ಜೌನ್ಪುರ್: ಸೋಮವಾರದಂದು ಮಧ್ಯಪ್ರದೇಶದ ಜೌನ್ಪುರ್ ಜಿಲ್ಲೆಯಲ್ಲಿ ಗರ್ಭಿಣಿ ಮಹಿಳೆಗೆ ಆಧಾರ್ ಕಾರ್ಡ್ ಇಲ್ಲ ಎಂದುದ್ದಕ್ಕೆ ವೈದ್ಯರು ಚಿಕಿತ್ಸೆಯನ್ನೇ ನಿರಾಕರಿಸಿದ ಘಟನೆ ನಡೆದಿದೆ.ಇದರಿಂದಾಗಿ ಅನಿವಾರ್ಯವಾಗಿ ಆ ಮಹಿಳೆ ಅಸ್ಪತ್ರೆಯ ಗೆಟ್ ಬಳಿಯಲ್ಲಿಯೇ ಹೇರಿಗೆ ಮಾಡಿದ ಅಮಾನವೀಯ ನಡೆದಿದೆ.
ಈ ಆಸ್ಪತ್ರೆಯ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಆ ಮಹಿಳೆಯ ಪತಿ "ನಾವು ಆಸ್ಪತ್ರೆಗೆ ಹೋದಾಗ ಅಲ್ಲಿನ ಸಿಬ್ಬಂದಿ ನಮ್ಮಲ್ಲಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳು ಇಲ್ಲವೆಂದು ನಮ್ಮನ್ನು ವಾಪಾಸ್ ಕಳುಹಿಸಿದ್ದಾರೆ. ಇದೆ ಸಂದರ್ಭದಲ್ಲಿ ಆಸ್ಪತ್ರೆಯಿಂದ ಹೊರ ಬರುವಷ್ಟರಲ್ಲಿ ಅವಳು ಹೊರಗಡೆ ಇರುವ ಗೇಟ್ ಭಾಗದಲ್ಲಿ ಮಗುವಿಗೆ ಜನ್ಮವಿತ್ತಿದ್ದಾಳೆ. ಆ ಮಹಿಳೆಯ ಪತಿ ತಿಳಿಸಿದ್ದಾರೆ.
ಆದರೆ ಈ ಆರೋಪವನ್ನು ವೈದ್ಯಕೀಯ ಸೂಪರಿಂಟೆಂಡೆಂಟ್ ತಳ್ಳಿಹಾಕಿದ್ದಾರೆ .ಇದಕ್ಕೆ ಪ್ರತಿಕ್ರಯಿಸಿರುವ ಅವರು "ವೈದ್ಯರು ಆ ಮಹಿಳೆಯನ್ನು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲು ಸೂಚನೆ ನೀಡಿದ್ದಾರೆ, ಇದಕ್ಕೆ ಆ ಮಹಿಳೆಯು ತನಗೆ ಗೊತ್ತಿರುವ ಯಾರಾದರೋಬ್ಬರ ಜೊತೆ ಹೋಗುವೆ ಎಂದು ತಿಳಿಸಿದ್ದಾಳೆ. ಈ ಸಂದರ್ಭದಲ್ಲಿ ಹೆರಿಗೆ ನೋವು ಅನುಭವಿಸಿದ ಆಕೆ ಆಸ್ಪತ್ರೆಯ ಗೇಟ್ ತಲುಪುವಷ್ಟರಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈಗ ಆ ಮಗು ಆರೋಗ್ಯವಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.