Bride Entry Dance: ಮದುವೆ ಮಂಟಪಕ್ಕೆ ವಧು ನೀಡಿದ ಎಂಟ್ರಿ ನೋಡಿ ಭಾವುಕನಾದ ವರ video viral

ಮದುವೆ ಸಮಾರಂಭಗಳಲ್ಲಿ ಹಲವು ಪದ್ಧತಿಗಳ ನಡುವೆ ನಡೆಯುವ ಕೆಲ ಕ್ಷಣಗಳು ನೆನಪಿನ ಅಲ್ಬಮ್ ನಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುತ್ತವೆ.

Last Updated : Dec 8, 2020, 04:11 PM IST
  • ಈ ವಿಡಿಯೋ ಮಹಾರಾಷ್ಟ್ರದಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ.
  • 'ಮೇರೆ ಸಯ್ಯಾ ಸೂಪರ್ ಸ್ಟಾರ್' ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕಿದ ವಧು.
  • ವಧುವಿನ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Bride Entry Dance: ಮದುವೆ ಮಂಟಪಕ್ಕೆ ವಧು ನೀಡಿದ ಎಂಟ್ರಿ ನೋಡಿ ಭಾವುಕನಾದ ವರ video viral title=

ನವದೆಹಲಿ: ಮದುವೆ ಸಮಾರಂಭಗಳಲ್ಲಿ ಹಲವು ಪದ್ಧತಿಗಳ ನಡುವೆ ನಡೆಯುವ ಕೆಲ ಕ್ಷಣಗಳು ನೆನಪಿನ ಅಲ್ಬಮ್ ನಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳುತ್ತವೆ. ಹಲವು ಬಾರಿ ನಮ್ಮ ಕಲ್ಪನೆಗೂ ಮೀರಿದ ಘಟನೆಗಳು ನಡೆದುಹೋಗುತ್ತವೆ. ಇಂತಹುದೇ ಒಂದು ಘಟನೆ ಸಂಭವಿಸಿದೆ. ಕೊರೊನಾ ಕಾಲದಲ್ಲಿ ನಡೆದ ಮದುವೆಯೊಂದರಲ್ಲಿ ಒಂದೆಡೆ ವರ ತನ್ನ ವಧುವಿಗಾಗಿ ಮದುವೆ ಮಂಟಪದಲ್ಲಿ ದಾರಿ ಕಾಯುತ್ತಿದ್ದ.

ಇದನ್ನು ಓದಿ- Viral Video: ತನ್ನ ಮಾಲೀಕನನ್ನು Bike Ride ಮಾಡಿಸುತ್ತಿದೆ ಈ ಶ್ವಾನ, Swag ನೀವು ನೋಡಿ

ಜಬರ್ದಸ್ತ್ ಎಂಟ್ರಿ ಹೊಡೆದ ವಧು
ಈ ಅವಿಸ್ಮರಣೀಯ ಕ್ಷಣದ ವೇಳೆ ವಧು ಮದುವೆ ಮಂಟಪಕ್ಕೆ ಜಬರ್ದಸ್ತ್ ರೀತಿಯಲ್ಲಿ ಎಂಟ್ರಿ ನೀಡಿದ್ದಾಳೆ. ಕೆಂಪು ಬಣ್ಣದ ಉಡುಪಿನಲ್ಲಿ ವಧು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ. ಅದರಲ್ಲೂ ವಿಶೇಷ ಎಂದರೆ ಆಕೆ ಕಪ್ಪು ಬಣ್ಣದ ಕನ್ನಡಕ ಧರಿಸಿದ್ದಾಳೆ. ಏತನ್ಮಧ್ಯೆ 'ಮೇರಾ ಸಯ್ಯಾ ಸೂಪರ್ ಸ್ಟಾರ್' ಹಾಡು ಕೇಳಿ ಬರಲಾರಂಭಿಸುತ್ತದೆ. ತಕ್ಷಣ ಈ ಹಾಡಿಗೆ ಜಬರ್ದಸ್ತ್ ಹೆಜ್ಜೆ ಹಾಕುತ್ತ ಮದುವೆ ಮಂಟಪದತ್ತ ಹೋಗುತ್ತಾಳೆ. ತನ್ನ ಕೈಹಿಡಿಯುವ ವರನಿಗಾಗಿ ಈ ವಧು ತುಂಬಾ ಸುಂದರ ನೃತ್ಯ ಪ್ರದರ್ಶಿಸಿದ್ದಾಳೆ.

ಇದನ್ನು ಓದಿ- Viral Video: ವಿಮಾನಗಳ ಮೇಲೆ ಜೇನುನೊಣಗಳ ಹಲ್ಲೆ, ಮುಂದೇನಾಯ್ತು? ನೀವೇ ನೋಡಿ

ಇಂಟರ್ನೆಟ್ ನಲ್ಲಿ ಈ ವಧುವಿನ ಎಂಟ್ರಿ ವಿಡಿಯೋ ಭಾರಿ ವೈರಲ್  (Video Viral) ಆಗಿದ್ದು, ಜನರು ತಮ್ಮ ಮೆಚ್ಚುಗೆಯನ್ನು ಕೂಡ ವ್ಯಕ್ತಪಡಿಸುತ್ತಿದ್ದಾರೆ. 'ಸಯ್ಯಾ super ಸ್ಟಾರ್' ಹಾಡಿಗೆ ಯುವತಿ ಜಬರ್ದಸ್ತ್ ಕುಣಿಯುತ್ತ ತನ್ನ ವರನೆಡೆಗೆ ಹೋಗಿರುವುದನ್ನು ನೀವು ಈ ವಿಡಿಯೋದಲ್ಲಿ ವಿಕ್ಷೀಸಬಹುದು. ಇದನ್ನು ನೋಡಿದ ಅಕ್ಕಪಕ್ಕದ ಸಂಬಂಧಿಕರು ಕೂಡ ಹೆಜ್ಜೆ ಹಾಕಲು ಆರಂಭಿಸುತ್ತಾರೆ. ಈ ವೇಳೆ ಮುಂದೆ ಬರುವ ವರ ತನ್ನ ವಧುವಿನ ದೃಷ್ಟಿ ತೆಗೆಯುತ್ತಾನೆ.

ಇದನ್ನು ಓದಿ- ಮನೆ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ಸ್ ಹಾಕಿದ Elli Avrram, Video Viral

ಮಹಾರಾಷ್ಟ್ರದಿಂದ ಹೊರಹೊಮ್ಮಿದೆ ಈ ವಿಡಿಯೋ
ವಿವಾಹ ಮಂಟಪಕ್ಕೆ ಆಗಮಿಸಿರುವ ಜನರು ವಧುವಿನ ಈ ಡಾನ್ಸ್ ವಿಕ್ಷೀಸುತ್ತಿದ್ದಾರೆ. ಏತನ್ಮಧ್ಯೆ ವರನ ಮುಖದ ಮೇಲಿರುವ ನಗುವನ್ನು ನೀವು ಗಮನಿಸಬಹುದು. ದೂರ ಸ್ಟೇಜ್ ಮೇಲೆಯೇ ನಿಂತು ಆತ ತನ್ನ ವಧುವಿನ ಡಾನ್ಸ್ ವಿಕ್ಷೀಸುತ್ತಿದ್ದಾನೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ಸಾಕಷ್ಟು ಕಾಮೆಂಟ್ ಗಳು ಕೂಡ ಬರುತ್ತಿವೆ.

ಈ ವಿಡಿಯೋ ಮಹಾರಾಷ್ಟ್ರದಿಂದ ಹೊರಹೊಮ್ಮಿದೆ ಎನ್ನಲಾಗುತ್ತಿದೆ. ವಧು ಧರಿಸಿರುವ ಸೀರೆ, ಸಂಪ್ರದಾಯ ಇದೊಂದು ಮರಾಠಿ ಮದುವೆ ಸಮಾರಂಭ ಎಂಬುದನ್ನು ಸಾರುತ್ತಿವೆ.
 

Trending News