ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸುದ್ದಿ ಓದಲೇ ಬೇಕು... ಆಮೇಲೆ ಯಾವತ್ತೂ ಆ ತಪ್ಪು ಮಾಡಲ್ಲ!

side effects of filling a full tank of petrol: ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸಿದ್ರೆ ಮೈಲೇಜ್‌ ಬರುತ್ತೆ ಎಂಬುದು ಎಲ್ಲಾ ವಾಹನ ಚಾಲಕರು ಅಂದುಕೊಂಡಿರುವ ಸಂಗತಿ. ಆದರೆ ಈ ಅಭ್ಯಾಸದಿಂದ ಸಮಸ್ಯೆಗಳು ಉದ್ಭವಿಸಬಹುದು. ಏಕೆಂದರೆ ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಇಂಧನವು ಹೊರಗಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಸ್ಪ್ರೆಡ್‌ ಆಗಲು ಪ್ರಾರಂಭಿಸುತ್ತದೆ.

Written by - Bhavishya Shetty | Last Updated : Jan 8, 2025, 08:42 PM IST
    • ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸಿದ್ರೆ ಮೈಲೇಜ್‌ ಬರುತ್ತಾ?
    • ಈ ಅಭ್ಯಾಸದಿಂದ ಸಮಸ್ಯೆಗಳು ಉದ್ಭವಿಸಬಹುದು.
    • ಇಂಧನವು ಹೊರಗಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಸ್ಪ್ರೆಡ್‌ ಆಗಲು ಪ್ರಾರಂಭಿಸುತ್ತದೆ
ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸೋ ಅಭ್ಯಾಸ ನಿಮಗಿದ್ಯಾ? ಹಾಗಾದ್ರೆ ಈ ಸುದ್ದಿ ಓದಲೇ ಬೇಕು... ಆಮೇಲೆ ಯಾವತ್ತೂ ಆ ತಪ್ಪು ಮಾಡಲ್ಲ! title=
filling a full tank of petrol

side effects of filling a full tank of petrol: ಕಾರನ್ನು ನಿಯಮಿತವಾಗಿ ಬಳಸುವ ಜನರು ಇಂಧನ ಖಾಲಿ ಚಿಹ್ನೆ ಬಂದಾಗ ಟ್ಯಾಂಕ್ ಅನ್ನು ತುಂಬುತ್ತಾರೆ. ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸುವಾಗ ಟ್ಯಾಂಕ್ ತುಂಬಿದ ನಂತರ ಬಂಕ್‌ನವರು ಕೇಳುವ ಸಾಮಾನ್ಯ ಪ್ರಶ್ನೆ. "ಸಾರ್... ನಿಲ್ಲಿಸ್ತೀರಾ!" ಅಂತಾ... ಇದಕ್ಕೆ ವೈಜ್ಞಾನಿಕ ಕಾರಣವೂ ಇದೆ. ನೀವು ಕಾರ್ ಸರ್ವಿಸ್ ನೀಡಿದಾಗಲೆಲ್ಲಾ ಅಲ್ಲಿನ ತಂತ್ರಜ್ಞರನ್ನು ಒಮ್ಮೆ ಕೇಳಿ ಅವರು ನಿಮಗೆ ವಿವರವಾಗಿ ವಿವರಿಸುತ್ತಾರೆ.

ಇದನ್ನೂ ಓದಿ: ಈ ದಿನದಿಂದ ಮಾಘ ಮಾಸ ಆರಂಭವಾಗಲಿದೆ; ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂದು ತಿಳಿಯಿರಿ

ಫುಲ್ ಟ್ಯಾಂಕ್‌ ಪೆಟ್ರೋಲ್‌ ಹಾಕಿಸಿದ್ರೆ ಮೈಲೇಜ್‌ ಬರುತ್ತೆ ಎಂಬುದು ಎಲ್ಲಾ ವಾಹನ ಚಾಲಕರು ಅಂದುಕೊಂಡಿರುವ ಸಂಗತಿ. ಆದರೆ ಈ ಅಭ್ಯಾಸದಿಂದ ಸಮಸ್ಯೆಗಳು ಉದ್ಭವಿಸಬಹುದು. ಏಕೆಂದರೆ ಪೆಟ್ರೋಲ್ ಅಥವಾ ಡೀಸೆಲ್‌ನಂತಹ ಇಂಧನವು ಹೊರಗಿನ ತಾಪಮಾನಕ್ಕೆ ಒಡ್ಡಿಕೊಂಡಾಗ ಸ್ಪ್ರೆಡ್‌ ಆಗಲು ಪ್ರಾರಂಭಿಸುತ್ತದೆ. ಟ್ಯಾಂಕ್‌ ಒಳಗೆ ಇಂಧನ ಮಟ್ಟವು ಬಿಸಿ ವಾತಾವರಣದಲ್ಲಿ ಏರಲು ಪ್ರಾರಂಭಿಸಿದಾಗ ಹೀಗಾಗುತ್ತದೆ. ಇಂಥ ಸಮಯದಲ್ಲಿ ನೀವು ಫುಲ್‌ ಟ್ಯಾಂಕ್‌ ಹಾಕಿಸಿದ್ರೆ ಏರ್‌ ಔಟ್‌ ಆಗೋದಕ್ಕೂ ಜಾಗ ಇರುವುದಿಲ್ಲ. ಇಂಧನ ಟ್ಯಾಂಕ್ ತುಂಬಿದ್ದರೆ, ಇಂಧನ ಸೋರಿಕೆಯ ಸಾಧ್ಯತೆಯೂ ಹೆಚ್ಚಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಬೆಂಕಿ ಅಪಘಾತಗಳು ಸಂಭವಿಸಬಹುದು. ಬೆಂಕಿಯ ಅಪಾಯವೂ ಇದೆ.  ತೈಲವನ್ನು ಪೂರ್ಣ ಟ್ಯಾಂಕ್ ಅಥವಾ ಕ್ಯಾಪ್ ವರೆಗೆ ತುಂಬಿಸಬಾರದು. ಇದನ್ನು ಗಮನದಲ್ಲಿಟ್ಟುಕೊಂಡು ಬೈಕ್ ಕಂಪನಿಗಳು ಕೈಪಿಡಿಯಲ್ಲಿ ನೀಡಲಾದ ಸಾಮರ್ಥ್ಯಕ್ಕಿಂತ 15-20 ಪ್ರತಿಶತ ಹೆಚ್ಚು ಜಾಗವನ್ನು ಟ್ಯಾಂಕ್‌ನಲ್ಲಿ ಹಾಕುತ್ತವೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ನೀಡಿದ ಸೂಚನೆಯಂತೆ, ಇಂಧನ ಟ್ಯಾಂಕ್ ಅನ್ನು ಕ್ಯಾಪ್ ವರೆಗೆ ತುಂಬಿಸದಂತೆ ಶಿಫಾರಸು ಮಾಡಲಾಗಿದೆ. ಈ ಪ್ರವೃತ್ತಿ ಅಪಾಯಕಾರಿ ಎಂದು ವರದಿಯಲ್ಲಿ ಹೇಳಿದೆ. ಈ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವಂತೆ ಕಂಪನಿಗಳಿಗೂ ಮನವಿ ಮಾಡಲಾಗಿದೆ.

ಇದನ್ನೂ ಓದಿ: ಫೋನ್ ಪದೇ ಪದೇ ಬಿಸಿಯಾಗುತ್ತಾ? ನೀವು ಈ ತಪ್ಪುಗಳನ್ನು ಮಾಡುತ್ತಿದ್ದೀರಿ! ಗಮನಿಸಿ

ಇನ್ನು ಇಂತಹ ಯಾವುದೇ ಅವಘಡ ಸಂಭವಿಸದಿದ್ದರೂ ಬೈಕ್ ಎಂಜಿನ್ ಹಾಳಾಗುವ ಸಾಧ್ಯತೆ ಖಂಡಿತಾ ಇದೆ ಎನ್ನುತ್ತಾರೆ ಟೆಕ್ ತಜ್ಞರು. ಹಾಗಾದರೆ ಮತ್ತೊಮ್ಮೆ ಪೆಟ್ರೋಲ್ ಬಂಕ್‌ನಲ್ಲಿ ಫುಲ್ ಟ್ಯಾಂಕ್ ಹಾಕಿ ಈ ತಪ್ಪು ಮಾಡಲೇಬೇಡಿ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News