ನವದೆಹಲಿ: ಅಮೆರಿಕ ಇನ್ನು ಮುಂದೆ ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಸದಸ್ಯ ರಾಷ್ಟ್ರವಾಗಿರುವುದಿಲ್ಲ. ಈ ನಿಟ್ಟಿನಲ್ಲಿ ಡೊನಾಲ್ಡ್ ಟ್ರಂಪ್ (Donald Trump) ಸರ್ಕಾರ ತನ್ನ ನಿರ್ಧಾರವನ್ನು ಡಬ್ಲ್ಯುಎಚ್ಒಗೆ ಕಳುಹಿಸಿದೆ. ಇದು ಡಬ್ಲ್ಯುಎಚ್ಒ ಮತ್ತು ಇತರ ದೇಶಗಳಿಗೆ ಭಾರಿ ಹೊಡೆತವಾಗಿದೆ. ಡಬ್ಲ್ಯುಎಚ್ಒ ಚೀನಾದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಕರೋನಾವೈರಸ್ ಪ್ರಕರಣದಲ್ಲಿ ಟ್ರಂಪ್ ಸರ್ಕಾರ ಆರೋಪಿಸಿತ್ತು. ಅಲ್ಲದೆ ಯುಎಸ್ ಸರ್ಕಾರವು ಏಪ್ರಿಲ್ ನಿಂದ WHO ಗೆ ಹಣವನ್ನು ನೀಡುವುದನ್ನು ನಿಲ್ಲಿಸಿತು.
ಅಮೆರಿಕದ ಮಾಧ್ಯಮಗಳ ಪ್ರಕಾರ, ಟ್ರಂಪ್ ಸರ್ಕಾರವು ಡಬ್ಲ್ಯುಎಚ್ಒ (WHO) ದಿಂದ ತನ್ನ ಸದಸ್ಯತ್ವವನ್ನು ಹಿಂಪಡೆಯಲು ಸಂಬಂಧಿಸಿದ ಪತ್ರವನ್ನು ಕಳುಹಿಸಿದೆ. ಜುಲೈ 6, 2021 ರ ನಂತರ ಅಮೆರಿಕ WHO ನ ಸದಸ್ಯ ರಾಷ್ಟ್ರವಾಗಿರುವುದಿಲ್ಲ. 1984ರಲ್ಲಿ ನಿಗದಿಪಡಿಸಿದ ನಿಯಮಗಳ ಪ್ರಕಾರ ಯಾವುದೇ ರಾಷ್ಟ್ರ ಸದಸ್ಯತ್ವವನ್ನು ಹಿಂತೆಗೆದುಕೊಂಡ ಒಂದು ವರ್ಷದ ನಂತರ ದೇಶವನ್ನು WHO ನಿಂದ ಹೊರಹಾಕಲಾಗುತ್ತದೆ. ಇದರ ಹೊರತಾಗಿ ಅಮೆರಿಕ ಡಬ್ಲ್ಯುಎಚ್ಒನ ಎಲ್ಲಾ ಬಾಕಿಗಳನ್ನು ಮರುಪಾವತಿಸಬೇಕಾಗಿದೆ.
ಎಚ್ಚರ! ಎಚ್ಚರ! ಗಾಳಿಯಲ್ಲೂ ಹರಡುತ್ತಂತೆ ಕರೋನಾವೈರಸ್
ಅಮೆರಿಕದ ಸೆನೆಟರ್ ರಾಬರ್ಟ್ ಮೆನೆಂಡೆಜ್ ಅವರು ಡಬ್ಲ್ಯುಎಚ್ಒನಿಂದ ಬೇರ್ಪಟ್ಟ ಬಗ್ಗೆ ಯುಎಸ್ ನಿಂದ ಮಾಹಿತಿ ಬಂದಿದೆ ಎಂದು ಟ್ವೀಟ್ ಮಾಡುವ ಮೂಲಕ ಖಚಿತಪಡಿಸಿದ್ದಾರೆ. ಟ್ರಂಪ್ ಸರ್ಕಾರದ ನಿರ್ಧಾರ ಅಮೆರಿಕವನ್ನು ಅನಾರೋಗ್ಯ ಮತ್ತು ಒಂಟಿಯಾಗಿ ಮಾಡುತ್ತದೆ ಎಂದವರು ಬರೆದಿದ್ದಾರೆ.
Congress received notification that POTUS officially withdrew the U.S. from the @WHO in the midst of a pandemic.
To call Trump’s response to COVID chaotic & incoherent doesn't do it justice. This won't protect American lives or interests—it leaves Americans sick & America alone.
— Senator Bob Menendez (@SenatorMenendez) July 7, 2020
ಕರೋನಾವೈರಸ್ ವಿಷಯದಲ್ಲಿ ಯು-ಟರ್ನ್ ತೆಗೆದುಕೊಂಡ ವಿಶ್ವ ಆರೋಗ್ಯ ಸಂಸ್ಥೆ
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಗುಳಿಯುವುದನ್ನು ಏಪ್ರಿಲ್ ನಲ್ಲಿಯೇ ಘೋಷಿಸಿದ್ದರು. ಡಬ್ಲ್ಯುಎಚ್ಒಗೆ ನೀಡಿದ ಅನುದಾನದ ಹಣವನ್ನು ಕೂಡ ತಕ್ಷಣದಿಂದ ತಡೆಹಿಡಿಯಲಾಗಿದೆ. ಡಬ್ಲ್ಯುಎಚ್ಒ ಉದ್ದೇಶಪೂರ್ವಕವಾಗಿ ಚೀನಾದಲ್ಲಿ ಕರೋನಾವೈರಸ್ ಕೋವಿಡ್ -19 (COVID-19) ಗುರುತಿಸುವುದನ್ನು ವಿಳಂಬಗೊಳಿಸಿದೆ ಮತ್ತು ಅದನ್ನು ಸಾಂಕ್ರಾಮಿಕ ರೋಗ ಎಂದು ಘೋಷಿಸಿದೆ ಎಂದು ಯುಎಸ್ ಆರೋಪಿಸಿದೆ. ಅದೇ ಸಮಯದಲ್ಲಿ WHO ಚೀನಾ ಸರ್ಕಾರದ ಆದೇಶದ ಮೇರೆಗೆ ಕೆಲಸ ಮಾಡಲು ಪ್ರಾರಂಭಿಸಿದೆ ಎಂದು ಡೊನಾಲ್ಡ್ ಟ್ರಂಪ್ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.