ನವದೆಹಲಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದವರಾದ ಬಿ.ವಿ ಶ್ರೀನಿವಾಸ್ ಈಗ ಯೂತ್ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಈ ಹುದ್ದೆಗೆ ಏರಿದ ಮೊದಲ ಕನ್ನಡಿಗ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
ಇದನ್ನು ಓದಿ: ದೆಹಲಿಯಲ್ಲಿನ ಬಡ ಕನ್ನಡಿಗರ ಕುಟುಂಬಗಳಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ನೆರವು
39 ರ ಹರೆಯದ ಶ್ರೀನಿವಾಸ್ ಅವರು ಕಳೆದ ಒಂದು ವರ್ಷದಿಂದ ಯೂತ್ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.ಈಗ ಅವರ ಕಾರ್ಯವೈಖರಿಯನ್ನು ಮೆಚ್ಚಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪೂರ್ಣಾವಧಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಆ ಮೂಲಕ ಈಗ ಅವರು ಯೂತ್ ಕಾಂಗ್ರೆಸ್ ನ 18ನೇ ಅಧ್ಯಕ್ಷರಾಗಿದ್ದಾರೆ.ವಿಶೇಷವೆಂದರೆ ಅವರು ಕರ್ನಾಟಕದ ಅಂಡರ್-16 ಕ್ರಿಕೆಟ್ ತಂಡವನ್ನು ಸಹ ಪ್ರತಿನಿಧಿಸಿದ್ದರು.ಈಗ ತಮಗೆ ಒದಗಿ ಬಂದಿರುವ ಈ ಹುದ್ದೆ ವಿಚಾರವಾಗಿ ಪ್ರತಿಕ್ರಿಯಿಸಿದ ಶ್ರೀನಿವಾಸ್ ಅವರು 'ನಾನು ಪಕ್ಷಕ್ಕಾಗಿ ಮಾಡಿದ ಕೆಲಸ ಮತ್ತು ಬದ್ದತೆಯನ್ನು ಪಕ್ಷದ ಹೈಕಮಾಂಡ್ ಗುರುತಿಸಿ ಈಗ ನನಗೆ ದೊಡ್ಡ ಜವಾಬ್ದಾರಿಯನ್ನು ವಹಿಸಿದೆ ಎಂದು ಅವರು ಹೇಳಿದರು.
My heartfelt gratitude to Smt Sonia Gandhi ji and My Leader Shri @RahulGandhi ji for giving me the opportunity to represent the youth of India as president of this great organization
I am touched and grateful for all the blessings I have received today from all of you
Thank you pic.twitter.com/csCMAnBHe2
— Srinivas B V (@srinivasiyc) December 2, 2020
ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಶ್ರೀನಿವಾಸ್ ಅವರಿಗೆ ಯಾವುದೇ ರಾಜಕೀಯ ಹಿನ್ನಲೆಯೂ ಇಲ್ಲ ಮತ್ತು ಅಂತಹ ದೊಡ್ಡ ಕುಟುಂಬವೂ ಅಲ್ಲ ಅಂತಹ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು.ಬೆಂಗಳೂರಿನ ಬಸವನಗುಡಿಯ ರಾಷ್ಟ್ರೀಯ ಕಾಲೇಜಿನ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಎನ್ಎಸ್ಯುಐ ಸದಸ್ಯರಾಗಿ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ಯೂತ್ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾಗಿ, ನಂತರ ಜಿಲ್ಲಾ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಯೂತ್ ಕಾಂಗ್ರೆಸ್ ಪಕ್ಷದ ಉನ್ನತ ಸ್ಥಾನವನ್ನು ಅಲಂಕರಿಸಿದರು.ರಾಷ್ಟ್ರೀಯ ಕಾರ್ಯದರ್ಶಿಯಾಗಿ ಮತ್ತು ನಂತರ ಯೂತ್ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಾಗ ಅವರು ದೆಹಲಿಗೆ ಸ್ಥಳಾಂತರಗೊಂಡರು.ಅದಾದ ಒಂದು ವರ್ಷದ ನಂತರ 2018 ರಲ್ಲಿ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.
ಇದನ್ನು ಓದಿ: ಆಲ್ ಇಂಡಿಯಾ ಯೂತ್ ಕಾಂಗ್ರೆಸ್ ಅಧ್ಯಕ್ಷನ ಹುದ್ದೆಗೆ ಕನ್ನಡಿಗನ ಹೆಸರು ಚಾಲ್ತಿ!
ಮಾಜಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಸಂಸದ ರಾಹುಲ್ ಗಾಂಧಿಯವರಿಗೆ ನಿಷ್ಠರಾಗಿರುವ ಅವರು, 2019 ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷದ ಕಳಪೆ ಪ್ರದರ್ಶನದ ನಂತರ ಕೇಶವ್ ಚಂದ್ ಯಾದವ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅವರನ್ನು 2019 ರಲ್ಲಿ ಐವೈಸಿಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು.ಈಗ ತಮ್ಮ ಹೊಸ ಜವಾಬ್ದಾರಿ ಕುರಿತಾಗಿ ಪ್ರತಿಕ್ರಿಯಿಸಿರುವ ಶ್ರೀನಿವಾಸ್ 'ರಾಜಕೀಯ ರ್ಯಾಲಿಗಳಲ್ಲಿ ಕೇವಲ ಘೋಷಣೆ ಕೂಗಲು ಮಾತ್ರ ಯುವಕರನ್ನು ಬಳಸುವಂತಾಗಬಾರದು ಅವರನ್ನು ಮಹತ್ವದ ನಿರ್ಧಾರದ ಪ್ರಕ್ರಿಯೆಯಲ್ಲಿಯೂ ಕೂಡ ಒಳಗೊಳ್ಳುವಂತಾಗಬೇಕು ಎಂದು ಹೇಳಿದರು.
ಕೊರೊನಾ ಹಿನ್ನಲೆಯಲ್ಲಿ ಲಾಕ್ ಡೌನ್ ವಿಧಿಸಿದ ಸಂದರ್ಭದಲ್ಲಿ ಶ್ರೀನಿವಾಸ್ ಅವರು ವಲಸೆ ಕಾರ್ಮಿಕರು, ನಿರುದ್ಯೋಗ ಮತ್ತು ವಲಸೆ ಕಾರ್ಮಿಕರಿಗೆ ಶ್ರಮಿಕ ರೈಲುಗಳ ಮೂಲಕ ಪ್ರಯಾಣಿಸಲು ಅನುಕೂಲ ಕಲ್ಪಿಸಿದರು. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸಿತು.