Corona Positive: ರಾಜ್ಯದಲ್ಲಿ ಶಾಲೆಗಳು ಆರಂಭವಾದ ಮೇಲೆ '161 ಶಿಕ್ಷಕರಿಗೆ ಕೊರೋನಾ ದೃಢ'..!

ರಾಜ್ಯದಲ್ಲಿ ಶಾಲೆ, ಪಿಯು ಕಾಲೇಜುಗಳು ಆರಂಭಗೊಂಡ ನಂತರ ಒಟ್ಟು 161 ಶಾಲಾ ಶಿಕ್ಷಕರು ಹಾಗೂ 5 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ

Last Updated : Jan 8, 2021, 01:59 PM IST
  • ರಾಜ್ಯದಲ್ಲಿ ಶಾಲೆ, ಪಿಯು ಕಾಲೇಜುಗಳು ಆರಂಭಗೊಂಡ ನಂತರ ಒಟ್ಟು 161 ಶಾಲಾ ಶಿಕ್ಷಕರು ಹಾಗೂ 5 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ
  • ರಾಜ್ಯದಲ್ಲಿ ಜ.1ರಿಂದ ಶಾಲಾ ಕಾಲೇಜು ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಶಿಕ್ಷಕರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟು ನೆಗೆಟಿವ್‌ ವರದಿ ತರಬೇಕೆಂದು ಸೂಚಿಸಲಾಗಿತ್ತು
  • ಆರೋಗ್ಯ ಸಮಸ್ಯೆ ಇರುವ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ ಬಳಿಕ ಅವರು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಇಲಾಖಾ ಅಧಿಕಾರಿಗಳು ಹೇಳಿದ್ದಾರೆ.
Corona Positive: ರಾಜ್ಯದಲ್ಲಿ ಶಾಲೆಗಳು ಆರಂಭವಾದ ಮೇಲೆ '161 ಶಿಕ್ಷಕರಿಗೆ ಕೊರೋನಾ ದೃಢ'..! title=

ಬೆಂಗಳೂರು: ರಾಜ್ಯದಲ್ಲಿ ಶಾಲೆ, ಪಿಯು ಕಾಲೇಜುಗಳು ಆರಂಭಗೊಂಡ ನಂತರ ಒಟ್ಟು 161 ಶಾಲಾ ಶಿಕ್ಷಕರು ಹಾಗೂ 5 ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಮಾಹಿತಿ ನೀಡಿದೆ. ಆದರೆ, ಎಷ್ಟುಮಂದಿ ಪಿಯು ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಇನ್ನಷ್ಟೇ ಬರಬೇಕಿದೆ.

ರಾಜ್ಯದಲ್ಲಿ ಜ.1ರಿಂದ ಶಾಲಾ ಕಾಲೇಜು ಆರಂಭಗೊಂಡಿತ್ತು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ಶಿಕ್ಷಕರು(Teachers), ಉಪನ್ಯಾಸಕರು ಹಾಗೂ ಸಿಬ್ಬಂದಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟು ನೆಗೆಟಿವ್‌ ವರದಿ ತರಬೇಕೆಂದು ಸೂಚಿಸಲಾಗಿತ್ತು. ಅದರಂತೆ ಬಹುತೇಕ ಎಲ್ಲ ಶಾಲೆಗಳ ಶಿಕ್ಷಕರೂ ಆರ್‌ಟಿಟಿಪಿಆರ್‌ ಪರೀಕ್ಷೆಗೆ ಒಳಪಟ್ಟಿದ್ದರು. ಅವರಲ್ಲಿ ಒಟ್ಟು 161 ಶಿಕ್ಷಕರು ಹಾಗೂ ಐವರು ಸಿಬ್ಬಂದಿ ಸೇರಿ ಒಟ್ಟು 166 ಜನರಿಗೆ ಇದುವರೆಗೆ ಸೋಂಕು ದೃಢಪಟ್ಟಿದೆ.

Cabinet Expansion: ಸಚಿವ ಸ್ಥಾನದ ಆಕಾಂಕ್ಷಿಗಳಿಗೊಂದು 'ಗುಡ್ ನ್ಯೂಸ್'..!

ಸೋಂಕು ದೃಢಪಟ್ಟಯಾವುದೇ ಶಿಕ್ಷಕರು ಶಾಲೆಗಳಿಗೆ ಹೋಗಿಲ್ಲ. ಕೆಲವರು ಗೃಹ ಕ್ವಾರಂಟೈನ್‌ನಲ್ಲಿದ್ದರೆ, ಆರೋಗ್ಯ ಸಮಸ್ಯೆ ಇರುವ ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಣಮುಖರಾದ ಬಳಿಕ ಅವರು ಕರ್ತವ್ಯಕ್ಕೆ ಹಾಜರಾಗುತ್ತಾರೆ ಎಂದು ಇಲಾಖಾ ಅಧಿಕಾರಿಗಳು ಹೇಳಿದ್ದಾರೆ.

Corona Vaccine : ಮಹಾಮಾರಿಯ ವಿರುದ್ಧ ಮಹಾಸಮರಾಭ್ಯಾಸ, ಕರೋನಾ ವಿರುದ್ಧ ಕದನಕ್ಕೆ ಕ್ಷಣಗಣನೆ !

ಈ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು 19 ಶಿಕ್ಷಕರು ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 18 ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಉಳಿದ ಜಿಲ್ಲೆಗಳ ಪೈಕಿ ಚಿಕ್ಕಮಗಳೂರು ಜಿಲ್ಲೆಯಲ್ಲಿ 13, ಗದಗ, ಮೈಸೂರು, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ತಲಾ 11, ಚಾಮರಾಜನಗರದಲ್ಲಿ 10, ಬೆಂಗಳೂರು ನಗರ ಜಿಲ್ಲೆಯಲ್ಲಿ 8, ಚಿತ್ರದುರ್ಗ, ಹಾವೇರಿ ತಲಾ 9, ಕಲಬುರಗಿ 8, ಮಂಡ್ಯ 7, ದಕ್ಷಿಣ ಕನ್ನಡ 4, ದಾವಣಗೆರೆ, ಉಡುಪಿ ತಲಾ 3, ಬೆಂಗಳೂರು ಗ್ರಾಮಾಂತರ, ಯಾದಗಿರಿ ತಲಾ ಇಬ್ಬರು ಹಾಗೂ ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಬ್ಬ ಶಿಕ್ಷಕರಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ, ಚಿಕ್ಕಮಗಳೂರಿನ ಇಬ್ಬರು, ಉತ್ತರ ಕನ್ನಡ, ಉಡುಪಿ, ಚಾಮರಾಜನಗರದ ತಲಾ ಒಬ್ಬರು ಶಾಲಾ ಸಿಬ್ಬಂದಿಗೆ ಸೋಂಕು ದೃಢಪಟ್ಟಿದೆ ಎಂದು ಇಲಾಖೆ ತಿಳಿಸಿದೆ.

Rain : ಚಳಿ ಇರಬೇಕಾದ ಹೊತ್ತಲ್ಲಿ ಭರ್ಜರಿ ಮಳೆ..! ಯಾಕೆ ಹೀಗಾಯ್ತೋ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News