ಮದುವೆ ವೇಳೆ ಮಾಸ್ಕ್ ಧರಿಸದ ವಧು-ವರರಿಗೆ ಕೋರ್ಟ್ ಮಾಡಿದ್ದೇನು?

ತಮಾಷೆಯೆಂದರೆ ಈ ಪ್ರಕರಣದಲ್ಲಿ ದಂಡದ ಶಿಕ್ಷೆ ಪಡೆದ ಗಂಡ ಮತ್ತು ಹೆಂಡತಿ ಹೈಕೋರ್ಟ್‌ನಲ್ಲಿಯೇ ಆಶ್ರಯ ಪಡೆದರು.

Last Updated : Jun 3, 2020, 01:44 PM IST
ಮದುವೆ ವೇಳೆ ಮಾಸ್ಕ್ ಧರಿಸದ ವಧು-ವರರಿಗೆ ಕೋರ್ಟ್ ಮಾಡಿದ್ದೇನು? title=

ನವದೆಹಲಿ: ಕರೋನಾ ಬಿಕ್ಕಟ್ಟಿನ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮೊದಲೇ ನಿಶ್ಚಯವಾಗಿರುವ ಮದುವೆ (Marriage) ನಡೆಸಲು ಅನುವು ಮಾಡಿಕೊಳ್ಳಲಾಗಿದೆ. ಮದುವೆಯ ಸಂದರ್ಭದಲ್ಲಿ ವಧು-ವರರು ಮುಖವಾಡ ಧರಿಸದ ಕಾರಣ ಇಬ್ಬರಿಗೂ ಪಂಜಾಬ್-ಹರಿಯಾಣ ಹೈಕೋರ್ಟ್ ಐದು ಸಾವಿರ ರೂಪಾಯಿ ದಂಡ ವಿಧಿಸಿದೆ. ಪಂಜಾಬ್‌ನ ಫಾಝಿಲ್ಕಾ ಜಿಲ್ಲೆಯ ಪ್ರೇಮಿ ದಂಪತಿಗಳು ಮದುವೆಯ ಸಮಯದಲ್ಲಿ ಮಾಸ್ಕ್ (Mask) ಧರಿಸದ ಕಾರಣ ದಾಖಲಾದ ಪ್ರಕರಣದ ವಿಚಾರಣೆ ನಡೆಸಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ ನವ ವಧು-ವರರಿಗೆ ದಂಡ ವಿಧಿಸಿತು. ಇವರು ಪಾವತಿಸಿದ ದಂಡವನ್ನು ಮಾಸ್ಕ್ ಗಳನ್ನು ಖರೀದಿಸಲು ದಂಡವನ್ನು ಖರ್ಚು ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.

ತಮಾಷೆಯೆಂದರೆ ಈ ಪ್ರಕರಣದಲ್ಲಿ ದಂಡದ ಶಿಕ್ಷೆ ಪಡೆದ ಗಂಡ ಮತ್ತು ಹೆಂಡತಿ ಹೈಕೋರ್ಟ್‌ನಲ್ಲಿಯೇ ಆಶ್ರಯ ಪಡೆದರು. ವಾಸ್ತವವಾಗಿ ಪಂಜಾಬ್‌ನ ಫಾಜಿಲ್ಕಾ ಜಿಲ್ಲೆಯ ಪ್ರೀತಿಯ ದಂಪತಿಗಳು ತಮ್ಮ ಸುರಕ್ಷತೆಗಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಪ್ರೀತಿಯ ದಂಪತಿಗಳು ತಮ್ಮ ಕುಟುಂಬ ಸದಸ್ಯರ ಇಚ್ಛೆಗೆ ವಿರುದ್ಧವಾಗಿ ವಿವಾಹವಾದರು, ನಂತರ ಪ್ರೇಮಿಗಳು ತಮ್ಮ ಮನೆಯವರು ತಮಗೆ ತೊಂದರೆ ನೀಡಬಹುದು ಅಥವಾ ಅವರನ್ನು ಬೇರ್ಪಡಿಸಲು ಪ್ರಯತ್ನಿಸಬಹುದು ಎಂಬ ಭಯದಲ್ಲಿದ್ದರು. ಇದರ ನಂತರ 27 ರಂದು, ಫಾಝಿಲ್ಕಾ ಅವರ ಎಸ್‌ಎಸ್‌ಪಿ ಎದುರು ಅವರ ಜೀವನದ ಸುರಕ್ಷತೆಗಾಗಿ ಮನವಿ ಮಾಡಿದ್ದರು.

ಈ ವಿಷಯವನ್ನು ಹೈಕೋರ್ಟ್‌ನಲ್ಲಿ ಕೇಳಲು ಬಂದ ಪ್ರೇಮಿ ದಂಪತಿಗಳ ಪರ ವಕೀಲರು, ಹುಡುಗರಿಬ್ಬರೂ ಮದುವೆ ವಯಸ್ಸಿಗೆ ಬಂದಿದ್ದು ಅವರು ಸ್ವಂತವಾಗಿ ಮದುವೆಯಾಗಿದ್ದಾರೆ. ಈ ಮದುವೆ ಕಾನೂನುಬದ್ಧವಾಗಿದೆ. ಆದರೆ ಅವರ ಕುಟುಂಬ ಸದಸ್ಯರು ಈ ಮದುವೆಯನ್ನು ಒಪ್ಪುತ್ತಿಲ್ಲ ಮತ್ತು ಹುಡುಗ ಹುಡುಗಿಯನ್ನು ಪ್ರತ್ಯೇಕಿಸಲು ಪ್ರಯತ್ನಿಸುತ್ತಾರೆ  ಎಂದು ವಾದಿಸಿದರು. ಪ್ರಕರಣವನ್ನು ಆಲಿಸಿದಹೈಕೋರ್ಟ್ ಅವರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು . ಪ್ರೇಮಿ ದಂಪತಿಗಳು ವಯಸ್ಕರಾದ ಕಾರಣ ಇವರಿಬ್ಬರಿಗೂ ಭದ್ರತೆ ಒದಗಿಸುವಂತೆ ಜಿಲ್ಲೆಯ ಎಸ್‌ಎಸ್‌ಪಿಗೆ ಆದೇಶಿಸಿದೆ.

Trending News