Coronavirusನ ಈ ಔಷಧಿ ಪಡೆಯಲು AAdhaar Card ಕಡ್ಡಾಯ

ಈ ಕುರಿತು ಸುತ್ತೋಲೆ ಹೊರಡಿಸಿರುವ ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್, ವೈದ್ಯರ ನಿರ್ದೇಶನ, ಕೊವಿಡ್-19 ಪಾಸಿಟಿವ್ ರಿಪೋರ್ಟ್ ಹಾಗೂ ಆಧಾರ್ ಕಾರ್ಡ್ ತೋರಿಸಿದರೆ ಮಾತ್ರ ಕೊವಿಡ್-19 ನ ಔಷಧಿ ಸಿಗಲಿದೆ.  

Last Updated : Jul 12, 2020, 02:15 PM IST
Coronavirusನ ಈ ಔಷಧಿ ಪಡೆಯಲು AAdhaar Card ಕಡ್ಡಾಯ title=

ನವದೆಹಲಿ: ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಮಹಾರಾಷ್ಟ್ರದಲ್ಲಿ ಮಾಸ್ಕ್, ಸ್ಯಾನಿಟೈಸರ್ ಹಾಗೂ ಔಷಧಿಗಳ ಕಪ್ಪು ಮಾರಾಟದಲ್ಲಿ ಹೆಚ್ಚಳವಾಗಿದೆ. ಈ ಹಿನ್ನೆಲೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಸುತ್ತೊಲೆಯೊಂದನ್ನು ಜಾರಿಗೊಳಿಸಿ, ಕೊರೊನಾ ವೈರಸ್ ಔಷಧಿ ರೇಮ್ದೆಸಿವಿರ್ ಔಷಧಿಗಾಗಿ ಇನ್ಮುಂದೆ ಆಧಾರ್ ಕಾರ್ಡ್ ಅನಿವಾರ್ಯವಾಗಿದೆ ಎಂದು ಹೇಳಿದೆ. ಹೀಗಾಗಿ ಇನ್ಮುಂದೆ ವೈದ್ಯರ ನಿರ್ದೇಶನ, ಕೊವಿಡ್-19 ಪಾಸಿಟಿವ್ ವರದಿ ಹಾಗೂ ಅಧಾರ ಕಾರ್ಡ್ ಆಧಾರದ ಮೇಲೆಯೇ ಜನರಿಗೆ ಈ ಔಷಧಿ ಸಿಗಲಿದೆ.

ಔಷಧಿಗಳ ಅಕ್ರಮ ಮಾರಾಟಗಾರರ ವಿರುದ್ಧ ಕಠಿಣ ಕ್ರಮ
ಇತ್ತೀಚೆಗಷ್ಟೇ ಈ ಕುರಿತು ಮಹಾರಾಷ್ಟ್ರ ರಾಜ್ಯ ಗೃಹ ಸಚಿವ ಅನಿಲ್ ದೇಶಮುಖ್, ರಾಜ್ಯದಲ್ಲಿ ರೇಮ್ದೆಶಿವಿರ್ (remdesivir)  ಹಾಗೂ ತೊಸಲಿಜುಮಾಬ್  (tocilizumab) ಔಷಧಿಗಳ ಕೊರತೆ ಕುರಿತುFDA ಅಧಿಕಾರಿಗಳು ಹಾಗೂ ಮುಂಬೈ ಪೊಲೀಸರ ಜೊತೆ ಸಭೆ ನಡೆಸಿದ್ದರು. ಬಳಿಕ ಮಾತನಾಡಿದ್ದ ಅವರು, "ಈ ಔಷಧಿಗಳ ಅಕ್ರಮ ಮಾರಾಟವನ್ನು ತಡೆಯಲಿ FDA ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಲಿದ್ದಾರೆ ಎಂದಿದ್ದಾರೆ. ಅಷ್ಟ ಅಲ್ಲ ಈ ಔಷಧಿಗಳ ಅಕ್ರಮ ಮಾರಾಟಗಾರರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದರು.

ಮಹಾರಾಷ್ಟ್ರದ್ FDA ಸಚಿವ ರಾಜೇಂದ್ರ ಶಿಂಗ್ಣೆ ಇತ್ತೀಚೆಗಷ್ಟೇ ರೇಮ್ದೆಶಿವಿರ್ ಹಾಗೋ ತೊಸಲಿಜುಮಾಬ್ ಗಳ ಕೊರತೆ ಹಾಗೂ ಅಕ್ರಮ ಮಾರಾಟದ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆ ಮುಂಬೈನಲ್ಲಿ ತುರ್ತು ನೀರೀಕ್ಷಣೆ ನಡೆಸಿದ್ದರು. ಸದ್ಯ ಮಹಾರಾಷ್ಟ್ರದಲ್ಲಿ ಈ ಔಷಧಿಗಳನ್ನು ಖರೀದಿಸಲು ಕಾಣರು ಆಧಾರ್ ಕಾರ್ಡ್ ಹಾಗೂ ಇತರೆ ಕೆಲವು ದಾಖಲೆಗಳನ್ನು ಆವಶ್ಯಕವಾಗಿ ನೀಡಬೇಕಾಗಲಿದೆ.

ಆಧಾರ್ ಕಾರ್ಡ್ ಸಹಾಯದಿಂದ ಔಷಧಿ ಪೂರೈಕೆಯನ್ನು ಟ್ರ್ಯಾಕ್ ಮಾಡಲಾಗುವುದು
ಈ ಕುರಿತು ಮಾತನಾಡಿರುವ ಮಹಾರಾಷ್ಟ್ರದ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಸಚಿವ ರಾಜೇಂದ್ರ  ಸಿಂಗಣೆ, "ಕೊವಿಡ್ 19 ಔಷಧಿಯ ಕೊರತೆ ಹಾಗೂ ಅಕ್ರಮ ಮಾರಾಟದ ಹಿನ್ನೆಲೆ ಆಧಾರ್ ಕಾರ್ಡ್ ಅನ್ನು ಇದೀಗ ಕಡ್ಡಾಯಗೊಳಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಈ ಔಷಧಿಗಳ ಆವಶ್ಯಕತೆ ಇರುವ ಹಲವರು ದೂರುಗಳನ್ನು ನೀಡಿದ್ದಾರೆ. ಆದರೆ, ಇದೀಗ ಆಧಾರ್ ಕಾರ್ಡ್ ನಂಬರ್ ಸಹಾಯದಿಂದ ಈ ಔಷಧಿ ಯಾರಿಗೆ ಮತ್ತ್ತು ಯಾವಾಗ ನೀಡಲಾಗಿದೆ ಎಂಬುದನ್ನು ಪತ್ತೆಹಚ್ಚಲಾಗುವುದು" ಎಂದಿದ್ದಾರೆ.

Trending News