PUBGಗೆ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ FAU-G ಗೇಮ್, ಹೇಗಿರಲಿದೆ ಫೌಜಿ..?, ಅಕ್ಷಯ್ ಕುಮಾರ್ ಹೇಳಿದ್ದೇನು..?

ಜನವರಿ 26ರಂದು ಜನತಂತ್ರ ದಿನದಂದು ಫೌಜಿ ಗೇಮ್ ಲಾಂಚ್ ಆಗಲಿದೆ.  ಈ ಗೇಮ್ ಹೆಸರು Fearless And United – Guards ಅಥವಾ FAU-G. 

Written by - Zee Kannada News Desk | Last Updated : Jan 3, 2021, 09:35 PM IST
  • ಗಣತಂತ್ರ ದಿನದಂದು FAU-G ಗೇಮ್ ಲಾಂಚ್
    ಭಾನುವಾರ FAU-G ಆಂಥಮ್ ರಿಲೀಜ್
    ಗೇಮ್‌ನಿಂದ ಬರುವ ಆದಾಯದ ಶೇ.20ರಷ್ಟು “ಭಾರತದ ವೀರ್ ಟ್ರಸ್ಟ್ “ ಗೆ ದಾನ
PUBGಗೆ ಮೊದಲು ಭಾರತದಲ್ಲಿ ಬಿಡುಗಡೆಯಾಗಲಿದೆ FAU-G ಗೇಮ್, ಹೇಗಿರಲಿದೆ ಫೌಜಿ..?, ಅಕ್ಷಯ್ ಕುಮಾರ್ ಹೇಳಿದ್ದೇನು..? title=
ಗಣತಂತ್ರ ದಿನದಂದು FAU-G ಗೇಮ್ ಲಾಂಚ್

ನವದೆಹಲಿ: ಫೌಜಿ (FAU-G) ಗೇಮ್ ಗಾಗಿ ಭಾರತದ ವಿಡಿಯೋಗೇಮ್ ಪ್ರೀಯರು  ತುಂಬಾ ಸಮಯದಿಂದ ಕಾಯುತ್ತಿದ್ಧಾರೆ.  ಅಂತವರಿಗೊಂದು ದೊಡ್ಡ ಸುದ್ದಿ ಇದೀಗ ಬಂದಿದೆ.  ಗಲ್ವಾನ್ ಕಣಿವೆಯಲ್ಲಿ ಚೀನಾ ತನ್ನ ಕುಕೃತ್ಯ ನಡೆಸಿದ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಪಬ್ ಜಿ ಸೇರಿ ಒಂದಷ್ಟು ಚೈನೀಸ್ ಆಪ್ ಗಳನ್ನು ನಿಷೇಧಿಸಿತ್ತು (Chinese App Ban).  ಅದೇ ಸಮಯದಲ್ಲಿ ಫೌಜಿ  (FAU-G) ಗೇಮ್ ಆಗಮಿಸುವ ಘೋಷಣೆಯಾಗಿತ್ತು. ಇದೀಗ ಆ ದಿನ ಬಂದೇ ಬಿಟ್ಟಿದೆ.  ಬಂದಿರುವ ಮಾಹಿತಿ ಪ್ರಕಾರ ಜನವರಿ 26ರಂದು ಗಣತಂತ್ರ ದಿನ (Republic Day) ದಂದು ಫೌಜಿ ಗೇಮ್ ಲಾಂಚ್ ಆಗಲಿದೆ.  ಈ ಗೇಮ್ ಹೆಸರು Fearless And United – Guards ಅಥವಾ ಫೌಜಿ (FAU-G).  

FAU-Gಗಾಗಿ ಕಾಯುತ್ತಿದ್ದಾರೆ ಗೇಮರ್ಸ್ :

FAU-G ಗೇಮ್ ಕುರಿತಂತೆ ಬಾಲಿವುಡ್ ನಟಅಕ್ಷಯ್ ಕುಮಾರ್ (Akshay Kumar) ತನ್ನ ಟ್ವೀಟರ್ ಅಕೌಂಟ್ ಮೂಲಕ ಭರ್ಜರಿ ಆಂಥಮ್ ರಿಲೀಸ್ ಮಾಡಿದ್ದಾರೆ.  ಭಾನುವಾರ ಫೌಜಿ ಅಂಥಮ್ (FAU-G Anthem)  ರಿಲೀಸ್ ಆಗಿದೆ. ಜೊತೆಗೆ ಟ್ವೀಟರ್ ಖಾತೆಯಲ್ಲಿಯೇ ಗೇಮ್ ನ  ಪ್ರಿ-ರಿಜಿಸ್ಟ್ರೇಶನ್ ಲಿಂಕ್ ನೀಡಲಾಗಿದೆ. ಈ ಲಿಂಕ್ ಮೂಲಕ ರಿಜಿಸ್ಟರ್ ಮಾಡಿ ಗೇಮ್ ಅನ್ನು ರಿಸೀವ್ ಮಾಡಬಹುದಾಗಿದೆ. FAUG ಮೊಬೈಲ್ಗಾಗಿ ಡಿ.29ರಂದು ಪ್ರಿ ರಿಜಿಸ್ಟ್ರೇಶನ್ ಶುರುವಾಗಿತ್ತು. ಅದಕ್ಕೆ  ಒಂದು ತಿಂಗಳ ಹಿಂದೆ ಈ ಗೇಮ್ ನ ಟೀಸರ್ ರಿಲೀಸ್ ಆಗಿತ್ತು. 

ALSO READ : ಹಿಮಾಚಲ ಪ್ರದೇಶದ ಪಾಂಗ್ ಡ್ಯಾಮ್ ನಲ್ಲಿ 1200 ಪಕ್ಷಿಗಳ ನಿಗೂಢ ಸಾವು

FAU-G ಶೇ. 20 ರಷ್ಟು ಆದಾಯ  ವೀರ್ ಟ್ರಸ್ಟ್ ಗೆ ದಾನ :

"ಗಡಿ ಇರಲಿ ಬೇರೆ ಯಾವುದೇ ಇರಲಿ, ಸಮಸ್ಯೆ ಇದ್ದಾಗ ನಮ್ಮ ಭಾರತದ ವೀರರು ಸದಾ ಮುನ್ನುಗ್ಗುತ್ತಾರೆ. ಅವರಿಗೆ ಭಯ ಎಂಬುದು ಗೊತ್ತಿಲ್ಲ. ಅವರು ಯುನೈಟೆಡ್ ಗಾರ್ಡ್. ನಮ್ಮ ಫೌ-ಜಿ” ಎಂದು ಅಕ್ಷಯ್ ಟ್ವೀಟ್ ಮಾಡಿದ್ದಾರೆ. ಜನವರಿ 26 ರಂದು FAU-G  ಲಾಂಚ್ ಆಗಲಿದೆ ಎಂದು ಹೇಳಿದ್ದಾರೆ. ಈ ಮೊಬೈಲ್ ಗೇಮ್‌ನಿಂದ ಬರುವ ಆದಾಯದ ಶೇ.20ರಷ್ಟನ್ನು “ಭಾರತದ ವೀರ್ ಟ್ರಸ್ಟ್ “ ಗೆ  ದಾನ ಮಾಡಲಾಗುವುದು ಎಂದು ಹೇಳಿದ್ದಾರೆ. ಅಕ್ಷಯ್ ಅಲ್ಲದೆ' nCORE Games ಟ್ವಿಟರ್ ಹ್ಯಾಂಡಲ್‌ನಿಂದಲೂ ಆಟದ ಝಲಕ್ ತೋರಿಸಲಾಗಿದೆ. 1 ನಿಮಿಷ 38 ಸೆಕೆಂಡುಗಳ ಈ ವೀಡಿಯೊದ ಮೊದಲ ಕಂತಿನಲ್ಲಿ, ಸೈನಿಕರ ಪ್ರಚಂಡ ಯುದ್ಧವನ್ನು ನೋಡಬಹುದು.

 

PUBG  ನಿಷೇಧದ ಬಳಿಕ FAU-G ಘೋಷಣೆ :

ಭಾರತದಲ್ಲಿ PUBG ಗೇಮ್  ಅನ್ನು ನಿಷೇಧಿಸಿದ ನಂತರ, ಭಾರತೀಯ ಗೇಮಿಂಗ್ ಕಂಪನಿ ಎನ್ಕೋರ್ ಸ್ಥಳೀಯ ಮಲ್ಟಿಪ್ಲೇಯರ್ ಆಕ್ಷನ್ ಗೇಮ್ ಫಿಯರ್ಲೆಸ್ ಮತ್ತು ಯುನೈಟೆಡ್-ಗಾರ್ಡ್ಸ್ (FAU-G: Fearless and United Guards)  ಗೇಮ್ ಲಾಂಚ್ ಮಾಡುತ್ತಿರುವುದಾಗಿ ಘೋಷಣೆ ಮಾಡಿತ್ತು.  ಈ ಸ್ವದೇಶಿ ಗೇಮ್ ಇನ್ನು ಮುಂದೆ ಪಬ್ ಜಿಯಿಂದ ತೆರವಾದ ಸ್ಥಾನವನ್ನು ತುಂಬ ಬಲ್ಲದು ಎಂದು ಹೇಳಲಾಗುತ್ತಿದೆ. . 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News