ಅಜಯ್ ದೇವಗನ್ ಅವರಿಗೆ ಪ್ರಪೋಸ್ ಮಾಡಿದ ಕಾಜೋಲ್...

ಬಾಲಿವುಡ್ ಚಿತ್ರಗಳಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಜೋಡಿ ಅತ್ಯಂತ ಯಶಸ್ವಿಯಾಗಿದೆ ಮತ್ತು ಈ ಜೋಡಿ ಒಟ್ಟಿಗೆ ಮಾಡಿದ ಯಾವುದೇ ಚಿತ್ರಗಳು ಫ್ಲಾಪ್ ಆಗಿಲ್ಲ.

Last Updated : Aug 5, 2020, 08:00 AM IST
ಅಜಯ್ ದೇವಗನ್ ಅವರಿಗೆ ಪ್ರಪೋಸ್ ಮಾಡಿದ ಕಾಜೋಲ್... title=

ನವದೆಹಲಿ: ಬಾಲಿವುಡ್‌ನಲ್ಲಿ ದಶಕಗಳ ಕಾಲ ಎಲ್ಲರ ಹೃದಯದಲ್ಲಿ ಮನೆ ಮಾಡಿರುವ ನೆಚ್ಚಿನ ನಟಿ ಕಾಜೋಲ್ (Kajol) ಇಂದು 46 ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 5, 1974 ರಂದು ಜನಿಸಿದ ಕಾಜೋಲ್ ತನ್ನ ಮೊದಲ ಚಿತ್ರ 'ಬೆಖುಡಿ'ಗೆ ಸಹಿ ಹಾಕಿದಾಗ ಅವರು ಕೇವಲ 16 ವರ್ಷದವಳಾಗಿದ್ದರು. ಆ ಸಮಯದಲ್ಲಿ ಅವರು ಶಾಲೆಯಲ್ಲಿ ಓದುತ್ತಿದ್ದರು. ಬಳಿಕ ಸಿನಿಮಾ ರಂಗದಲ್ಲಿ ತಮ್ಮ ವೃತ್ತಿಜೀವನ ಮುಂದುವರೆಸುವ ಸಲುವಾಗಿ ಶಾಲೆಯನ್ನು ತೊರೆದರು. ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಕಾಜೋಲ್ ಕೂಡ ಒಬ್ಬರು. ಅವರ ಜನ್ಮದಿನದಂದು ಕೆಲವು ಆಸಕ್ತಿದಾಯಕ ವಿಷಯಗಳನ್ನು ನಾವಿಂದು ತಿಳಿಸಲಿದ್ದೇವೆ.

* ಕಾಜೋಲ್ ಚಲನಚಿತ್ರ ಕುಟುಂಬದಿಂದ ಬಂದವರು. ಅವರ ತಂದೆ ಶೋಮು ಮುಖರ್ಜಿ ನಿರ್ಮಾಪಕ-ನಿರ್ದೇಶಕರಾಗಿದ್ದಾರೆ. ತಾಯಿ ತನುಜಾ, ಚಿಕ್ಕಮ್ಮ ನೂತನ್, ನಾನಿ ಶೋಭನ ಸಮರ್ತ್ ಮತ್ತು ಪರಾನಣಿ ರತನ್ ಬಾಯಿ ಪ್ರಸಿದ್ಧ ನಟಿಯರು.
* ಕಾಜೋಲ್ ತನ್ನ ಮೊಂಡಾದ ವರ್ತನೆಗೆ ಹೆಸರುವಾಸಿಯಾಗಿದ್ದಾರೆ. ಅವರು ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದಿಲ್ಲ ಮತ್ತು ಅವರ ಪ್ರಕಾರ 100 ಜನರಲ್ಲಿ 99 ಜನರನ್ನು ಆಕೆ ಇಷ್ಟಪಡುವುದಿಲ್ಲ.
* ಬಾಲಿವುಡ್ ಚಿತ್ರರಂಗದಲ್ಲಿ ಕಾಜೋಲ್ ಮತ್ತು ಶಾರುಖ್ ಖಾನ್ ಜೋಡಿ ಬಹಳ ಯಶಸ್ವಿಯಾಗಿದೆ ಮತ್ತು ಈ ಜೋಡಿ ಒಟ್ಟಿಗೆ ನಟಿಸಿದ ಯಾವುದೇ ಚಿತ್ರವು ವಿಫಲವಾಗಲಿಲ್ಲ. 'ಬಾಜಿಗರ್', 'ಕರಣ್ ಅರ್ಜುನ್', 'ದಿಲ್ವಾಲೆ ದುಲ್ಹಾನಿಯಾ ಲೆ ಜಯೆಂಗೆ', 'ಕುಚ್ ಕುಚ್ ಹೋತಾ ಹೈ', 'ಕಭಿ ಖುಷಿ ಕಭಿ ಗಮ್', 'ಮೈ ನೇಮ್ ಈಸ್ ಖಾನ್' ಬ್ಲಾಕ್ಬಸ್ಟರ್ಗಳಾಗಿವೆ.
* 'ದಿಲ್ವಾಲೆ ದುಲ್ಹಾನಿಯಾ ಲೆ ಜಯಂಗೆ' ಚಿತ್ರದ ಶೀರ್ಷಿಕೆ ಎಲ್ಲರಿಗೂ ಇಷ್ಟವಾದರೆ, ಕಾಜೋಲ್ ಇದನ್ನು 'ತಪೋರಿ' ಎಂದು ಕರೆದರು. ಈ ಶೀರ್ಷಿಕೆಯನ್ನು ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಸೂಚಿಸಿದ್ದಾರೆ.
* ಪದ್ಮಶ್ರೀ ಪ್ರಶಸ್ತಿ ಪಡೆದ ಕಾಜೋಲ್ 6 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಕಾಜೋಲ್-ಅಜಯ್ ದೇವಗನ್ ಪ್ರೇಮಕಥೆ:
ಸಾಮಾನ್ಯವಾಗಿ ಪ್ರೇಮ ಸಂಬಂಧದಲ್ಲಿ ಒಬ್ಬ ಹುಡುಗ ಹುಡುಗಿಗೆ ಪ್ರಪೋಸ್ ಮಾಡುತ್ತಾರೆ.  ಆದರೆ ಇಲ್ಲಿ ಕಾಜೋಲ್ ಅಜಯ್ ದೇವಗನ್ ಅವರಿಗೆ ಪ್ರಪೋಸ್ ಮಾಡಿದ್ದಾರೆ. ಸೆಟ್‌ನಲ್ಲಿ ಅಜಯ್ ದೇವಗನ್ ಮತ್ತು ಕಾಜೋಲ್ ಮೊದಲ ಬಾರಿಗೆ ಭೇಟಿಯಾದರು, ಅಜಯ್ ದೇವಗನ್ ಅವರನ್ನು ಫರ್ಸ್ಟ್ ಟೈಮ್ ಭೇಟಿಯಾದಾಗ ಅವರಿಗೆ ತುಂಬಾ ಜಂಬಾ ಎಂದು ಭಾವಿಸಿದ್ದರಂತೆ. ಆದರೆ ನಂತರದ ದಿನಗಳಲ್ಲಿ ಇಬ್ಬರು ಉತ್ತಮ ಸ್ನೇಹಿತರಾದರು. ಕಾಜೋಲ್ ತನ್ನ ಬಾಯ್ ಫ್ರೆಂಡ್ ಗೆ ಸಂಬಂಧಿಸಿದ ಸಲಹೆಗಳನ್ನು ಅಜಯ್ ದೇವಗನ್ ಅವರಿಂದ ತೆಗೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತದೆ. ಕಾಜೋಲ್ ಮತ್ತು ಅಜಯ್ ಪರಸ್ಪರ ಉತ್ತಮ ಸ್ನೇಹಿತರಾದರು, ಆದರೆ ಅವರ ಸ್ನೇಹ ಪ್ರೀತಿಯಾಗಿ ಯಾವಾಗ ಬದಲಾಯಿತು ಎಂದು ಅವರಿಗೆ ತಿಳಿದಿರಲಿಲ್ಲ. ಕುತೂಹಲಕಾರಿ ಸಂಗತಿಯೆಂದರೆ ಇಬ್ಬರೂ ಒಬ್ಬರಿಗೊಬ್ಬರು ಪ್ರಪೋಸ್ ಮಾಡಿರಲಿಲ್ಲ. ಆದರೂ ನಾವಿಬ್ಬರೂ ಒಬ್ಬರಿಗೊಬ್ಬರು ಎಂದು ಅವರು ಭಾವಿಸಿದ್ದರು.

ಮನೆಯ ಟೆರೇಸ್‌ನಲ್ಲಿ ವಿವಾಹವಾದ ಕಾಜೋಲ್-ಅಜಯ್:
ಇಬ್ಬರೂ ಪ್ರೀತಿಯಲ್ಲಿ ಕೆಲ ವರ್ಷಗಳು ಮುಂದುವರೆದ ಬಳಿಕ ಅಜಯ್ ಮತ್ತು ಕಾಜೋಲ್ ಮದುವೆಯಾಗಲು ನಿರ್ಧರಿಸಿದರು. ಆದರೆ ಅಜಯ್ ಅವರಿಗೆ ಅದ್ಧೂರಿಯಾಗಿ ವಿವಾಹವಾಗಲು ಇಷ್ಟವಿರಲಿಲ್ಲ. ಹಾಗಾಗಿ ಅವರು 24 ಫೆಬ್ರವರಿ 1999 ರಂದು ತಮ್ಮ ಮನೆಯ ಟೆರೇಸ್‌ನಲ್ಲಿ ವಿವಾಹವಾದರು. ಅಲ್ಲೇ ಎಲ್ಲಾ ವಿವಾಹ ವಿಧಿಗಳನ್ನು ನೆರವೇರಿಸಲಾಯಿತು. 

ಕಾಜೋಲ್ ಕುಟುಂಬಕ್ಕೆ ಅಜಯ್ ಇಷ್ಟವಿರಲಿಲ್ಲ:
ವಾಸ್ತವವಾಗಿ ನೇಹಾ ಧೂಪಿಯಾ ಅವರ ರೇಡಿಯೊ ಶೋ #NoFilterNeha ನಲ್ಲಿ  ಕಾಜೋಲ್ ನಾನು ಮತ್ತು ಅಜಯ್ ಮದುವೆಯಾಗಬೇಕೆಂದು ಯಾರೂ ಬಯಸಲಿಲ್ಲ. ನನ್ನ ಕುಟುಂಬ ತುಂಬಾ ಗೊಂದಲಕ್ಕೊಳಗಾಯಿತು. ನಾನು ಅಜಯ್ ಅವರನ್ನು ಮದುವೆಯಾಗಬೇಕೆಂದು ನನ್ನ ತಂದೆಗೆ ಹೇಳಿದಾಗ, ಅವರು ಒಂದು ವಾರ ನನ್ನೊಂದಿಗೆ ಮಾತನಾಡಲಿಲ್ಲ. ಜೊತೆಗೆ ನಿನ್ನ ವೃತ್ತಿ ಜೀವನ ಉತ್ತಮವಾಗಿ ಸಾಗುತ್ತಿದೆ ಮತ್ತು ಮದುವೆಯಾಗಲು ನೀನಿನ್ನೂ ತುಂಬಾ ಚಿಕ್ಕವರು ಎಂದು ಹೇಳಿದ್ದರಂತೆ. ಆದರೆ ಕಾಜೋಲ್ ನಿರ್ಧಾರ ಮಾತ್ರ ಅಚಲವಾಗಿತ್ತು.

ಮಧುಚಂದ್ರದ ಸಮಯದಲ್ಲಿ ನೆಪ ಹೇಳಿದ್ದ ಅಜಯ್ :
ಕಾಜೋಲ್ ಮಧುಚಂದ್ರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಸಹ ಹಂಚಿಕೊಂಡಿದ್ದಾರೆ. ನಾವು 2 ತಿಂಗಳು ಮಧುಚಂದ್ರಕ್ಕೆ ಹೋಗುತ್ತೇವೆ ಎಂಬುದು ನನ್ನ ಮನಃಸ್ಥಿತಿ. ಆಸ್ಟ್ರೇಲಿಯಾ, ಲಾಸ್ ವೇಗಾಸ್ ಮತ್ತು ಇತರ ಹಲವು ಸ್ಥಳಗಳಿಗೆ 40 ದಿನಗಳ ಪ್ರಯಾಣದ ನಂತರ ನಾವು ಗ್ರೀಸ್ ತಲುಪಿದಾಗ ಅಜಯ್ ಸಾಕಷ್ಟು ದಣಿದಿದ್ದರು. ಒಂದು ದಿನ ಬೆಳಿಗ್ಗೆ ಅಜಯ್ ಎಚ್ಚರಗೊಂಡು ನನಗೆ ಜ್ವರ ಮತ್ತು ತೀವ್ರ ತಲೆನೋವು ಇದೆ ಎಂದು ಕಾಜೋಲ್ ಬಳಿ ಹೇಳಿದರಂತೆ. ಕಾಜೋಲ್ ಪತಿ ಅಜಯ್ ಗೆ ಔಷಧಿ ನೀಡುವುದಾಗಿ ಹೇಳಿದರೂ ನನಗೆ ಆರೋಗ್ಯ ಸರಿ ಎನಿಸುತ್ತಿಲ್ಲ. ಮನೆಗೆ ಹೋಗೋಣ ಎಂದರಂತೆ. ಆಗ ಮಧುಚಂದ್ರವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಮುಂಬೈಗೆ ಮರಳಿದೆವು ಎಂದು ಕಾಜೋಲ್ ತಮ್ಮ ಮಧುಚಂದ್ರದ ಕಥೆ ಹೇಳಿದರು. 
 

Trending News