Coronavirus new variant: ಗಂಭೀರ ಹೇಳಿಕೆ ನೀಡಿದ WHO.. ಇಲ್ಲಿದೆ ವಿವರ

Coronavirus new variant: ಕರೋನಾ ವೈರಸ್‌ನ ಹೊರತಾಗಿಯೂ ಕೂಡ ಈ ಹಿಂದೆ ಹಲವು ವೈರಸ್ ಗಳು ತಮ್ಮ ಸ್ವರೂಪವನ್ನು ಬದಲಾಯಿಸಿವೆ. ಆದರೆ, ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಕೊರೊನಾ ಸ್ವರೂಪ ಮತ್ತೊಂದು ಉದಾಹರಣೆಯಾಗಿರಬಹುದು ಎಂದು ವೈದ್ಯ ಸೌಮ್ಯಾ ವಿಶ್ವನಾಥನ್ ಹೇಳಿದ್ದಾರೆ. ಕರೋನಾ ವೈರಸ್ನ ಈ  ರೂಪಾಂತರಿತ ತಳಿಗಳು ಈಗಾಗಲೇ ಅನೇಕ ದೇಶಗಳಲ್ಲಿ ಕಂಡು ಬಂದಿರಬಹುದು ಎಂದು ಡಾ. ಸೌಮ್ಯಾ ಹೇಳಿದ್ದಾರೆ.

Written by - Nitin Tabib | Last Updated : Dec 22, 2020, 03:17 PM IST
  • ಕರೋನಾ ವೈರಸ್‌ನ ಹೊರತಾಗಿಯೂ ಕೂಡ ಈ ಹಿಂದೆ ಹಲವು ವೈರಸ್ ಗಳು ತಮ್ಮ ಸ್ವರೂಪವನ್ನು ಬದಲಾಯಿಸಿವೆ.
  • ಆದರೆ, ಬ್ರಿಟನ್‌ನಲ್ಲಿ ಪತ್ತೆಯಾಗಿರುವ ಹೊಸ ಕೊರೊನಾ ಸ್ವರೂಪ ಮತ್ತೊಂದು ಉದಾಹರಣೆಯಾಗಿರಬಹುದು.
  • ಆದರೆ, ಹೊಸ ತಳಿಯ ಕೊರೊನಾ ವೈರಸ್ ಕುರಿತು ಯಾವುದೇ ಒಂದು ತೀರ್ಮಾನ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ಡಾ. ಸೌಮ್ಯಾ ಹೇಳಿದ್ದಾರೆ.
Coronavirus new variant: ಗಂಭೀರ ಹೇಳಿಕೆ ನೀಡಿದ WHO.. ಇಲ್ಲಿದೆ ವಿವರ title=
Coronavirus new variant (File Photo)

ನವದೆಹಲಿ: Coronavirus new variant-ಕರೋನಾ ವೈರಸ್‌ನ ಸದ್ಯ ಪ್ರತ್ಯಕ್ಷವಾಗುತ್ತಿರುವ ರೂಪಾಂತರಿತ ತಳಿಗಳು ಈಗಾಗಲೇ ಹಲವು ದೇಶಗಳಲ್ಲಿ ಕಂಡುಬರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯಾ ವಿಶ್ವನಾಥನ್ ಹೇಳಿದ್ದಾರೆ. ಇದನ್ನು ಮೊದಲ ಬಾರಿಗೆ ಯುಕೆ ನಲ್ಲಿ ಸೆಪ್ಟೆಂಬರ್‌ನಲ್ಲಿ ಪತ್ತೆಹಚ್ಚಲಾಗಿತ್ತು ಮತ್ತು ವೈರಸ್‌ನ ಇತರ ಸ್ಟೆನ್ ಗಳು ಕೂಡ ವೇಗವಾಗಿ ಬದಲಾಗುತ್ತಿವೆ. ಈ ಕುರಿತು ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, "ಆದರೆ ಈ ಬಾರಿ ಪತ್ತೆಹಚ್ಚಲಾಗಿರುವ ಕೊರೊನಾ ವೈರಸ್ ನ ರೂಪಾಂತರದ ಕುರಿತು ಯಾವುದೇ ಒಂದು ತ್ವರಿತ ತೀರ್ಮಾನಕ್ಕೆ ಬರುವುದು ಸರಿಯಲ್ಲ " ಎಂದು ಹೇಳಿದ್ದಾರೆ.

ಇದನ್ನು ಓದಿ- ಇಂಗ್ಲೆಂಡ್ ನಿಂದ ಭಾರತಕ್ಕೆ ಬಂದ ಐವರಲ್ಲಿ 'ಹೊಸ ಕೊರೊನಾ ವೈರಸ್' ಪತ್ತೆ..!

ಕೊರೊನಾ ವೈರಸ್ ನ ಹೊಸ ರೂಪಾಂತರಿತ ತಳಿ ಹಲವು ದೇಶಗಳಲ್ಲಿ ಇರುವ ಸಾಧ್ಯತೆ
ಆರಂಭಿಕ ಅಂಶಗಳ ಪ್ರಕಾರ ಇದು ಶೇ.70 ರಷ್ಟು ಸೋಂಕನ್ನು ವೇಗವಾಗಿ ಹರಡುತ್ತದೆ ಹಾಗೂ ತೀವ್ರಗತಿಯಲ್ಲಿ ಹರಡುತ್ತದೆ. ಬ್ರಿಟನ್ ಸಂಪೂರ್ಣ ಜಿನೋಮ್ ಸಿಕ್ವೆನ್ಸ್ ಮೇಲೆ ಕಾರ್ಯನಿರ್ವಹಿಸುವ ದೇಶಗಳಲ್ಲಿ ಒಂದಾಗಿದೆ ಹೀಗಾಗಿ ಸರಿಯಾದ ಸಮಯಕ್ಕೆ ಈ ಸ್ಟೆನ್ ಅನ್ನು ಪತ್ತೆಹಚ್ಚಿದೆ ಎಂದು ಅವರು ಹೇಳಿದ್ದಾರೆ. "ಎಲ್ಲಾ ದೇಶಗಳು ಒಂದು ವೇಳೆ ತಮ್ಮ ದತ್ತಾಂಶಗಳನ್ನು ಈ ನಿಟ್ಟಿನಲ್ಲಿ ಪರಿಶೀಲಿಸಿದರೆ, ಈ ಹೊಸ ಸ್ಟೆನ್ ಮೊದಲಿನಿಂದಲು ಅಲ್ಲಿರುವ ಸಾಧ್ಯತೆ ಇದೆ" ಎಂದು ಡಾ. ಸೌಮ್ಯಾ ಹೇಳುತ್ತಾರೆ.

ಇದನ್ನು ಓದಿ- 'ಹೊಸ ಕೊರೊನಾ ವೈರಸ್ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ'

ಪರೀಕ್ಷೆಗಳ ಫಲಿತಾಂಶ ಬರಲು ಸಮಯಾವಕಾಶ ಹಿಡಿಯುವ ಸಾಧ್ಯತೆ ಇದೆ
ಕರೋನಾ ವೈರಸ್‌ನ(Coronavirus) ಹೊರತಾಗಿಯೂ ಕೂಡ ಈ ಹಿಂದೆ ಹಲವು ವೈರಸ್ ಗಳು ತಮ್ಮ ಸ್ವರೂಪವನ್ನು ಬದಲಾಯಿಸಿವೆ. ಆದರೆ ಬ್ರಿಟನ್‌ನಲ್ಲಿ ಹೊರಬಂದ ಹೊಸ ಕೊರೊನಾ ಸ್ವರೂಪ ಮತ್ತೊಂದು ಉದಾಹರಣೆಯಾಗಿರಬಹುದು ಎಂದು ವೈದ್ಯೆ ಸೌಮ್ಯಾ ವಿಶ್ವನಾಥನ್ ಹೇಳಿದ್ದಾರೆ. ಹೀಗಾಗಿ ಸ್ಪಿಕ್ ಪ್ರೋಟೀನ್ ನ ಕೆಲ ಮ್ಯೂಟೆಶನ್ ಇಮ್ಯೂನ್ ಸಿಸ್ಟಂಗಳ ಮೇಲೆ ವ್ಯಾಕ್ಸಿನ್ ಪ್ರತಿಕ್ರಿಯೆ ಬದಲಾಗುವ ಸಾಧ್ಯತೆ ಇದೆ. ಆದರೆ, ಪರೀಕ್ಷೆಯ ಫಲಿತಾಂಶಗಳು ಬರಲು ಸ್ವಲ್ಪ ವಿಳಂಬವಾಗಲಿದೆ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಪ್ರಸ್ತುತ ಬ್ರಿಟನ್ ನಲ್ಲಿ ಪತ್ತೆಯಾಗಿರುವ ವೈರಸ್ ನ ಸ್ಟೆನ್ ಅನ್ನು ಉತ್ತಮ ರೀತಿಯಲ್ಲಿ ತಿಳಿದುಕೊಳ್ಳುವ ಕೆಲಸ ಮುಂದುವರೆದಿದೆ ಆದರೆ ಫಲಿತಾಂಶ ಪ್ರಕಟಗೊಳ್ಳಲು ಹಲವು ವಾರಗಳ ಕಾಲಾವಕಾಶ ಬೇಕಾಗಲಿದೆ ಎಂದು ಅವರು ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ.

ಇದನ್ನು ಓದಿ- 'ಕೊರೊನಾ ವೈರಸ್ ನಿಯಂತ್ರಣಕ್ಕೆ ಸಿಗುತ್ತಿಲ್ಲ' ಎಂದ ಬ್ರಿಟನ್‌ನ ಆರೋಗ್ಯ ಕಾರ್ಯದರ್ಶಿ

ಪ್ರಸ್ತುತ ವಿಶ್ವ ಆರೋಗ್ಯ ಸಂಸ್ಥೆ ತನ್ನ ಸದ್ಯಸ್ಯ ರಾಷ್ಟ್ರಗಳಿಗೆ ಇನ್ನಸ್ಸು ಮುನ್ನೆಚ್ಚರಿಕಾ ಕ್ರಮವಹಿಸಲು ಸಲಹೆ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಪ್ರಮುಖ ವಿಜ್ಞಾನಿ, ಭಾರತದ ಬಳಿ ಸಂಪೂರ್ಣ ಜಿನೋಮ್ ಅನ್ನು ಸುರಕ್ಷಿತವಾಗಿರಿಸುವ ಅಪಾರ ಕ್ಷಮತೆ ಇದ್ದು, ಭಾರತ ಈಗಾಗಲೇ ಜಾಗತಿಕ ಡೇಟಾಬೇಸ್ ನಲ್ಲಿ ತನ್ನ ಅತಿ ಹೆಚ್ಚಿನ ಸಹಯೋಗ ನೀಡುತ್ತಿದೆ. ಇದೇವೇಳೆ ಕೊರೊನಾ ಸೋಂಕು ತಡೆಗಟ್ಟಲು ಅನುಸರಿಸಲಾಗಿರುವ ಮುನ್ನೆಚ್ಚರಿಕೆಯ ಕ್ರಮಗಳನ್ನು ಹೊಸ ಸ್ಟೆನ್ ನ ವೈರಸ್ ಸೋಂಕು ತಡೆಗಟ್ಟಲು ಕೂಡ ಅನುಸರಿಸಬೇಕು ಎಂದು ಸ್ವಾಮಿನಾಥನ್ ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News