Coronavirus: ಸರ್ಕಾರಿ ನೌಕರರ Corona ಚಿಕಿತ್ಸೆಯ ವೆಚ್ಚ ಭರಿಸಲು ಮುಂದಾದ ಸರ್ಕಾರ

Coronavirus: ರಾಜ್ಯದ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರ covid-19 ವೆಚ್ಚವನ್ನು ಭರಿಸಲು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಸೂಚಿಸಿದೆ. 

Written by - Nitin Tabib | Last Updated : Dec 18, 2020, 02:03 PM IST
  • ರಾಜ್ಯ ಸರ್ಕಾರಿ ನೌಕರರ ಕೊವಿಡ್-19 ವೆಚ್ಚವನ್ನು ಭರಿಸಲು ಮುಂದಾದ ಉದ್ಧವ್ ಸರ್ಕಾರ.
  • ಸರ್ಕಾರದ ಈ ಆದೇಶ ಸೆಪ್ಟೆಂಬರ್ 2 ರಿಂದ ಅನ್ವಯಿಸಲಿದೆ.
  • ಕೊರೊನಾ ಪ್ರಕೋಪಕ್ಕೆ ಅತಿ ಹೆಚ್ಚು ಗುರಿಯಾದ ರಾಜ್ಯ ಎಂದರೆ ಅದು ಮಹಾರಾಷ್ಟ್ರ ಎಂಬುದು ಇಲ್ಲಿ ಗಮನಾರ್ಹ.
Coronavirus: ಸರ್ಕಾರಿ ನೌಕರರ Corona ಚಿಕಿತ್ಸೆಯ ವೆಚ್ಚ ಭರಿಸಲು ಮುಂದಾದ ಸರ್ಕಾರ  title=
Maharashtra government will bear the cost of corona treatment of government employees (File Photo)

ಮುಂಬೈ: Coronavirus: ರಾಜ್ಯದ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬ ಸದಸ್ಯರ covid-19 ವೆಚ್ಚವನ್ನು ಭರಿಸಲು ರಾಜ್ಯದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರಿಗೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಸೂಚಿಸಿದೆ. ಸೆಪ್ಟೆಂಬರ್ 2,2020ರಿಂದ ಸರ್ಕಾರದ ಈ ಆದೇಶ ಅನ್ವಯಿಸಲಿದೆ ಈ ಕುರಿತು ಮಾಹಿತಿ ನೀಡಿರುವ ಆರೋಗ್ಯ ಸಚಿವ ರಾಜೇಶ್ ಟೋಪೆ, ಸೆಪ್ಟೆಂಬರ್ 2, 2020 ರಿಂದ ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ನೌಕರರ ಉಪಸ್ಥಿತಿಯನ್ನು ಹೆಚ್ಚಿಸಿತ್ತು. ಹೀಗಾಗಿ ಸರ್ಕಾರದ ಈ ನಿರ್ಣಯ ಸೆಪ್ಟೆಂಬರ್ 2 ರಿಂದ ಅನ್ವಯಿಸಲಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ- LED Bulbs Can Kill Coronavirus: Covid-19 ನಿಂದ ಮುಕ್ತಿ ನೀಡಲಿವೆ LED Bulbs, ವಿಜ್ಞಾನಿಗಳ ಅಧ್ಯಯನದಿಂದ ಬಹಿರಂಗ

2005 ರ ಸರ್ಕಾರದ ಪ್ರಸ್ತಾವನೆಯ ಪ್ರಕಾರ, ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಸೇರಿದಂತೆ ಒಟ್ಟು  27 ರೋಗಗಳು ಮತ್ತು 5 ಗಂಭೀರ ಕಾಯಿಲೆಗಳ ಚಿಕಿತ್ಸೆಯ ವೆಚ್ಚವನ್ನು ಸರ್ಕಾರಿ ಅಧಿಕಾರಿಗಳು, ನೌಕರರು ಮತ್ತು ಅವರ ಕುಟುಂಬ ಸದಸ್ಯರಿಗೆ ಮರುಪಾವತಿ ಮಾಡಲಾಗುತ್ತದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪ್ರಕಾರ, ಮಹಾರಾಷ್ಟ್ರದಲ್ಲಿ 68,476 ಸಕ್ರಿಯ ಕರೋನಾ ಸೋಂಕು ಪ್ರಕರಣಗಳಿದ್ದು, ಈ ಪೈಕಿ 17,69,897 ಜನರು ಗುಣಮುಖರಾಗಿದ್ದಾರೆ ಮತ್ತು 48,434 ಮಂದಿ ಬಲಿಯಾಗಿದ್ದಾರೆ.

ಇದನ್ನು ಓದಿ- Covid-19 ಮಕ್ಕಳಿಗೆ Paralysis Attack ಸಮಸ್ಯೆಯನ್ನೂ ತಂದೊಡ್ಡಬಹುದು- ಸಂಶೋಧನೆ

ಇತ್ತೀಚೆಗಷ್ಟೇ ಮಹಾರಾಷ್ಟ್ರದ ಉದ್ಧವ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಕರೋನಾ ಪರೀಕ್ಷೆಯ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಸಾರ್ವಜನಿಕರಿಗೆ ಭಾರಿ ನೆಮ್ಮದಿ ನೀಡಿದೆ. ಆರ್‌ಟಿ ಪಿಸಿಆರ್ ಪರೀಕ್ಷೆಯ ಬೆಲೆಯನ್ನು ರಾಜ್ಯದಲ್ಲಿ 980 ರೂ.ಗಳಿಂದ 700 ರೂ.ಗೆ ಇಳಿಸಲಾಗಿದೆ. ಇಡೀ ದೇಶದ ಕರೋನಾದ ಅಂಕಿಅಂಶಗಳನ್ನು ನೋಡಿದರೆ, ಹೆಚ್ಚಿನ ಪ್ರಕರಣಗಳು ಈ ರಾಜ್ಯದಿಂದ ಬಂದಿವೆ ಎಂಬುದು ಇಲ್ಲಿ ಗಮನಾರ್ಹ. ರಾಜ್ಯದಲ್ಲಿ, ಬುಧವಾರ 4,304 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.   95 ಜನರು ಈ ಮಾರಕ ಕಾಯಿಲೆಗೆ ಬಲಿಯಾಗಿದ್ದಾರೆ. 4,678 ರೋಗಿಗಳನ್ನು ಗುಣಪಡಿಸಿ  ಮನೆಗೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯ ಅಂಕಿಅಂಶಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು ಸೋಂಕಿತ ರೋಗಿಗಳ ಸಂಖ್ಯೆ 18,80,893 ತಲುಪಿದೆ. 17,69,897 ರೋಗಿಗಳು ಚೇತರಿಸಿಕೊಂಡು ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಈ ಸಾಂಕ್ರಾಮಿಕ ರೋಗದಿಂದ ಇದುವರೆಗೆ ಒಟ್ಟು 48,434 ಜನರು ಸಾವನ್ನಪ್ಪಿದ್ದಾರೆ.

Trending News