FASTag ಬಗೆಗಿನ ದೊಡ್ಡ ಚಿಂತನೆಯಿಂದ ಮುಕ್ತಿ, ಅಪ್ಲಿಕೇಶನ್ ಸ್ವತಃ ನೀಡಲಿದೆ ಈ ಮಾಹಿತಿ

NHAI ತನ್ನ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೊಸ ವೈಶಿಷ್ಟ್ಯವನ್ನು ಸೇರಿಸಿದ್ದು ಇದರಿಂದಾಗಿ ಫಾಸ್ಟ್‌ಟ್ಯಾಗ್‌ಗೆ ಸಂಬಂಧಿಸಿದಂತೆ ಯಾವುದೇ ಅನಾನುಕೂಲತೆ ಮತ್ತು ವಿವಾದಗಳನ್ನು ತಪ್ಪಿಸಬಹುದು. ಇದರೊಂದಿಗೆ ನಿಮ್ಮ ಫಾಸ್ಟ್‌ಟ್ಯಾಗ್‌ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.

Written by - Yashaswini V | Last Updated : Dec 29, 2020, 09:40 AM IST
  • ಜನವರಿ 1ರಿಂದ ಇಡೀ ದೇಶದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಯಾಗ್ ಮೂಲಕವೇ ಪಾವತಿ
  • ಎನ್‌ಎಚ್‌ಎಐ ತನ್ನ ಮೊಬೈಲ್ ಅಪ್ಲಿಕೇಶನ್ My FASTag Appನಲ್ಲಿ ಚಾಲಕರಿಗೆ ಫಾಸ್ಟ್ಯಾಗ್‌ಗೆ ಸಂಬಂಧಿಸಿದ ಸೌಲಭ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ
  • FASTag ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಉಳಿದಿದೆ ಎಂದು ಬಣ್ಣಗಳಿಂದ ತಿಳಿಯುತ್ತದೆ
FASTag ಬಗೆಗಿನ ದೊಡ್ಡ ಚಿಂತನೆಯಿಂದ ಮುಕ್ತಿ, ಅಪ್ಲಿಕೇಶನ್ ಸ್ವತಃ ನೀಡಲಿದೆ ಈ ಮಾಹಿತಿ title=
NHAI has added a new feature in My FASTag App (File Image)

ನವದೆಹಲಿ: New Year- 1 ಜನವರಿ 2021 ರಿಂದ ನಿಮ್ಮ ಕಾರನ್ನು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಾಯಿಸುವ ಮೊದಲು ನೀವು ಕಾರಿನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಹಾಕಿದ್ದೀರಾ ಮತ್ತು ಅದದಲ್ಲಿ ಬ್ಯಾಲೆನ್ಸ್ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವುದು ಅತ್ಯಗತ್ಯ. ಏಕೆಂದರೆ ಜನವರಿ 1, 2021 ರಿಂದ ಇಡೀ ದೇಶದ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳಲ್ಲಿ ಎಲ್ಲಾ ಕ್ಯಾಶ್ ಲೈನ್ ರದ್ದುಗೊಳಿಸಲಾಗುತ್ತದೆ. ಹೀಗಾಗಿ ಫಾಸ್ಟ್ಯಾಗ್ ಮೂಲಕವೇ ಪಾವತಿ ಮಾಡಬೇಕಾಗುತ್ತದೆ.

ಫಾಸ್ಟ್‌ಟ್ಯಾಗ್‌ನಲ್ಲಿ ಬ್ಯಾಲೆನ್ಸ್ ಹೇಗೆ ಪರಿಶೀಲಿಸುವುದು?
ನ್ಯಾಷನಲ್ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ತನ್ನ ಮೊಬೈಲ್ ಅಪ್ಲಿಕೇಶನ್ ಮೈ ಫಾಸ್ಟ್ಯಾಗ್ ಆ್ಯಪ್‌ನಲ್ಲಿ (My FASTag App) ಚಾಲಕರಿಗೆ ಫಾಸ್ಟ್ಯಾಗ್‌ಗೆ ಸಂಬಂಧಿಸಿದ ಸೌಲಭ್ಯಗಳನ್ನು ಸುಧಾರಿಸುವ ಉದ್ದೇಶದಿಂದ ಹೊಸ ವೈಶಿಷ್ಟ್ಯವನ್ನು ಸೇರಿಸಿದೆ. ನಿಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಇದೆ ಎಂದು ಪರಿಶೀಲಿಸಲು ನೀವು ಬಯಸಿದರೆ ನೀವು ಇದನ್ನು ಸುಲಭವಾಗಿ ಮಾಡಬಹುದು. ಇದಕ್ಕಾಗಿ ನೀವು ನಿಮ್ಮ ಕಾರ್ ಸಂಖ್ಯೆಯನ್ನು My FASTag ಅಪ್ಲಿಕೇಶನ್‌ನಲ್ಲಿ ನಮೂದಿಸಬೇಕಾಗುತ್ತದೆ. ಬಳಿಕ ತಕ್ಷಣವೇ ನಿಮಗೆ ಬ್ಯಾಲೆನ್ಸ್ ತಿಳಿಯುತ್ತದೆ.

FASTag App New Feature:ಇನ್ಮುಂದೆ ಆಪ್ ನಲ್ಲಿ ಬ್ಯಾಲೆನ್ಸ್ ಸ್ಟೇಟಸ್ ಕಾಣಿಸಲಿದೆ

FASTag ಖಾತೆಯಲ್ಲಿ ಎಷ್ಟು ಬ್ಯಾಲೆನ್ಸ್ ಉಳಿದಿದೆ ಎಂದು ಬಣ್ಣಗಳಿಂದ ತಿಳಿಯುತ್ತದೆ: (The colors will show the balance in the FASTag account)
ಈ ಅಪ್ಲಿಕೇಶನ್‌ನಲ್ಲಿ ಫಾಸ್ಟ್ಯಾಗ್ ವಾಲೆಟ್ ಬ್ಯಾಲೆನ್ಸ್‌ಗಾಗಿ ವಿಭಿನ್ನ ಬಣ್ಣ ಸಂಕೇತಗಳನ್ನು ನಿಗದಿಪಡಿಸಲಾಗಿದೆ. 

  • ಹಸಿರು ಬಣ್ಣ - ಬ್ಯಾಲೆನ್ಸ್ ಸಾಕಷ್ಟಿದೆ ಎಂದರ್ಥ
  • ಕಿತ್ತಳೆ ಬಣ್ಣ - ರೀಚಾರ್ಜ್ ಮಾಡುವ ಅವಶ್ಯಕತೆಯಿದೆ
  • ಕೆಂಪು ಬಣ್ಣ - ಅದು ಕಪ್ಪುಪಟ್ಟಿಗೆ ಹೋಗಿದೆ ಮತ್ತು ಅದನ್ನು ತಕ್ಷಣವೇ ಮರುಚಾರ್ಜ್ ಮಾಡಬೇಕು ಎಂದರ್ಥ 

ಇದನ್ನೂ ಓದಿ: FASTag ಇಲ್ಲವೇ? ಚಿಂತೆ ಬಿಡಿ, ದುಪ್ಪಟ್ಟು ಟೋಲ್ ನೀಡಬೇಕಾಗಿಲ್ಲ, ಜನವರಿಯಿಂದ ಈ ವಿಶೇಷ ಸೇವೆ ಆರಂಭ

ಸುಲಭವಾಗಿ ರೀಚಾರ್ಜ್ ಮಾಡಲು ಸಾಧ್ಯ:
ಕಿತ್ತಳೆ ಬಣ್ಣ ಸಂಕೇತವಾಗಿದ್ದರೆ ನೀವು ಅದನ್ನು ಮೊಬೈಲ್ ಅಪ್ಲಿಕೇಶನ್ ಮೂಲಕ ತಕ್ಷಣ ರೀಚಾರ್ಜ್ ಮಾಡಬಹುದು. ನೀವು ಟೋಲ್ ಪ್ಲಾಜಾ (Toll Plaza) ದಲ್ಲಿದ್ದರೆ ಇಲ್ಲಿ ಪಾಯಿಂಟ್ ಆಫ್ ಸೇಲ್ (ಪಿಒಎಸ್) ನಲ್ಲಿ ತ್ವರಿತ ರೀಚಾರ್ಜ್ ಸೌಲಭ್ಯವನ್ನು ಸಹ ನೀವು ಪಡೆಯಬಹುದು. 26 ಬ್ಯಾಂಕುಗಳ ಸಹಭಾಗಿತ್ವದಲ್ಲಿ ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ 40,000 ಕ್ಕೂ ಹೆಚ್ಚು ಪಿಓಎಸ್ ಸ್ಥಾಪಿಸಲಾಗಿದೆ.

ಫಾಸ್ಟ್ಯಾಗ್ ಅನ್ನು ಎಲ್ಲಿ ಪಡೆಯಬೇಕು?
ನಿಮ್ಮ ವಾಹನದಲ್ಲಿ ನೀವು ಇನ್ನೂ ಫಾಸ್ಟ್ಯಾಗ್ (FASTag) ಸ್ಟಿಕ್ಕರ್ ಅನ್ನು ಸ್ಥಾಪಿಸದಿದ್ದರೆ, ನೀವು ಅದನ್ನು ಶೀಘ್ರದಲ್ಲೇ ಬದಲಾಯಿಸಬೇಕು. ನೀವು ಅದನ್ನು ಪೇಟಿಎಂ (Paytm), ಅಮೆಜಾನ್, ಸ್ನ್ಯಾಪ್‌ಡೀಲ್ ಇತ್ಯಾದಿಗಳಿಂದ ಖರೀದಿಸಬಹುದು. ಅಲ್ಲದೆ ಇದನ್ನು ದೇಶದ 25 ಬ್ಯಾಂಕುಗಳ ಮೂಲಕವೂ ಖರೀದಿಸಬಹುದು. ಇವುಗಳಲ್ಲದೆ ಅವುಗಳನ್ನು ರಸ್ತೆ ಸಾರಿಗೆ ಪ್ರಾಧಿಕಾರದ ಕಚೇರಿಯಲ್ಲಿಯೂ ಮಾರಾಟ ಮಾಡಲಾಗುತ್ತದೆ.

ಇದನ್ನೂ ಓದಿ: ಜನವರಿಯಿಂದ FASTag ಕಡ್ಡಾಯ, ಅದನ್ನು ಎಲ್ಲಿ? ಹೇಗೆ ಪಡೆಯಬೇಕೆಂದು ತಿಳಿಯಿರಿ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತನ್ನ ಅಂಗಸಂಸ್ಥೆ ಇಂಡಿಯನ್ ಹೆದ್ದಾರಿಗಳ ನಿರ್ವಹಣಾ ಕಂಪನಿ ಲಿಮಿಟೆಡ್ (ಐಎಚ್‌ಎಂಸಿಎಲ್) ಮೂಲಕ ಫಾಸ್ಟ್ಯಾಗ್ ಅನ್ನು ಮಾರಾಟ ಮಾಡಿ ನಿರ್ವಹಿಸುತ್ತಿದೆ. ಎನ್‌ಎಚ್‌ಎಐ ಪ್ರಕಾರ ಫಾಸ್ಟ್ಯಾಗ್‌ನ ಬೆಲೆ 200 ರೂಪಾಯಿಗಳು. ಇದರಲ್ಲಿ ನೀವು ಕನಿಷ್ಠ 100 ರೂಪಾಯಿಗಳನ್ನು ರೀಚಾರ್ಜ್ ಮಾಡಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News