Amazon Great Republic Day Sale: ಆನ್‌ಲೈನ್ ಸೇಲ್ ಪ್ಲಾಟ್ಫಾರ್ಮ್ ಆಗಿರುವ ಅಮೆಜಾನ್ ತನ್ನ ವರ್ಷದ ಮೊದಲ ದೊಡ್ಡ ಸೇಲ್ 'ಗ್ರೇಟ್ ರಿಪಬ್ಲಿಕ್ ಡೇ ಸೇಲ್'ಅನ್ನು ಘೋಷಿಸಿದೆ. ಈ ಸೇಲ್ ಪ್ರತಿ ವರ್ಷ ಗಣರಾಜ್ಯ ದಿನದಂದು ನಡೆಯುತ್ತದೆ. ಅಮೆಜಾನ್ ಸೇಲ್ ವಿವಿಧ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತದೆ.
ಅಮೆಜಾನ್ ಸೇಲ್:
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ಗಾಗಿ ಗ್ರಾಹಕರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಸೇಲ್ ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್, ಟ್ಯಾಬ್ಲೆಟ್ PC ಗಳು ಮತ್ತು ಹೆಚ್ಚಿನ ಉತ್ಪನ್ನಗಳ ಮೇಲೆ ವಿವಿಧ ರೀತಿಯ ರಿಯಾಯಿತಿಗಳನ್ನು ನೀಡುತ್ತದೆ. ಈ ಸೇಲ್‌ನಲ್ಲಿ ಗ್ರಾಹಕರು ಗೃಹೋಪಯೋಗಿ ವಸ್ತುಗಳು, ಅಡುಗೆ ಉಪಕರಣಗಳು, ಟೆಲಿವಿಷನ್‌ಗಳು ಮತ್ತು ಇತರ ವಸ್ತುಗಳ ಮೇಲೆ ಆಕರ್ಷಕ ಕೊಡುಗೆಗಳನ್ನು ಪಡೆಯಬಹುದು.
ಇದನ್ನೂ ಓದಿ : Jio, Vi ಯೋಜನೆಗಳ ನಡುವೆ ಜಟಾಪಟಿ : ಯಾವ ಕಂಪನಿ ಹೆಚ್ಚು ಪ್ರಯೋಜನ ನೀಡುತ್ತದೆ?
Amazon ಆಫರ್: Amazon ರಿಯಾಯಿತಿ
ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಗ್ರಾಹಕರಿಗೆ ತಮ್ಮ ನೆಚ್ಚಿನ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿಸಲು ಉತ್ತಮ ಅವಕಾಶವಾಗಿದೆ. ಈ ಅಮೆಜಾನ್ ಸೇಲ್ ಕಳೆದ ವರ್ಷದ ಅಂತ್ಯದ ಸೇಲ್ ಅನ್ನು ಮಿಸ್ ಮಾಡಿಕೊಂಡವರಿಗೆ ಕಡಿಮೆ ಬೆಲೆಯಲ್ಲಿ ತಮ್ಮ ನೆಚ್ಚಿನ ಉತ್ಪನ್ನಗಳನು ಖರೀದಿಸಲು ಇರುವ ಅವಕಾಶವಾಗಿದೆ. ಅಮೆಜಾನ್ ರಿಪಬ್ಲಿಕ್ ಡೇ ಸೇಲ್ ಯಾವಾಗ ಪ್ರಾರಂಭವಾಗುತ್ತದೆ? ಯಾವ ಉತ್ಪನ್ನಗಳು ಮೇಲೆ ಎಷ್ಟು ರಿಯಾಯಿತಿ ಇರಲಿದೆ ಎನ್ನವ ಸಂಪೂರ್ಣ ವಿವರಗಳನ್ನು ಇಲ್ಲಿ ಕಾಣಬಹುದು.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಡೇಟ್ :
Amazonನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಜನವರಿ 13 ರಂದು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಅಮೆಜಾನ್ ಪ್ರೈಮ್ ಸದಸ್ಯರು 12 ಗಂಟೆಗಳ ಮೊದಲು ಅಂದರೆ ಜನವರಿ 13 ರ ಮಧ್ಯರಾತ್ರಿ 12 ಗಂಟೆಯಿಂದಲೇ ಈ ಸೇಲ್ ನಲ್ಲಿ ವಸ್ತುಗಳನ್ನು ಖರೀದಿಸಬಹುದು. ಪ್ರಸ್ತುತ, ಈ ಸೇಲ್ ನ ಬ್ಯಾನರ್ Amazon ಅಪ್ಲಿಕೇಶನ್‌ನಲ್ಲಿ ಮಾತ್ರ ಗೋಚರಿಸುತ್ತದೆ. ಆದರೆ ಶೀಘ್ರದಲ್ಲೇ ಇದು ವೆಬ್‌ಸೈಟ್‌ನಲ್ಲಿಯೂ ಕಾಣಿಸಲಿದೆ. ಈ ಸೇಲ್‌ನಲ್ಲಿ ಲಭ್ಯವಿರುವ ನಿರ್ದಿಷ್ಟ ಡೀಲ್‌ಗಳು ಮತ್ತು ಕೊಡುಗೆಗಳ ಕುರಿತು ಮಾಹಿತಿಯನ್ನು ಮಾರಾಟ ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಒದಗಿಸಲಾಗುತ್ತದೆ.
ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಸಮಯದಲ್ಲಿ ಬ್ಯಾಂಕ್ ಕೊಡುಗೆಗಳು :
ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್‌ನಲ್ಲಿ ಗ್ರಾಹಕರು ಅನೇಕ ಆಕರ್ಷಕ ಬ್ಯಾಂಕಿಂಗ್ ಕೊಡುಗೆಗಳನ್ನು ಪಡೆಯಬಹುದು. SBI ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ಬಳಸಿಕೊಂಡು ಮಾಡಿದ ಖರೀದಿಗಳ ಮೇಲೆ ಹೆಚ್ಚುವರಿ 10% ರಿಯಾಯಿತಿ ಸಿಗಲಿದೆ. ಇದು EMI ವಹಿವಾಟುಗಳನ್ನು ಒಳಗೊಂಡಿರುತ್ತದೆ. ಸ್ಮಾರ್ಟ್‌ಫೋನ್‌ಗಳು, ಗೃಹೋಪಯೋಗಿ ವಸ್ತುಗಳು, ಟಿವಿ ಇತ್ಯಾದಿಗಳ ಮೇಲೆ ಉತ್ತಮ ಕೊಡುಗೆಗಳನ್ನು ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ : WhatsAppನಲ್ಲಿ ಡಾಕ್ಯುಮೆಂಟ್ ಸ್ಕ್ಯಾನ್ ಮಾಡಬಹುದು! ಹೇಗೆ ಗೊತ್ತಾ?
ಅಮೆಜಾನ್ ಸೇಲ್‌ನಲ್ಲಿ ನಿರೀಕ್ಷಿಸಬಹುದಾದ ಕೆಲವು ಉತ್ತಮ :
- ಸ್ಮಾರ್ಟ್ ವಾಚ್‌ಗಳು, ಲ್ಯಾಪ್‌ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಇಯರ್‌ಬಡ್‌ಗಳಂತಹ ಎಲೆಕ್ಟ್ರಾನಿಕ್ಸ್‌ಗಳ ಮೇಲೆ 75% ವರೆಗೆ ರಿಯಾಯಿತಿ.
- ಟಿವಿಗಳು ಮತ್ತು ಪ್ರೊಜೆಕ್ಟರ್‌ಗಳ ಮೇಲೆ 65% ವರೆಗೆ ರಿಯಾಯಿತಿ.
- ಅಲೆಕ್ಸಾ ಮತ್ತು ಫೈರ್ ಟಿವಿ ಸಾಧನಗಳಲ್ಲಿ 35% ವರೆಗೆ ರಿಯಾಯಿತಿ.
- ಮೊಬೈಲ್ ಫೋನ್‌ಗಳು ಮತ್ತು ಪರಿಕರಗಳು, ವಾಶಿಂಗ್ ಮೆಷಿನ್ ಗಳ ಮೇಲೆ 40% ವರೆಗೆ ರಿಯಾಯಿತಿ.
- ರೆಫ್ರಿಜರೇಟರ್‌ಗಳು ಮತ್ತು AC ಗಳ ಮೇಲೆ 65% ವರೆಗೆ ರಿಯಾಯಿತಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.