Sushant Case: ತನ್ನ ಅಂತಿಮ ವರದಿ ಸಲ್ಲಿಸಿದ AIIMS, ಮರ್ಡರ್ ಅಲ್ಲ ಆತ್ಮಹತ್ಯೆಗೆ ಶರಣಾಗಿದ್ದ ನಟ ಎಂದ ಮೂಲಗಳು

ಮೂಲಗಳು ನೀಡಿರುವ ಮಾಹಿತಿ ಪ್ರಕಾರ ವರದಿಯಲ್ಲಿ ಸುಶಾಂತ್ ಸಿಂಗ್ ರಾಜ್ಪುತ್ ಅವರ ಹತ್ಯೆಯಾಗಿಲ್ಲ ಮತ್ತು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Last Updated : Oct 3, 2020, 02:22 PM IST
  • ಸುಶಾಂತ್ ಸಿಂಗ್ ಪ್ರಕರಣದಲ್ಲಿ ತನ್ನ ಅಂತಿಮ ವರದಿ ಸಲ್ಲಿಸಿದ AIIMS: ಮೂಲಗಳು.
  • ಸುಶಾಂತ್ ಅವರ ಹತ್ಯೆಯಾಗಿಲ್ಲ, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
  • ವರದಿಯ ಕುರಿತು ಪ್ರತಿಕ್ರಿಯೆ ನೀಡಿರುವ ರಿಯಾ ಪರ ವಕೀಲರು 'ಸತ್ಯಮೇವ ಜಯತೆ' ಎಂದಿದ್ದಾರೆ.
Sushant Case: ತನ್ನ ಅಂತಿಮ ವರದಿ ಸಲ್ಲಿಸಿದ AIIMS, ಮರ್ಡರ್ ಅಲ್ಲ ಆತ್ಮಹತ್ಯೆಗೆ ಶರಣಾಗಿದ್ದ ನಟ ಎಂದ ಮೂಲಗಳು title=

ನವದೆಹಲಿ: ನಟ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಸಾವಿನ ಪ್ರಕರಣದಲ್ಲಿ ಮಹತ್ವದ ಮಾಹಿತಿಯೊಂದು ಬಹಿರಂಗವಾಗಿದೆ.  ಮೂಲಗಳ ಪ್ರಕಾರ, ಪ್ರಕರಣದಲ್ಲಿ ಏಮ್ಸ್ ತನ್ನ ಅಂತಿಮ  ವರದಿಯನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ಸುಶಾಂತ್ ಸಿಂಗ್ ರಜಪೂತ್ ಅವರ ಹತ್ಯೆಯಾಗಿಲ್ಲ ಹಾಗೂ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಮೂಲಗಳ ಪ್ರಕಾರ, ವಿಸ್ಸೆರಾ ತನಿಖೆಯಲ್ಲಿರುವ ಏಮ್ಸ್ ತಂಡವು ಸುಶಾಂತ್ ವಿಷ ಸೇವಿಸಿಲ್ಲ ಈ ಹಿಂದೆಯೇ ಹೇಳಿದೆ. ಐವರು ವೈದ್ಯರ ತಂಡ ಈ ವರದಿಯನ್ನು ಸಿದ್ಧಪಡಿಸಿದೆ.

ಇದನ್ನು ಓದಿ- ZEE Exclusive:ಸುಶಾಂತ್ ಸಿಂಗ್ ರಾಜ್ಪುತ್ ಅವರ ವಿಸರಾ ವರದಿ ಬಹಿರಂಗ... ವರದಿಯಲ್ಲೇನಿದೆ ?

ಸುಶಾಂತ್ ಸಿಂಗ್ ಪ್ರಕರಣದಲ್ಲಿ AIIMS ನ ಫೈನಲ್ ವರದಿಯ ಕುರಿತು ಪ್ರತಿಕ್ರಿಯೆ ನೀಡಿರುವ ರಿಯಾ ಚಕ್ರವರ್ತಿ ಪರ ವಕೀಲ ಸತೀಶ್ ಮಾನಶಿಂದೆ, 'ಸತ್ಯಮೇವ ಜಯತೆ' ಎಂದು ಹೇಳಿದೆ. ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ ಎಂದು ನಾವು ಈ ಮೊದಲೇ ಹಲವು ಬಾರಿಗೆ ಹೇಳಿದ್ದೇವೆ. ಇದೀಗ ನಾವು ಸಿಬಿಐ ಅಧಿಕಾರಿಗಳ ಅಧಿಕೃತ ಹೇಳಿಕೆಗಾಗಿ ಕಾಯುತ್ತಿದ್ದೇವೆ ಎಂದು ಹೇಳಿದ್ದಾರೆ.

Trending News