ವಾಷಿಂಗ್ಟನ್: ಅಮೆರಿಕ ಅಂತಿಮವಾಗಿ ವಿಶ್ವ ಆರೋಗ್ಯ ಸಂಸ್ಥೆ (World Health Organization) ಯಿಂದ ತನ್ನ ಸದಸ್ಯತ್ವವನ್ನು ಹಿಂತೆಗೆದುಕೊಂಡಿದೆ. 194 ಸದಸ್ಯರ ಸಂಘಟನೆಯಲ್ಲಿ ಒಂದು ದೇಶ ನಿರ್ಗಮಿಸುವುದರಿಂದ ಯಾವುದೇ ಪರಿಣಾಮ ಬೀರದಿರಬಹುದು. ಆದರೆ ಅಮೇರಿಕಾ ದೇಶದ ನಿರ್ಗಮನವು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರಲಿದೆ. ಪ್ರಪಂಚದಾದ್ಯಂತ ಹರಡುವ ರೋಗಗಳ ಬಗ್ಗೆ ವಿಶೇಷವಾಗಿ ಬಡ ಜನರಲ್ಲಿ ಕಾಳಜಿ ವಹಿಸಲು ಯಾರೂ ಉಳಿಯುವುದಿಲ್ಲ. ಇದರಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯಬಹುದು.
ಡಬ್ಲ್ಯುಎಚ್ಒನಿಂದ ಬೇರ್ಪಟ್ಟ ಅಮೆರಿಕ
ಹೆಚ್ಚು ಹಣ ಹೊಂದಿರುವ ದೇಶ ಅಮೆರಿಕ :
ಲಭ್ಯವಿರುವ ಮಾಹಿತಿಯ ಪ್ರಕಾರ, ಡಬ್ಲ್ಯುಎಚ್ಒ (WHO) ಯುಎಸ್ನಿಂದ ಹೆಚ್ಚಿನ ಹಣವನ್ನು ಪಡೆಯುತ್ತಿದೆ. WHO ಒಟ್ಟು ಬಜೆಟ್ನ 15 ಪ್ರತಿಶತ (ಸುಮಾರು 893 ಮಿಲಿಯನ್) ಯುಎಸ್ ನಿಂದ ಬಂದಿದೆ. ಅಂದರೆ ಅಮೆರಿಕವು ವಾರ್ಷಿಕ ವೆಚ್ಚದಲ್ಲಿ ಹೆಚ್ಚಿನ ಹಣವನ್ನು ಪಾವತಿಸುತ್ತಿದೆ. ಈ ಹಣವು 2021ರ ವೇಳೆಗೆ ಕೊನೆಗೊಳ್ಳುತ್ತದೆ. ಇದರ ನಂತರ ದೊಡ್ಡ ನಿಧಿಗಳಿಗಾಗಿ ಜರ್ಮನಿ ಮತ್ತು ಜಪಾನ್ನಂತಹ ದೇಶಗಳನ್ನು ಮಾತ್ರ ಅವಲಂಬಿಸಬೇಕಾಗುತ್ತದೆ. ಆದಾಗ್ಯೂ ಈ ದೇಶಗಳು ಅಮೆರಿಕಕ್ಕಿಂತ ಕಡಿಮೆ ಹಣವನ್ನು ನೀಡುತ್ತವೆ.
ಈ ಗಂಭೀರ ರೋಗಗಳ ಮೇಲಿನ ಯುದ್ಧ ಗೆಲ್ಲುವುದು ಕಷ್ಟಕರ!
ಯುಎಸ್ ನಿಂದ ಬರುವ ಹಣ ನಿಂತುಹೋದರೆ ನಂತರ, ಪ್ರಪಂಚದಾದ್ಯಂತ ಹಲವು ರೋಗಗಳ ವಿರುದ್ಧ ಹೋರಾಡುವುದು ಕಷ್ಟ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಕೊರೊನಾವೈರಸ್ ಸಾಂಕ್ರಾಮಿಕವು ಈ ಸಮಯದಲ್ಲಿ ನಮ್ಮೆಲ್ಲರಿಗೂ ಒಂದು ಸವಾಲಾಗಿದೆ. ಆದರೆ ಕಳೆದ ಹಲವಾರು ದಶಕಗಳಿಂದ ಟಿಬಿ, ಮಲೇರಿಯಾ, ಕಲಾಜಾರ್ ಮತ್ತು ಎಚ್ಐವಿ ಏಡ್ಸ್ ರೋಗವು ಬಡ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ದೊಡ್ಡ ಸವಾಲಾಗಿ ಉಳಿದಿದೆ. ಶ್ರೀಮಂತರ ಗುಂಪಿನಲ್ಲಿ ಬಡ ಜನರು ಸಾಯದಂತೆ ವಿಶ್ವ ಆರೋಗ್ಯ ಸಂಸ್ಥೆ ಇದೇ ರೀತಿಯ ರೋಗಗಳ ತಡೆಗಟ್ಟುವಿಕೆಗಾಗಿ ಪ್ರಚಾರ ನಡೆಸುತ್ತಿದೆ. ಇದೀಗ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುತ್ತಿರುವುದರಿಂದ ಅಭಿವೃದ್ಧಿಶೀಲ ರಾಷ್ಟ್ರಗಳು ಮತ್ತು ಬಡ ದೇಶಗಳಲ್ಲಿ ಈ ರೋಗಗಳ ಹೆಚ್ಚಳದ ಅಪಾಯವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ.
ಕರೋನಾವೈರಸ್ ವಿಷಯದಲ್ಲಿ ಯು-ಟರ್ನ್ ತೆಗೆದುಕೊಂಡ ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ಆರೋಗ್ಯ ಸಂಸ್ಥೆಯು ಕರೋನಾವೈರಸ್ ಕೋವಿಡ್ -19 (COVID-19) ಸೋಂಕನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸುವುದಲ್ಲಿ ವಿಳಂಬ ಧೋರಣೆ ತಾಳಿದೆ ಮತ್ತು ಚೀನಾ ಹೇಳಿದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಏಪ್ರಿಲ್ನಿಂದ ಡಬ್ಲ್ಯುಎಚ್ಒಗೆ ಧನಸಹಾಯ ನೀಡುವುದನ್ನು ನಿಲ್ಲಿಸಿದೆ ಎಂಬುದು ಗಮನಾರ್ಹ. ಆದಾಗ್ಯೂ ಒಪ್ಪಂದದ ಪ್ರಕಾರ ಯುಎಸ್ 2021 ರವರೆಗೆ WHO ಗೆ ಹಣವನ್ನು ನೀಡುವುದನ್ನು ಮುಂದುವರಿಸುತ್ತದೆ. ಆದರೆ ಶೀಘ್ರದಲ್ಲೇ ಪರಿಹಾರ ಸಿಗದಿದ್ದರೆ ಬಡ ದೇಶಗಳಲ್ಲಿ ನಡೆಯುತ್ತಿರುವ ಆರೋಗ್ಯ ಕಾರ್ಯಕ್ರಮಗಳ ಮೇಲೆ ಪರಿಣಾಮ ಬೀರಬಹುದು.