ನವದೆಹಲಿ: ಕರೋನಾ ಯುಗದಲ್ಲಿ, ಸೈಬರ್ ವಂಚನೆಯ ಪ್ರಕರಣಗಳು ಹೆಚ್ಚುತ್ತಿವೆ. ಸಾಂಕ್ರಾಮಿಕ ರೋಗದಿಂದಾಗಿ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ, ಮಕ್ಕಳ ಶಿಕ್ಷಣವೂ ಆನ್ಲೈನ್ನಲ್ಲಿ ನಡೆಯುತ್ತಿದೆ. ಈ ಕಾರಣಕ್ಕಾಗಿ, ವಂಚಕರು ಸುಳ್ಳು ಮಾಹಿತಿ ನೀಡುವ ಮೂಲಕ ಜನರನ್ನು ಮರುಳು ಮಾಡುತ್ತಿದ್ದಾರೆ. ಇತ್ತೀಚಿಗೆ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇದರಲ್ಲಿ ವಂಚಕನೊಬ್ಬ ವಾಟ್ಸಾಪ್ನಲ್ಲಿ ಸಂದೇಶವೊಂದನ್ನು ವೈರಲ್ ಮಾಡಿ ಜನರನ್ನು ವಂಚಿಸುತ್ತಿದ್ದಾನೆ. ಈ ಸಂದೇಶದಲ್ಲಿ, ಸರ್ಕಾರವು ಆನ್ಲೈನ್ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್ಫೋನ್ಗಳನ್ನು ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನು ಓದಿ- ಸೆಪ್ಟೆಂಬರ್ 25ರಿಂದ ಮತ್ತೆ ಲಾಕ್ಡೌನ್? ವೈರಲ್ ಸುದ್ದಿಗಳ ಸತ್ಯಾಸತ್ಯತೆ...
ಈ ಸಂದೇಶದೊಂದಿಗೆ ಲಿಂಕ್ ಅನ್ನು ಸಹ ನೀಡಲಾಗಿದೆ. ಇದರಲ್ಲಿ ಈ ಸೌಲಭ್ಯವನ್ನು ಪಡೆಯಲು ಅರ್ಜಿದಾರರು ತಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಲು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಈ ಲಿಂಕ್ನಲ್ಲಿ ನಿಮ್ಮ ವೈಯಕ್ತಿಕ ವಿವರಗಳನ್ನು ನೀವು ಭರ್ತಿ ಮಾಡಿದರೆ, ನೀವು ಸೈಬರ್ ವಂಚನೆಗೆ ಬಲಿಯಾಗಬಹುದು ಎಂದು PIB Fact Check ತಂಡ ಹೇಳಿದೆ.
दावा: एक #WhatsApp मैसेज में यह दावा किया जा रहा है कि ऑनलाइन शिक्षा को ध्यान में रखते हुए सरकार छात्रों को मुफ्त लैपटॉप प्रदान कर रही है।#PIBFactCheck : यह दावा #फ़र्ज़ी है। केंद्र सरकार ने ऐसी कोई घोषणा नहीं की है। ऐसे किसी फ़र्ज़ी लिंक या वेबसाइट पर निजी जानकारी साझा न करें। pic.twitter.com/uMdMRbX7EJ
— PIB Fact Check (@PIBFactCheck) November 28, 2020
ಇದನ್ನು ಓದಿ- COVID-19: ಸರ್ಕಾರ ನಿಮ್ಮ ವಾಟ್ಸಾಪ್ ಸಂದೇಶಗಳನ್ನು ಸ್ಕ್ರೀನಿಂಗ್ ಮಾಡುತ್ತಿದೆಯೇ? ವದಂತಿ ಬಗ್ಗೆ PIB ಟ್ವೀಟ್
ವಾಟ್ಸಾಪ್ನಲ್ಲಿ ವೈರಲ್ ಆಗುತ್ತಿರುವ ಈ ಸಂದೇಶದಲ್ಲಿ, ಸೈಬರ್ ವಂಚಕರು ಸಂದೇಶವನ್ನು ಹಂಚಿಕೊಳ್ಳಲು ಜನರಿಗೆ ಮನವಿ ಮಾಡಿದ್ದಾರೆ. ಇದರಲ್ಲಿ ಸೈಬರ್ ಕಳ್ಳರ ಪರವಾಗಿ 'ಈ ಸಂದೇಶವನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ. ಇದರಿಂದ ಲ್ಯಾಪ್ಟಾಪ್ ಅಗತ್ಯವಿರುವ ಜನರು ಅದನ್ನು ಪಡೆಯಬಹುದು ಮತ್ತು ನಮ್ಮ ದೇಶದ ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸಬಹುದು ' ಎಂದು ಹೇಳಲಾಗುತ್ತಿದೆ.