Coronavirus ನಿಂದ ಗುಣಮುಖರಾದವರಲ್ಲಿಯೂ ಕೂಡ ಟೆಸ್ಟ್ ಪಾಸಿಟಿವ್..! ಕಾರಣ ಇಲ್ಲಿದೆ

ವೈರಸ್ ಹೊಂದಿರುವ ಗಂಟಲಿನ ಸ್ನಾಯುಗಳಲ್ಲಿ 3 ತಿಂಗಳವರೆಗೆ ಕೊರೊನಾ ವೈರಸ್ ಜೀವಿತಾವಧಿ ಹೊಂದಿರುತ್ತದೆ. ಅಂದರೆ. ವೈರಸ್ ಸಾವಿನ ಬಳಿಕ ಕೂಡ ಈ ಸ್ನಾಯುಗಳಲ್ಲಿ ಬಿದ್ದಿರುವ ಕಾರಣ ಟೆಸ್ಟ್ ನೆಗೆಟಿವ್ ಬರದೆ ಇರುವ ಒಂದು ಕಾರಣ ಎನ್ನಲಾಗಿದೆ.

Last Updated : May 22, 2020, 05:23 PM IST
Coronavirus ನಿಂದ ಗುಣಮುಖರಾದವರಲ್ಲಿಯೂ ಕೂಡ ಟೆಸ್ಟ್ ಪಾಸಿಟಿವ್..! ಕಾರಣ ಇಲ್ಲಿದೆ title=

ನವದೆಹಲಿ:ಕೊರೊನಾ ವೈರಸ್ ನಿಂದ ಹೆಚ್ಚುತ್ತಿರುವ ಸೋಂಕಿನ ಪ್ರಕರಣಗಳ ಮಧ್ಯೆ ಇದೀಗ ಚೇತರಿಸಿಕೊಂಡ ರೋಗಿಗಳ ವರದಿ ಕೂಡ ಮತ್ತೆ ಪಾಸಿಟಿವ್ ಬರುತ್ತಿರುವುದು ಇದೀಗ ಮತ್ತಷ್ಟು ಆತಂಕ ಹೆಚ್ಚಿಸಿದೆ. ಆರಂಭದಲ್ಲಿ ಹಲವು ದೇಶಗಳಲ್ಲಿ ಚಿಕಿತ್ಸೆಯ ನಂತರವೂ ಕೂಡ ರೋಗಿಯ ಕೊರೊನಾ ವರದಿ ಪಾಸಿಟಿವ್ ಬಂದಿದ್ದವು. ಈ ಕುರಿತು ಇದೀಗ ಹಲವು ಸಂಶೋಧನೆಗಳನ್ನು ನಡೆಸಲಾಗಿದೆ. ಈ ಕುರಿತು ಹೇಳಿಕೆ ನೀಡುವ ಸಂಶೋಧಕರು, ವಾರಗಳ ನಂತರ ರೋಗಿಯ ವರದಿ ಸಕಾರಾತ್ಮಕ ಕಂಡು ಬರುವುದರಿಂದ ಯಾವುದೇ ಅಪಾಯವಿಲ್ಲ ಎಂದು ಹೇಳಿದ್ದಾರೆ.

ದಕ್ಷಿಣ ಕೊರಿಯಾದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರದ ವಿಜ್ಞಾನಿಗಳು ನಡೆಸಿದ ಸಂಶೋಧನೆಯ ಪ್ರಕಾರ, ಕರೋನಾ ರೋಗಿಗಳು ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ವರದಿಗಳು ಸಕಾರಾತ್ಮಕವಾಗಿವೆ. ಇದಕ್ಕೆ ಕಾರಣ ಅವರ ದೇಹದಲ್ಲಿ ಇರುವ ಕರೋನಾ ವೈರಸ್‌ನ ಸತ್ತ ಕಣಗಳು. ಆದರೆ ಇದರಿಂದ ಸೋಂಕಿನ ಅಪಾಯವಿರುವುದಿಲ್ಲ ಎಂದಿದ್ದಾರೆ.

ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ ನಡೆಸಿದ ಈ ಅಧ್ಯಯನದಲ್ಲಿ 285 ರೋಗಿಗಳ ಮಾದರಿಗಳ ಸ್ಯಾಂಪಲ್ ಟೆಸ್ಟ್ ನಡೆಸಲಾಗಿದೆ. ಈ ಮಾದರಿಗಳ ಪಿಸಿಆರ್ ಪರೀಕ್ಷೆ ನಡೆಸಲಾಗಿದೆ. ನಂತರ ಅದನ್ನು ಪ್ರಯೋಗಾಲಯದಲ್ಲಿ ವಿಕಸಿಸಲು ಯತ್ನಿಸಲಾಗಿದೆ. ಆದರೆ ಗುನಧರ್ಮದಲ್ಲಿ ಇದು ಯಾವುದೇ ಬೆಳವಣಿಗೆಯನ್ನು ತೋರಿಸಲಿಲ್ಲ. ಹೀಗಾಗಿ ಇದು ಸೋಂಕನ್ನು ಹರಡಲು ಸಾಧ್ಯವಿಲ್ಲ ಎಂಬುದನ್ನು ಸಾಬೀತು ಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಗುಣಮುಖರಾದ ರೋಗಿಗಳ ಪರೀಕ್ಷೆಗೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಕರೋನಾದಿಂದ ಚೇತರಿಸಿಕೊಳ್ಳುವ ಜನರು ಶಾಲೆ ಅಥವಾ ಕಚೇರಿಗೆ ಸೇರುವ ಮೊದಲು ನಕಾರಾತ್ಮಕ ಪರೀಕ್ಷಾ ವರದಿಯನ್ನು ತೋರಿಸಬೇಕಾಗಿಲ್ಲ ಎಂದು ಹೇಳಿದೆ.

ಇತ್ತೀಚೆಗಷ್ಟೇ ಭಾರತದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಈ ನಿಟ್ಟಿನಲ್ಲಿ ಕರೋನಾ ರೋಗಿಗಳನ್ನು ಆಸ್ಪತ್ರೆಯಿಂದ ಹೊರಹಾಕುವ ಮಾರ್ಗಸೂಚಿಗಳಲ್ಲಿ ಕೆಲವು ಬದಲಾವಣೆಗಳನ್ನು ಮಾಡಿತ್ತು.

ಚಿಕಿತ್ಸೆಯ ಬಳಿಕವೂ ಕೂಡ ಟೆಸ್ಟ್ ಪಾಸಿಟಿವ್ ಬರಲು ಕಾರಣ ಏನು?
ICMRನ ಸಾಂಕ್ರಾಮಿಕ ಕಾಯಿಲೆಗಳ ವಿಭಾಗದ ಮುಖ್ಯಸ್ಥ ಡಾ.ಆರ್.ಆರ್ ಗಂಗಖೇಡ್ಕರ್ ಅವರ ಪ್ರಕಾರ, ಯಾವುದೇ ಓರ್ವ ರೋಗಿಯನ್ನು ಡಿಸ್ಚಾರ್ಜ್ ಮಾಡುವ ಮೊದಲು 24 ಗಂಟೆಗಳ ಒಳಗೆ ಆ ರೋಗಿಯ 2 RTPCR ಟೆಸ್ಟ್ ಗಳು ನೆಗಟಿವ್ ಬಂದಿರಬೇಕು. ಆದರೆ, ಹಲವು ಬಾರಿ ರೋಗಿಗಳು ಗುಣಮುಖರಾದ ಬಳಿಕವೂ ಕೂಡ RTPCR ಟೆಸ್ಟ್ ನೆಗೆಟಿವ್ ಬರುವುದಿಲ್ಲ. ಇದರಿಂದ ರೋಗಿಗಳು ಆಸ್ಪತ್ರೆಯಲ್ಲಿಯೇ ಅಡ್ಮಿಟ್ ಆಗಿರಬೇಕಾಗುತ್ತದೆ. ವೈರಸ್ ಹೊಂದಿರುವ ಗಂಟಲಿನ ಸ್ನಾಯುಗಳಲ್ಲಿ 3 ತಿಂಗಳವರೆಗೆ ಕೊರೊನಾ ವೈರಸ್ ಕಣಗಳು ಉಳಿದಿರುತ್ತವೆ. ಅಂದರೆ. ವೈರಸ್ ಸಾವಿನ ಬಳಿಕ ಕೂಡ ಈ ಸ್ನಾಯುಗಳಲ್ಲಿ ಬಿದ್ದಿರುವ ಕಾರಣ ಟೆಸ್ಟ್ ನೆಗೆಟಿವ್ ಬರದೆ ಇರಲು ಕೂಡ ಒಂದು ಕಾರಣ ಎಂದು ಅವರು ಹೇಳಿದ್ದಾರೆ.

ಗಂಟಲಿನ ಸ್ನಾಯುಗಳಲ್ಲಿ ಉಳಿದುಕೊಂಡಿರುವ ವೈರಸ್ ಕಣ ಜೀವಂತವಾಗಿದೆಯೋ ಅಥವಾ ಸಾವನ್ನಪ್ಪಿದೆಯೋ ಹೇಗೆ ಗೊತ್ತಾಗುತ್ತದೆ.
ಚಿಕಿತ್ಸೆಯ ನಂತರ, ದೇಹದಲ್ಲಿ ಇರುವ ವೈರಸ್ ಜೀವಂತವಾಗಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಅನೇಕ ಅಧ್ಯಯನಗಳನ್ನು ಮಾಡಲಾಗಿದೆ. ಇದನ್ನು ತಿಳಿಯಲು ಗುಣಮುಖರಾದ ರೋಗಿಯಲ್ಲಿ 3 ದಿನಗಳವರೆಗೆ ಯಾವುದೇ ರೋಗಲಕ್ಷಣಗಳನ್ನು ಕಂಡುಬರದಿದ್ದರೆ ಅವನ ಗಂಟಲಿನಿಂದ ಮಾದರಿಯನ್ನು ತೆಗೆದುಕೊಂಡು ಕಲ್ಚರ್ ಮಾಡಲಾಗುತ್ತದೆ. ಈ ವೈರಸ್ ತನ್ನ ಗುನಧರ್ಮದಂತೆ ಹೆಚ್ಚು ವೈರಸ್‌ಗಳನ್ನು ಉತ್ಪಾದಿಸಿದರೆ, ಅವು ಜೀವಂತವಾಗಿವೆ ಎಂದರ್ಥ. ಆದರೆ ಅದು ಸಂಭವಿಸದಿದ್ದರೆ ದೇಹದಲ್ಲಿ ಇರುವ ವೈರಸ್ ಸತ್ತು ಹೋಗಿದೆ ಮತ್ತು ಇದರಿಂದ ಸೋಂಕು ಹರಡುವುದಿಲ್ಲ.

Trending News