'ಮೂರು ಬೈ ಎಲೆಕ್ಷನ್' ಗೆಲ್ಲಲು ಅಭ್ಯರ್ಥಿಗಳಿಗಾಗಿ ಶೋಧ ನಡೆಸಿದ ಕಾಂಗ್ರೆಸ್!

ಮಸ್ಕಿ, ಬಸವಕಲ್ಯಾಣ ವಿಧಾನ ಸಭೆ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಬೇಕಿದೆ, ಆದರೆ ಬಿಜೆಪಿ ಈಗಾಗಲೇ ತಯಾರಿ ಕೆಲಸ ಆರಂಭಿಸಿದೆ.

Last Updated : Dec 23, 2020, 02:52 PM IST
  • ಉಪಚುನಾವಣೆಗಳಿಗಾಗಿ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಪೈನಲ್ ಮಾಡಿಲ್ಲ, ಮತ್ತೊಂದೆಡೆ ಕಾಂಗ್ರೆಸ್ ಗೆಲ್ಲಲೇಬೇಕೆಂಬ ಒತ್ತಡದಲ್ಲಿದೆ, ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ
  • ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಗೆಲುವಿನ ನಂತರ ಬಿಜೆಪಿ ಮಾಸ್ಕಿ ಮತ್ತು ಬಸವಕಲ್ಯಾಣ ಹಾಗೂ ಬೆಳಗಾವಿ ಕ್ಷೇತ್ರಗಳ ಕಡೆ ಗಮನ ಫೋಕಸ್
  • 12 ನೇ ಶತಮಾನದ ಆದ್ಯಾತ್ಮಿಕ ಮುಖಂಡ, ಬಸವಣ್ಣ ಅವರ ಬಸವಕಲ್ಯಾಣದಲ್ಲಿರುವ ಅನುಭವ ಮಂಟಪ ನಿರ್ಮಾಣಕ್ಕಾಗಿ ವಿನ್ಯಾಸ ಅಂತಿಮಗೊಳಿಸಿದ್ದು, ಟೆಂಡರ್ ಕರೆಯಲಾಗಿದೆ.
    ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತ ಸಮುದಾಯ
'ಮೂರು ಬೈ ಎಲೆಕ್ಷನ್' ಗೆಲ್ಲಲು ಅಭ್ಯರ್ಥಿಗಳಿಗಾಗಿ ಶೋಧ ನಡೆಸಿದ ಕಾಂಗ್ರೆಸ್! title=

ಬೆಂಗಳೂರು: ಮಸ್ಕಿ, ಬಸವಕಲ್ಯಾಣ ವಿಧಾನ ಸಭೆ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಗಳ ಉಪಚುನಾವಣೆಗೆ ಇನ್ನೂ ದಿನಾಂಕ ಘೋಷಣೆಯಾಗಬೇಕಿದೆ, ಆದರೆ ಬಿಜೆಪಿ ಈಗಾಗಲೇ ತಯಾರಿ ಕೆಲಸ ಆರಂಭಿಸಿದೆ.

ಉಪಚುನಾವಣೆಗಳಿಗಾಗಿ ಬಿಜೆಪಿ ಇನ್ನೂ ತನ್ನ ಅಭ್ಯರ್ಥಿಗಳನ್ನು ಪೈನಲ್ ಮಾಡಿಲ್ಲ, ಮತ್ತೊಂದೆಡೆ ಕಾಂಗ್ರೆಸ್(Congress) ಗೆಲ್ಲಲೇಬೇಕೆಂಬ ಒತ್ತಡದಲ್ಲಿದೆ, ಹೀಗಾಗಿ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸುತ್ತಿದೆ.

ರಾಜ್ಯಾಧ್ಯಂತ ಇಂದು ರಾತ್ರಿಯಿಂದ ಜ.2ರವರೆಗೆ 'ನೈಟ್ ಕರ್ಪ್ಯೂ' ಜಾರಿ!

ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಗೆಲುವಿನ ನಂತರ ಬಿಜೆಪಿ ಮಾಸ್ಕಿ ಮತ್ತು ಬಸವಕಲ್ಯಾಣ ಹಾಗೂ ಬೆಳಗಾವಿ ಕ್ಷೇತ್ರಗಳ ಕಡೆ ಗಮನ ಫೋಕಸ್ ಮಾಡಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಈಗಾಗಲೇ ಬಸವಕಲ್ಯಾಣಕ್ಕೆ ಭೇಟಿ ನೀಡಿದ್ದಾರೆ.

Schools Reopen: 'ಜನವರಿ 1ರಿಂದಲೇ ರಾಜ್ಯದಲ್ಲಿ ಶಾಲೆಗಳ ಆರಂಭ ಖಚಿತ'

12 ನೇ ಶತಮಾನದ ಆದ್ಯಾತ್ಮಿಕ ಮುಖಂಡ, ಬಸವಣ್ಣ ಅವರ ಬಸವಕಲ್ಯಾಣದಲ್ಲಿರುವ ಅನುಭವ ಮಂಟಪ ನಿರ್ಮಾಣಕ್ಕಾಗಿ ವಿನ್ಯಾಸ ಅಂತಿಮಗೊಳಿಸಿದ್ದು, ಟೆಂಡರ್ ಕರೆಯಲಾಗಿದೆ.
ಬಸವಕಲ್ಯಾಣ, ಮಸ್ಕಿ ಮತ್ತು ಬೆಳಗಾವಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಿಂಗಾಯತ ಸಮುದಾಯದವರಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಚುನಾವಣಾ ಕಾರ್ಯ ಆರಂಭಿಸಲಾಗಿದೆ ಎಂದು ಬಿಜೆಪಿ ಕಾರ್ಯದರ್ಶಿ ರವಿಕುಮಾರ್ ತಿಳಿಸಿದ್ದಾರೆ.

ಜೈವಿಕ ಕೃಷಿ ಪದ್ಧತಿ ಉತ್ತೇಜಿಸಲು ವಿನಯ್ ಗುರೂಜಿ ಮನವಿ

30 ಸದಸ್ಯರ ತಂಡ ರಚಿಸಲಾಗಿದ್ದು, ವಾಟ್ಸಾಪ್ ಗ್ರೂಪ್ ರಚಿಸಲಾಗಿದೆ, ಇದು ಹಳ್ಳಿಯ ಕೊನೆಯ ವ್ಯಕ್ತಿಗೆ ಸೂಚನೆಗಳನ್ನು ತಲುಪಿಸುತ್ತದೆ. ಇದೊಂದು ಸಂಘಟಿತ ಅಭಿಯಾನವಾಗಿದ್ದು, ಶಿರಾದಲ್ಲಿ ಪ್ರಾರಂಭಿಸಿದಂತೆಯೇ ಇಲ್ಲೂ ಪ್ರಚಾರ ಕಾರ್ಯ ನಡೆಯಲಿದೆ. ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್ ಹುಡುಕಾಟ ನಡೆಸುತ್ತಿದೆ.

BJP: ಜನೇವರಿಯಿಂದಲೇ ಜಿಲ್ಲಾ-ತಾಲೂಕು ಪಂ. ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ..!

2018 ರಲ್ಲಿ ಪ್ರತಾಪಗೌಡ ಪಾಟೀಲ್ ವಿರುದ್ಧ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿ ಸೋತ ಬಸನಗೌಡ ತುರುವಿಹಾಳ್ ಕಾಂಗ್ರೆಸ್ ಸೇರಿದ್ದರೆ, ಪಾಟೀಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇಬ್ಬರು ಪರಸ್ಪರ ವಿರುದ್ಧವಾಗಿ ಸ್ಪರ್ಧಿಸಿದ್ದಾರೆ. ಕೇವಲ 213 ಮತಗಳಿಂದ ತುರುವಿಹಾಳ ಸೋತಿದ್ದು, ಇನ್ನೂ ಸಾರ್ವಜನಿಕರ ಮನಸ್ಸಿನಲ್ಲಿದೆ, ಬಸವಕಲ್ಯಾಣ ಟಿಕೆಟ್ ಗಾಗಿ ಮಾಜಿ ಸಿಎಂ ಧರ್ಮ ಸಿಂಗ್ ಪುತ್ರ ವಿಜಯ್ ಸಿಂಗ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.

ಆದಿಚುಂಚನಗಿರಿ ಶ್ರೀ ಮಠದಿಂದ ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣದ ಚಿಂತನೆ: ಸಚಿವ ಎಸ್.ಟಿ. ಸೋಮಶೇಖರ್

ಕೊರೋನಾದಿಂದ ಸಾವನ್ನಪ್ಪಿದ ನಾರಾಯಣ ರಾವ್ ಕುಟುಂಬಸ್ಥರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಮುಖಂಡರು ಚಿಂತಿಸುತ್ತಿದ್ದಾರೆ. ಟಿಕೆಟ್ ಯಾರಿಗೆ ಕೊಡಬೇಕೆಂಬುದು ಮಖ್ಯವಲ್ಲ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ ನೀಡಲು ಪ್ಲಾನ್ ಮಾಡುತ್ತಿದೆ.

ಬೆಂಗಳೂರು ಒಂದರಲ್ಲೇ ಬ್ರಿಟನ್‌ನಿಂದ ಬಂದವರು 31 ಜನ!

ಈಶ್ವರ್ ಖಂಡ್ರೆ ಮತ್ತು ಸತೀಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಎರಡು ಸಮಿತಿ ರಚಿಸಿದ್ದು ಶೀಘ್ರವೇ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಸಲೀಂ ಅಹ್ಮದ್ ತಿಳಿಸಿದ್ದಾರೆ.

'ಮಾರ್ಚ್-2021ರಲ್ಲಿ SSLC-PUC ಪರೀಕ್ಷೆಗಳು ನಡೆಯುವುದಿಲ್ಲ'

Trending News