ಕೆಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಲಭೆಗೆ ಪ್ರಚೋದನೆ ಹಿನ್ನಲೆಯಲ್ಲಿ SDPI ಮುಖಂಡನ ಬಂಧನ!

ಕಳೆದ ರಾತ್ರಿ‌ ನಡೆದ ಗಲಭೆ ಪ್ರಕರಣದಲ್ಲಿ SDPI ಮುಖಂಡ ಮುಜಾಮಿಲ್ ಪಾಷಾ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು. 

Last Updated : Aug 12, 2020, 10:50 AM IST
ಕೆಜಿ. ಹಳ್ಳಿ  ಗಲಭೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಗಲಭೆಗೆ  ಪ್ರಚೋದನೆ ಹಿನ್ನಲೆಯಲ್ಲಿ SDPI ಮುಖಂಡನ ಬಂಧನ! title=

ಬೆಂಗಳೂರು: ನಿನ್ನೆ ರಾತ್ರಿ ಬೆಂಗಳೂರಿನ ಕೆ.ಜಿ. ಹಳ್ಳಿ  ಗಲಭೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್  ಸಿಕ್ಕಿದೆ.‌ ಗಲಭೆಗೆ ಪ್ರಚೋದನೆ ನೀಡಿದರು ಎಂಬ ಹಿನ್ನೆಲೆಯಲ್ಲಿ ಬೆಂಗಳೂರಿನ ಜಿಲ್ಲಾ SDPI ಮುಖಂಡರೊಬ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ರಾತ್ರಿ‌ ನಡೆದ ಗಲಭೆ ಪ್ರಕರಣದಲ್ಲಿ SDPI ಮುಖಂಡ ಮುಜಾಮಿಲ್ ಪಾಷಾ ಅವರನ್ನು ಪ್ರಮುಖ ಆರೋಪಿ ಎಂದು ಗುರುತಿಸಲಾಗಿತ್ತು. ಇದೇ ಹಿನ್ನಲೆಯಲ್ಲಿ ಅವರನ್ನು ಬಂಧಿಸಿರುವ ಪೊಲೀಸರು ಈಗ ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಸಂಬಂಧಿಯೊಬ್ಬರು ಸಾಮಾಜಿಲ‌ ಜಾಲತಾಣದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಪೊಸ್ಟ್ ಮಾಡಿದ್ದಾರೆಂದು ಆರೋಪಿಸಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. 

ಕಾಂಗ್ರೆಸ್ ಶಾಸಕನ ಮನೆ ಮೇಲೆ ಕಲ್ಲು ತೂರಾಟ, ಪೊಲೀಸ್ ಗುಂಡೇಟಿಗೆ ಇಬ್ಬರು ಬಲಿ

ಸ್ಥಳಕ್ಕೆ ಧಾವಿಸಿದ ಡಿಜೆ ಹಳ್ಳಿ ಪೊಲೀಸರು ಗಲಭೆ ನಡೆಸದಂತೆ ಮನವಿ ಮಾಡಿದರು. ಆದರೆ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿ ಪೊಲೀಸ್ ಠಾಣೆ ಸೇರಿದಂತೆ ಹಲವು ಕಾರು ಹಾಗು ವರದಿ ಮಾಡಲು ತೆರಳಿದ್ದ ಮಾಧ್ಯಮದವರ ಮೇಲೆ ಹಲ್ಲೆ ನಡೆಸಲಾಗಿತ್ತು.

ಆಗ ಕೆ.ಜಿ. ಹಳ್ಳಿಯಲ್ಲಿ ದಾಂಧಲೆ ಮಾಡುತ್ತಿದ್ದ ಗಲಭೆಕೋರರ ಜೊತೆ ಮುಜಾಮಿಲ್ ಪಾಷಾ ಸ್ಥಳದಲ್ಲೇ ಇದ್ದರು ಎನ್ನಲಾಗಿದೆ. ಅಲ್ಲದೇ ಗಲಭೆ ನಡೆಯುತ್ತಿದ್ದಾಗ ಮೈಕ್ ಹಿಡಿದುಕೊಂಡು ಗಲಭೆಗೋರರ ಜೊತೆ ಮಾತನಾಡಿದ್ದರು. ಹೀಗಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಡಿ.ಜೆ. ಹಳ್ಳಿ ಪೊಲೀಸರು ಮುಜಾಮಿಲ್ ಪಾಷಾನನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
 

Trending News