ನವದೆಹಲಿ : ಭಾರತದಲ್ಲಿ ನೀವು WhatsApp ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು ಎಂದು ಮಾಧ್ಯಮ ವರದಿಗಳಿಗೆ ವ್ಯತಿರಿಕ್ತವಾಗಿ, ಪ್ಲಾಟ್ಫಾರ್ಮ್ನಲ್ಲಿನ ಡಿಜಿಟಲ್ ಪಾವತಿ ವೈಶಿಷ್ಟ್ಯವು ಇನ್ನೂ ಪರೀಕ್ಷೆಯ ಹಂತದಲ್ಲಿದೆ ಮತ್ತು ಮುಂಬರುವ ದಿನಗಳಲ್ಲಿ ಸುಮಾರು 200 ದಶಲಕ್ಷ
ಭಾರತೀಯ ಬಳಕೆದಾರರಿಗೆ ಅಧಿಕೃತವಾಗಿ ದೊರೆಯಲಿದೆ
ಈ ವೈಶಿಷ್ಟ್ಯವು ಪ್ರಸ್ತುತ ಬೀಟಾದಲ್ಲಿದ್ದು, ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಸಾರ್ವಜನಿಕವಾಗಿ ಇದನ್ನು ಘೋಷಿಸಲಾಗಿಲ್ಲ. ಕೆಲವು ಬಳಕೆದಾರರು ಬೀಟಾ ಅಪ್ಡೇಟ್ ಸ್ವೀಕರಿಸಿದ್ದಾರೆ. ಆದರೆ "ಈ ಫೀಚರ್ ಅನ್ನು ಪ್ರಸ್ತುತ ಭಾರತದ ಎಲ್ಲಾ ಬಳಕೆದಾರರೂ ಬಳಸಬಹುದು ಎಂದು ಉಹಿಸಿಕೊಳ್ಳುವುದು ತಪ್ಪು" ಎಂದು ಕೆಲವು ಮೂಲಗಳು ಎಐಎನ್ಎಸ್ ಗೆ ತಿಳಿಸಿವೆ.
ಈ ಫೀಚರ್ ಅಂತಿಮವಾಗಿ ಭಾರತದಲ್ಲಿ ಒಮ್ಮೆ ಚಾಲ್ತಿಗೆ ಬರುತ್ತಿದ್ದಂತೆ ಅಧಿಕೃತ ಘೋಷಣೆ ಮಾಡಲಾಗುವುದು ಎನ್ನಲಾಗಿದೆ.
ಒಮ್ಮೆ ಈ ಫೀಚರ್ ಚಾಲ್ತಿಗೆ ಬಂದರೆ, ಈಗಾಗಲೇ ಇರುವ ಪೇಟಿಎಂ ಮತ್ತು ಗೂಗಲ್ ತೇಜ್ ನಂತಹ ಇತರ ಡಿಜಿಟಲ್ ಪಾವತಿ ಸೇವೆಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ.
ಈ ಪಾವತಿಸುವಿಕೆಯು ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ಯ ಲಾಭವನ್ನು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಐಸಿಐಸಿಐ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಮತ್ತು ಆಕ್ಸಿಸ್ ಬ್ಯಾಂಕ್ ಸೇರಿದಂತೆ ಅನೇಕ ಬ್ಯಾಂಕುಗಳ ಬೆಂಬಲವನ್ನು ಪಡೆಯಲಿದೆ.
ತಮ್ಮ ವಾಟ್ಸ್ಆಪ್ ಬೆಂಬಲಿತ ಬ್ಯಾಂಕುಗಳ ಒಂದು ದೊಡ್ಡ ಪಟ್ಟಿಯನ್ನು ಪ್ರದರ್ಶಿಸುವ ತಮ್ಮ WhatsApp ಇಂಟರ್ಫೇಸ್ ಅನ್ನು ಬೀಟಾ ಪರೀಕ್ಷಕರು ಕಂಡಿದ್ದು, ಅವರು ಪಾವತಿಗಳನ್ನು ತಮ್ಮ WhatsApp ಸೆಟ್ಟಿಂಗ್ ಮೆನುವಿನಲ್ಲಿ ಕಾಣಬಹುದು.
ಈ ಫೀಚರ್ ಅನ್ನು ಬಳಸಲು ಗ್ರಾಹಕರು ಮೊದಲು ತಮ್ಮ ಮೊಬೈಲ್ ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಪರಿಶೀಲಿಸಿ, ನಂತರ ಬ್ಯಾಂಕ್ ಅನ್ನು ಆಯ್ಕೆ ಮಾಡಬೇಕು. ಈ ಕಾನ್ಫಿಗರೇಶನ್ ಪೂರ್ಣಗೊಂಡ ಪಾವತಿ ಕಳುಹಿಸುವ ಆಯ್ಕೆ ಲಭ್ಯವಾಗುತ್ತದೆ.
WhatsApp ಗೌಪ್ಯತೆ ನೀತಿಯ ಅನುಸಾರ, ಈ ವೈಶಿಷ್ಟ್ಯವನ್ನು ಬಳಸಲು ನಿರ್ಧರಿಸಿದಾಗ ಬಳಕೆದಾರರು ಆಪ್ ನ ಷರತ್ತು ಮತ್ತು ನಿಯಮಗಳಿಗೆ ಒಪ್ಪಿಗೆ ನೀಡಬೇಕು.
ತನ್ನ ನಿಯಮಗಳು ಮತ್ತು ಷರತ್ತುಗಳಲ್ಲಿ, ಪಾವತಿಗಳಿಗೆ ಸಂಬಂಧಿಸಿದಂತೆ ಯಾವುದೇ ಹಣವನ್ನು ಸ್ವೀಕರಿಸುವುದಿಲ್ಲ, ವರ್ಗಾವಣೆ ಮಾಡುವುದಿಲ್ಲ ಅಥವಾ ಸಂಗ್ರಹಿಸುವುದಿಲ್ಲ ಮತ್ತು ಯುಪಿಐ ಸೇವೆ ಅಡ್ಡಿಗಳು ಅಥವಾ ಪಿಎಸ್ಪಿಗಳ ಚಟುವಟಿಕೆಗಳು ಅಥವಾ ಲೋಪಗಳಿಗೆ ಅಥವಾ ನಿಮ್ಮ ಬ್ಯಾಂಕ್ ಸೇರಿದಂತೆ ಪಾವತಿ ಸೇರಿದಂತೆ, ವಸಾಹತು, ಮತ್ತು ನಿಧಿಯ ತೆರವು ಮೊದಲಾದುವುಗಳಿಗೆ ಸಂಬಂಧಿಸಿದಂತೆ WhatsApp ಪರವಾನಗಿ ಪಡೆದ ಹಣಕಾಸು ಸಂಸ್ಥೆಯಾಗಿರುವುದಿಲ್ಲ ಎಂದಿದೆ.
"ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ನಿಮ್ಮ ಬ್ಯಾಂಕ್ನೊಂದಿಗೆ ನೀವು ಒಂದು ಪ್ರತ್ಯೇಕ ಸಂಬಂಧವನ್ನು ಹೊಂದಿದ್ದು, ಈ ವಿಷಯದಲ್ಲಿ WhatsApp ನಿಮ್ಮ ಬ್ಯಾಂಕಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ" ಎಂದು ಹೇಳಿದೆ.