ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ

ಆನ್‌ಲೈನ್ ಡೌನ್‌ಲೋಡ್ ಅಥವಾ ಡೌನ್‌ಲೋಡ್‌ಗೆ ಅರ್ಜಿ ಸಲ್ಲಿಸುವ ಕುರಿತಂತೆ ಯುಐಡಿಎಐ ಟ್ವೀಟ್ ಮಾಡಿ ಜನರನ್ನು ಎಚ್ಚರಿಸಿದೆ.  

Last Updated : Jun 19, 2020, 09:55 AM IST
ಆನ್‌ಲೈನ್‌ನಲ್ಲಿ ಆಧಾರ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ title=

ನವದೆಹಲಿ: ಆಧಾರ್ ಕಾರ್ಡ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮೊಬೈಲ್ ಸಿಮ್ ತೆಗೆದುಕೊಳ್ಳುವುದರಿಂದ ಹಿಡಿದು ಕಾರು ಖರೀದಿಸುವವರೆಗೆ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ (Aadhaar) ಅಗತ್ಯ. ಪ್ರತಿ ಸಣ್ಣ ಮತ್ತು ದೊಡ್ಡ ಕೆಲಸಗಳಲ್ಲಿ ಆಧಾರ್ ಬಳಸಲಾಗುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಆಧಾರ್ ಕಾರ್ಡ್ (Aadhaar Card) ಹೊಂದಿರುವುದು ಅತ್ಯಗತ್ಯ. ಒಂದೊಮ್ಮೆ ನೀವು ಆನ್‌ಲೈನ್‌ನಲ್ಲಿ ಆಧಾರ್‌ಗೆ ಅರ್ಜಿ ಸಲ್ಲಿಸುತ್ತಿದ್ದರೆ ಜಾಗರೂಕರಾಗಿರಿ. ಆನ್‌ಲೈನ್ ಡೌನ್‌ಲೋಡ್ ಅಥವಾ ಡೌನ್‌ಲೋಡ್‌ಗೆ ಅರ್ಜಿ ಸಲ್ಲಿಸುವ ಕುರಿತಂತೆ ಯುಐಡಿಎಐ ಟ್ವೀಟ್ ಮಾಡಿ ಜನರನ್ನು ಎಚ್ಚರಿಸಿದೆ. ನಿಮ್ಮ ಆಧಾರ್ ಅನ್ನು ಅಧಿಕೃತ ಯುಐಡಿಎಐ ಪೋರ್ಟಲ್‌ನಿಂದ ಮಾತ್ರ ಅಂದರೆ https://eaadhaar.uidai.gov.in. ನಿಂದ ಮಾತ್ರವೇ ಡೌನ್‌ಲೋಡ್ ಮಾಡುವಂತೆ ಟ್ವೀಟ್ ಮೂಲಕ ಎಚ್ಚರಿಕೆ ನೀಡಲಾಗಿದೆ. 

ಕೊನೆಯ ಅವಕಾಶ! ಜೂನ್ 30 ರ ಮೊದಲು PAN-Aadhaar ಲಿಂಕ್ ಮಾಡಿ, ಇಲ್ಲದಿದ್ದರೆ...

ಡೌನ್‌ಲೋಡ್ ಮಾಡಲು ನೀವು ಸಾರ್ವಜನಿಕ ಕಂಪ್ಯೂಟರ್ ಅನ್ನು ಬಳಸಿದ್ದರೆ, ಪ್ರಿಂಟ್ ಔಟ್ ಮಾಡಿದ ನಂತರ ಡೌನ್‌ಲೋಡ್ ಮಾಡಿದ ಫೈಲ್ ಅನ್ನು ಅಳಿಸಲು ಮರೆಯಬೇಡಿ. ಅಲ್ಲದೆ ಜನರು ತಮ್ಮ ಆಧಾರ್ ಡೌನ್‌ಲೋಡ್ ಮಾಡಲು ಸುರಕ್ಷಿತ ಕಂಪ್ಯೂಟರ್ ಅನ್ನು ಬಳಸಬೇಕು. ಅಥವಾ ಅದನ್ನು ನಿಮ್ಮ ವೈಯಕ್ತಿಕ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಿಂದ ಮಾಡಿ ಎಂದು ಹೇಳಲಾಗಿದೆ.

ಯುಐಡಿಎಐ ವೆಬ್‌ಸೈಟ್‌ನಿಂದ ನಿಮ್ಮ ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ?
ಯುಐಡಿಎಐ (UIDAI)ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://uidai.gov.in/, 'ಆಧಾರ್ ಡೌನ್‌ಲೋಡ್ ಮಾಡಿ' ಆಯ್ಕೆಯನ್ನು ಆರಿಸಿ ಅಥವಾ https://eaadhaar.uidai.gov.in/ ಈ ಲಿಂಕ್‌ಗೆ ಭೇಟಿ ನೀಡಿ, '‘I have' ವಿಭಾಗದಿಂದ ಆಧಾರ್ ಆಯ್ಕೆಯನ್ನು ಆರಿಸಿ, 12 ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನೀವು ಆಧಾರ್ ಸಂಖ್ಯೆಯನ್ನು ತೋರಿಸಲು ಬಯಸದಿದ್ದರೆ 'ಮಾಸ್ಕ್ ಆಧಾರ್' ಆಯ್ಕೆಮಾಡಿ. ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ರಿಜಿಸ್ಟರ್ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಪಡೆಯಲು 'ಕಳುಹಿಸು ಒಟಿಪಿ' ಕ್ಲಿಕ್ ಮಾಡಿ. ಅದರ ನಂತರ ಒಟಿಪಿ ನಮೂದಿಸಿ, ಇ-ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಲು 'ವೆರಿಫೈ ಮತ್ತು ಡೌನ್‌ಲೋಡ್' ಕ್ಲಿಕ್ ಮಾಡಿ.

ನಿಮ್ಮ ಆಧಾರ್ ಕಾರ್ಡ್ ಕಳೆದು ಹೋಗಿದೆಯೇ? ಚಿಂತೆಬಿಡಿ ಈ ರೀತಿ ಪಡೆಯಿರಿ DUPLICATE Aadhaar

ಇ-ಆಧಾರ್ ಕಾರ್ಡ್ ಅನ್ನು ನಿಮ್ಮ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡಲಾಗುತ್ತದೆ. ಇದು ಪಾಸ್‌ವರ್ಡ್‌ನಿಂದ ರಕ್ಷಿಸಲ್ಪಡುತ್ತದೆ ಮತ್ತು ನಿಮ್ಮ ನಿವಾಸದ ಪಿನ್ ಕೋಡ್ ಅನ್ನು ನಮೂದಿಸಿದ ನಂತರವೇ ತೆರೆಯುತ್ತದೆ. ನೀವು ಅದನ್ನು ಡಿಜಿಟಲ್ ಸ್ವರೂಪದಲ್ಲಿ ಉಳಿಸಬಹುದು ಅಥವಾ ಅದರಿಂದ ಮುದ್ರಣವನ್ನು ತೆಗೆದುಕೊಳ್ಳಬಹುದು. ಆಧಾರ್ ಕಾರ್ಡ್‌ನ ಡೌನ್‌ಲೋಡ್ ಮಾಡಿದ ಫೈಲ್‌ನ ಪಾಸ್‌ವರ್ಡ್ 8 ಅಕ್ಷರಗಳಾಗಿರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಇದರಲ್ಲಿ ಆಧಾರ್ ಕಾರ್ಡ್‌ನಲ್ಲಿ ನೀಡಲಾದ ಹೆಸರಿನ ಮೊದಲ 4 ಅಕ್ಷರಗಳು ಮತ್ತು ನಂತರ ನಿಮ್ಮ ಹುಟ್ಟಿದ ವರ್ಷವನ್ನು ಬರೆಯಬೇಕಾಗುತ್ತದೆ.
 

Trending News