ದಾವಣಗೆರೆ: ನಮ್ಮ ಸರ್ಕಾರದ ದೌರ್ಭಾಗ್ಯವೇ ಇಷ್ಟು ಏನ್ ಮಾಡೋದು ಎಂದು ಅಸಮಾಧಾನಿತ ಬಿಜೆಪಿ ಶಾಸಕರ ನಡೆಗೆ ಸಂಸದ ಬಿ.ವೈ.ರಾಘವೇಂದ್ರ ಬೇಸರ ವ್ಯಕ್ತಪಡಿಸಿದರು.
ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ(B.Y.Raghavendra), ನಮ್ಮ ಶಾಸಕರಿಗೆ ಸಚಿವರಾಗಬೇಕು ಎನ್ನುವ ಆಸೆ ಇರುತ್ತದೆ. ಆದ್ರೆ ನಮ್ಮ ಪಕ್ಷಕ್ಕೆ ಪೂರ್ಣ ಬಹುಮತ ಬಂದಿರಲಿಲ್ಲ. ಹೀಗಾಗಿ, ಬೇರೆ ಪಕ್ಷದವರು ರಾಜೀನಾಮೆ ನೀಡಿ ಬಂದಿದ್ದರು. ಅವರು ನಮ್ಮ ಪಕ್ಷಕ್ಕೆ ಬಂದಿದ್ದರಿಂದ ಅಧಿಕಾರಕ್ಕೆ ಬಂದೆವು. ಈಗ ಮಾತು ಕೊಟ್ಟಂತೆ ನಡೆದುಕೊಳ್ಳುವುದು ಅನಿವಾರ್ಯ ಎಂದು ಹೇಳಿದರು.
Rebel MLAs: ಬಿಜೆಪಿ ಅಸಮಾಧಾನಿತ ಶಾಸಕರಿಗೆ ದೆಹಲಿಗೆ ಬರುವಂತೆ ಅಮಿತ್ ಶಾ ಬುಲಾವ್..!
ನಮ್ಮ ಮನೆಯ ಮಕ್ಕಳು ಹೊಂದಿಕೊಂಡು ಹೋಗಬೇಕಿದೆ. ನಾನು ರೇಣುಕಾಚಾರ್ಯರನ್ನು ಸಮಧಾನಪಡಿಸಲು ಬಂದಿಲ್ಲ. ಸಹಜವಾಗಿ ಹೊನ್ನಾಳಿಗೆ ಬಂದಿದ್ದರಿಂದ ರೇಣುಕಣ್ಣನ ಮನೆಗೆ ಬಂದು ಕಾಫಿ ಕುಡಿದು ಹೋಗುತ್ತೇನೆ. ಅವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ. ಎಲ್ಲ ಸರಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ಜೊತೆಗೆ, ರೇಣುಕಾಚಾರ್ಯ ಯಾವತ್ತೂ ಪಕ್ಷ ಹಾಗೂ ಯಡಿಯೂರಪ್ಪನವರ ಪರವಾಗಿ ಗೌರವ ಇಟ್ಟುಕೊಂಡ ಯುವನಾಯಕರು ಎಂದರು.
"ಏಪ್ರಿಲ್ ನಂತರ ಯಡಿಯೂರಪ್ಪನವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುತ್ತಾರೆ"
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.