹಾಯವನ್ನು ನೀಡಬೇಕು.
- ಯುಎಸ್ ತಂತ್ರಜ್ಞಾನವನ್ನು ಚೀನಾ ಕದಿಯದಂತೆ ತಡೆಯಲು ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಬೇಕು.
- ವೈರಸ್ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಚೀನಾವನ್ನು ನಿಷೇಧಿಸಬೇಕು.
- ಅವರ ದಬ್ಬಾಳಿಕೆಯ ಮಾನವ ಹಕ್ಕುಗಳ ದಾಖಲೆಗೆ ಚೀನಾವನ್ನು ಹೊಣೆಗಾರರನ್ನಾಗಿ ಮಾಡಬೇಕು.
- ಸಾಂಕ್ರಾಮಿಕ ರೋಗವನ್ನು ನಿಭಾಯಿಸಲು ವಿಶ್ವದ ರಾಷ್ಟ್ರಗಳ ಮೇಲೆ ಕಣ್ಣಿಡುವಂತಹ ಸಂಘಟನೆಯನ್ನು ರಚಿಸಬೇಕು.
ಕೊರೋನಾ ಸಾಗಿಬಂದ ಹಾದಿ, WHO ತೆಗೆದುಕೊಂಡ ಕೆಲ ಪ್ರಮುಖ ಮಾಹಿತಿಗಳ ಟೈಮ್ ಲೈನ್...
ವಾಸ್ತವವಾಗಿ ಅಮೇರಿಕಾ ಪ್ರಸ್ತುತ ಅನೇಕ ವಿಧಗಳಲ್ಲಿ ಚೀನಾದ ಉತ್ಪನ್ನಗಳ ಮೇಲೆ ಅವಲಂಬಿತವಾಗಿದೆ. ಈಗ ಅವರು ಚೀನಾದಲ್ಲಿ ತಮ್ಮ ಕಂಪನಿಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ಯೋಚಿಸುತ್ತಿದ್ದಾರೆ. ಯುಎಸ್ ಸಂಸತ್ತಿನಲ್ಲಿ ಈ ಮಸೂದೆಯನ್ನು ಅಂಗೀಕರಿಸಿದರೆ, ಟ್ರಂಪ್ ಚೀನಾದ ಮೇಲೆ ಇಂತಹ ಅನೇಕ ನಿರ್ಬಂಧಗಳನ್ನು ವಿಧಿಸಬಹುದು, ಅದು ಚೀನಾ ದೃಷ್ಟಿಯಿಂದ ಮರ್ಮಾಘಾತ ಎಂದೇ ಪರಿಗಣಿಸಬಹುದು. ಆದರೆ ಅಮೆರಿಕದ ಈ ಎಲ್ಲಾ ಯೋಜನೆಗಳಿಂದ ಭಾರತಕ್ಕೆ ಹೆಚ್ಚಾಗಿ ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಅಮೆರಿಕದ ಈ ನಡೆಯಿಂದ ಕೋಪಗೊಂಡಿರುವ ಚೀನಾ ಸೆನೆಟ್ನಲ್ಲಿ ಚೀನಾ ವಿರುದ್ಧ ನಿಷೇಧವನ್ನು ಪ್ರಸ್ತಾಪಿಸಿದ ಅಮೆರಿಕದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಲು ಮುಂದಾಗಿದೆ.
ಇನ್ನು ಚೀನಾದ ನಡೆಯಿಂದಾಗಿ ಕೆಂಡಾಮಂಡಲವಾಗಿರುವ ಟ್ರಂಪ್ ಆದಷ್ಟು ಬೇಗ ಚೀನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಬಯಸುತ್ತಾರೆ. ಟ್ರಂಪ್ ಅವರ ಹೊರತಾಗಿ ಅಮೆರಿಕಾದ ಜನರಲ್ಲಿ ಚೀನಾ ವಿರುದ್ಧದ ಕೋಪ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ.