ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಇಂದು ಲಡಾಕ್ ಪರಿಸ್ಥಿತಿಯ ಬಗ್ಗೆ ಮತ್ತೊಮ್ಮೆ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ ಮತ್ತು ದೇಶವು ಭಾರಿ ಬೆಲೆ ತರಬೇಕಾಗುತ್ತದೆ ಎಂದು ಹೇಳಿದ್ದಾರೆ.
GOI is scared to face up to Chinese intentions in Ladakh.
Evidence on the ground indicates that China is preparing and positioning itself.
PM’s personal lack of courage and the media’s silence will result in India paying a huge price.
— Rahul Gandhi (@RahulGandhi) August 14, 2020
ರಾಹುಲ್ ಗಾಂಧಿ ಟ್ವೀಟ್ನಲ್ಲಿ 'ಲಡಾಖ್ನಲ್ಲಿ ಚೀನಾದ ಉದ್ದೇಶಗಳನ್ನು ಎದುರಿಸಲು ಮೋದಿ ಸರ್ಕಾರ ಹೆದರುತ್ತಿದೆ.ಕೆಲವು ಅಲ್ಲಿನ ವಾಸ್ತವಿಕ ಸಾಕ್ಷ್ಯಗಳು ಚೀನಾ ತನ್ನ ಸ್ಥಾನವನ್ನು ಸಿದ್ಧಪಡಿಸಿಕೊಳ್ಳುತ್ತಿರುವುದನ್ನು ಸೂಚಿಸುತ್ತವೆ' ಎಂದು ಅವರು ವಿವರಿಸಿದ್ದಾರೆ.ಧೈರ್ಯದ ಕೊರತೆ ಮತ್ತು ಮಾಧ್ಯಮಗಳ ಮೌನವು ಭಾರತಕ್ಕೆ ಭಾರಿ ಬೆಲೆ ತರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಭಾರತದಲ್ಲಿ ಅಶಾಂತಿ ಸೃಷ್ಟಿಸಲು ಭಯೋತ್ಪಾದಕ ಸಂಘಟನೆಗಳ ಮೊರೆ ಹೋದ ಚೀನಾ
ಲಡಾಖ್ನ ಗಡಿ ಪರಿಸ್ಥಿತಿ ಕುರಿತು ರಾಹುಲ್ ಗಾಂಧಿ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯನ್ನು ನಿರಂತರವಾಗಿ ಟೀಕಿಸುತ್ತಿದ್ದಾರೆ.