ನವದೆಹಲಿ: COVID 19 ವೈರಸ್ ನಿಯಂತ್ರಿಸಲು ದೇಶಕ್ಕೆ ದೇಶವನ್ನೇ ಲಾಕ್ಡೌನ್ ಮಾಡಲಾಗಿದ್ದರೂ ಕೊರೊನಾ ಕರಿನೆರಳಿನ ತೀವ್ರತೆ ಕಡಿಮೆ ಆಗಿಲ್ಲ, ಸೋಂಕು ಹರಡುವಿಕೆ ತೆಹಬದಿಗೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ದುಪ್ಪಟ್ಟಾಗುತ್ತಿದೆ. ಪ್ರತಿದಿನವೂ ಐದಾರು ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ನಿನ್ನೆ ಕೋವಿಡ್ -19 (Covid-19) ವೈರಸ್ ಯಾವ್ಯಾವ ರಾಜ್ಯಗಳಲ್ಲಿ ಎಷ್ಟೆಷ್ಟು ಜನರಿಗೆ ಹರಡಿದೆ ಎಂಬ ಅಂಕಿ ಅಂಶ ಈ ರೀತಿ ಇದೆ.
ಇಡೀ ದೇಶದ COVID 19 ಕರೋನವೈರಸ್ (Coronavirus) ಪೀಡಿತರ ಸಂಖ್ಯೆಯಲ್ಲಿ ಮಹಾರಾಷ್ಟ್ರದ ಕೊಡುಗೆಯೇ ಮೂರನೇ ಒಂದು ಭಾಗದಷ್ಟಿದೆ. ಮೊದಲ ಸ್ಥಾನದಲ್ಲಿರುವ ಮಹಾರಾಷ್ಟ್ರ ರಾಜ್ಯವೊಂದರಲ್ಲೇ 50 ಸಾವಿರಕ್ಕೂ ಹೆಚ್ಚು COVID 19 ವೈರಸ್ ಸೋಂಕಿತರಿದ್ದಾರೆ. ನಂತರದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತವರು ರಾಜ್ಯವಾಗಿರುವ ಗುಜರಾತ್ ರಾಜ್ಯದ್ದು. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ವಿವಿಧ ರಾಜ್ಯಗಳಲ್ಲಿ ಹೊಸದಾಗಿ ದಾಖಲಾದ COVID 19 ವೈರಸ್ ಪೀಡಿತರ ಮತ್ತು ಒಟ್ಟು ಸೋಂಕು ಪೀಡಿತರ ವಿವರ ಹೀಗಿದೆ.
COVID 19 ವೈರಸ್ ಪೀಡಿತರ ಸಂಖ್ಯೆಯಲ್ಲಿ ಜಗತ್ತಿನ ಟಾಪ್ 10 ಲಿಸ್ಟ್ ಗೆ ಏರಿದ ಭಾರತ
ರಾಜ್ಯವಾರು ಕೊರೋನಾ ಪೀಡಿತರ ವಿವರ
ಮಹಾರಾಷ್ಟ್ರ: 2,436 ಹೊಸ ಪ್ರಕರಣಗಳು; ಒಟ್ಟು 52,667
ತಮಿಳುನಾಡು: 805 ಹೊಸ ಪ್ರಕರಣಗಳು;, ಒಟ್ಟು 17,082
ಗುಜರಾತ್: 405 ಹೊಸ ಪ್ರಕರಣಗಳು; ಒಟ್ಟು 14,468
ದೆಹಲಿ: 635 ಹೊಸ ಪ್ರಕರಣಗಳು, ಒಟ್ಟು 14,000
ರಾಜಸ್ಥಾನ: 272 ಹೊಸ ಪ್ರಕರಣಗಳು; ಒಟ್ಟು 7,300
ಮಧ್ಯಪ್ರದೇಶ: 194 ಹೊಸ ಪ್ರಕರಣಗಳು; ಒಟ್ಟು 6,859
ಉತ್ತರ ಪ್ರದೇಶ: 229 ಹೊಸ ಪ್ರಕರಣಗಳು; ಒಟ್ಟು 6,497
ಪಶ್ಚಿಮ ಬಂಗಾಳ: 49 1ಹೊಸ ಪ್ರಕರಣಗಳು; ಒಟ್ಟು 3,816
ಉತ್ತರ ಪ್ರದೇಶ: 273 ಹೊಸ ಪ್ರಕರಣಗಳು; ಸಕ್ರಿಯ ಪ್ರಕರಣಗಳು 2,606
ಕರ್ನಾಟಕ: 93 ಹೊಸ ಪ್ರಕರಣಗಳು; ಒಟ್ಟು 2,182
ಪಂಜಾಬ್: 21 ಹೊಸ ಪ್ರಕರಣಗಳು; ಒಟ್ಟು 2,081
ತೆಲಂಗಾಣ: 66 ಹೊಸ ಪ್ರಕರಣಗಳು; ಒಟ್ಟು 1,920
ಹರಿಯಾಣ: 29 ಹೊಸ ಪ್ರಕರಣಗಳು; ಒಟ್ಟು1,213
ಅಸ್ಸಾಂ: 25 ಹೊಸ ಪ್ರಕರಣಗಳು; 470 ಸಕ್ರಿಯ ಪ್ರಕರಣಗಳು 539
ಜಾರ್ಖಂಡ್: 27 ಹೊಸ ಪ್ರಕರಣಗಳು; ಒಟ್ಟು 405
ಕೇರಳ: 49 ಹೊಸ ಪ್ರಕರಣಗಳು; ಸಕ್ರಿಯ ಪ್ರಕರಣಗಳು 359
ಉತ್ತರಾಖಂಡ: 15 ಹೊಸ ಪ್ರಕರಣಗಳು; ಒಟ್ಟು 332
ಚಂಡೀಗಢ: 28 ಹೊಸ ಪ್ರಕರಣಗಳು; ಒಟ್ಟು 266
ಹಿಮಾಚಲಪ್ರದೇಶ: 20 ಹೊಸ ಪ್ರಕರಣಗಳು; ಒಟ್ಟು 223
ಗೋವಾ: 1 ಹೊಸ ಪ್ರಕರಣ; ಒಟ್ಟು 67
ಮಣಿಪುರ: 4 ಹೊಸ ಪ್ರಕರಣಗಳು; ಒಟ್ಟು 36