/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಟೆಕ್ಸಾಸ್: Viral Video - ಕೊರೊನಾ ವೈರಸ್ (Coronavirus) ಸಾಂಕ್ರಾಮಿಕದ ಕಾರಣ ವಿಶ್ವಾದ್ಯಂತ ಲಾಕ್ ಡೌನ್ (Lockdown) ಮುಂದುವರೆದಿದೆ. ಈ ಹಿನ್ನೆಲೆ ಕೆಲ ಕೆಲಸಗಳ ಮೇಲೆ ಸಂಪೂರ್ಣ ಬ್ರೇಕ್ ಬಿದ್ದರೆ, ಇನ್ನೂ ಹಲವೆಡೆ ಅತಿ ಮುಖ್ಯವಾದ ವಿಷಯಗಳ ಕುರಿತು ಆನ್ಲೈನ್ ಮೀಟಿಂಗ್ (Digital Meeting) ಮೂಲಕ ಕೆಲಸವನ್ನು ಪೂರ್ಣಗೊಳಿಸಲಾಗುತ್ತಿದೆ. ಕೆಲ ಸ್ಥಳಗಳಲ್ಲಿ ಡಿಜಿಟಲ್ ಮೀಟಿಂಗ್ (Video Call) ಗಳಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ. ಆದರೆ, ತಾಂತ್ರಿಕವಾಗಿ ಅಪ್ರಭುದ್ಧರಾಗಿರುವವರು ಹಾಸ್ಯಕ್ಕೂ ಕೂಡ ಗುರಿಯಾಗುತ್ತಿದ್ದಾರೆ.

ಟೆಕ್ಸಸ್ (Texas) ನಲ್ಲಿ ವಕೀಲರೊಬ್ಬರ ವಿಷಯದಲ್ಲಿ ಇದೆ ರೀತಿಯ ಘಟನೆ ಸಂಭವಿಸಿದೆ.

ವಕೀಲರ ಜಾಗದಲ್ಲಿ ಕುಳಿತಿತ್ತು ಮಾರ್ಜಾಲ
ಟೆಕ್ಸಸ್ ಕೋರ್ಟ್ ನ ಪ್ರಕರಣ ವಿಚಾರಣೆಯ ವಿಡಿಯೋವೊಂದು ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral Video) ಆಗುತ್ತಿದೆ. ಅಲ್ಲಿನ ನ್ಯಾಯಾಧೀಶರೊಬ್ಬರು (Judge) ಝೂಮ್ ಕಾಲ್ (Zoom Call) ಮೂಲಕ ಪ್ರಕರಣದ ತೀರ್ಪು ಪ್ರಕಟಿಸುತ್ತಿದ್ದರು. ಈ ವೇಳೆ ಪ್ರಕರಣ ಪ್ರಸ್ತುತ ಪಡಿಸಿದ್ದ ವಕೀಲರಿಗೆ (Advocate) ತಾಂತ್ರಿಕ ಸಮಸ್ಯೆ ಎದುರಾಗಿದೆ. ಈ ಸಮಸ್ಯೆ ಆನ್ಲೈನ್ ಹಿಯರಿಂಗ್ (Online Hearing) ಅನ್ನು ತುಂಬಾ ಸ್ವಾರಸ್ಯಕರವನ್ನಾಗಿಸಿದೆ ಹಾಗೂ ವರ್ಚ್ಯುವಲ್ ಕೋರ್ಟ್ ನ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಇದೀಗ ವೈರಲ್ ಆಗುತ್ತಿದೆ. ಇದರಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ವಕೀಲರ ಜಾಗದಲ್ಲಿ ಬೆಕ್ಕು (Cat) ಕಾಣಿಸಿಕೊಂಡಿದೆ.

ಬಳಿಕ ವಕೀಲರು ಸ್ಪಷ್ಟೀಕರಣ ನೀಡಿದ್ದಾರೆ 
ವಿಚಾರಣೆ ಆರಂಭಗೊಳ್ಳುತ್ತಲೇ ವಕೀಲರ ಜಾಗದಲ್ಲಿ ಬೆಕ್ಕನ್ನು ಗಮನಿಸಿರುವ ನ್ಯಾಯಮೂರ್ತಿ ರಾಯ್ ಬಿ. ಫರ್ಗ್ಯುಸನ್ (Judge Roy B. Ferguson), ಅಟಾರ್ನಿ ರಾಡ್ ಪಾಂಟನ್ (Attorney Rod Ponton) ಅವರ ಗಮನವನ್ನು ಬೇಕ್ಕಿನತ್ತ ಸೆಳೆಯಲು ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ನಿಮ್ಮ ಲ್ಯಾಪ್ ಟಾಪ್ ನಲ್ಲಿ ಕಾಲ್ ಫೀಚರ್ ನಲ್ಲಿ ಬೆಕ್ಕಿನ ಫಿಲ್ಟರ್ (Cat Filter)  ಅಳವಡಿಸಲಾಗಿದೆ ಎಂದು ರಾಯ್, ರಾಡ್ ಅವರಿಗೆ ಹೇಳಿದ್ದಾರೆ. 

ಇದನ್ನೂ ಓದಿ- Viral Video: ಬ್ರಹ್ಮಾಂಡದ ಧ್ವನಿ ಎಂದಾದರು ಕೇಳಿದ್ದೀರಾ? ಈ ವಿಡಿಯೋ ವೀಕ್ಷಿಸಿ

ಇದಕ್ಕೆ ಸ್ಪಷ್ಟೀಕರಣ ನೀಡಿರುವ ವಕೀಲರು ತಾವು ತಮ್ಮ ಸೆಕ್ರೆಟರಿ ಲ್ಯಾಪ್ ಟಾಪ್ ಬಳಸುತ್ತಿರುವುದಾಗಿ ಹೇಳಿ ಬಳಿಕ ಇಬ್ಬರು ಈ ಫಿಲ್ಟರ್ ಅನ್ನು ತೆಗೆದು ಹಾಕಲು ಪ್ರಯತ್ನಿಸಿದ್ದಾರೆ. ನಂತರ ವಿಡಿಯೋದಲ್ಲಿ ತಾವೇ ಮಾತನಾಡುತ್ತಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ- Bride Entry Dance: ಮದುವೆ ಮಂಟಪಕ್ಕೆ ವಧು ನೀಡಿದ ಎಂಟ್ರಿ ನೋಡಿ ಭಾವುಕನಾದ ವರ video viral

ಸಾಮಾಜಿಕ ಮಾಧ್ಯಮದಲ್ಲಿ ಪಾಠ ಹೇಳಿದ ನ್ಯಾಯಾಧೀಶರು 
ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ನ್ಯಾಯಾಧೀಶ ರಾಯ್ ಫರ್ಗ್ಯುಸನ್, ಝೂಮ್ ಕಾಲ್ ಕುರಿತು ಅವಶ್ಯಕ ಪಾಠವೊಂದನ್ನು ಹೇಳಿದ್ದಾರೆ. ವರ್ಚ್ಯುವಲ್ ಮೀಟಿಂಗ್ (Virtual Meeting)  ಆರಂಭಕ್ಕೂ ಮುನ್ನ ತಮ್ಮ ಫಿಲ್ಟರ್ ಫೀಚರ್  (Filter Features) ಅನ್ನು ಪರಿಶೀಲಿಸಲು ಅವರು ಜನರಿಗೆ ಹೇಳಿದ್ದಾರೆ. ಅದರಲ್ಲೂ ವಿಶೇಷವಾಗಿ ಒಂದು ವೇಳೆ ನಿಮ್ಮ ಲ್ಯಾಪ್ ಟಾಪ್ ಮಕ್ಕಳು ಬಳಸುತ್ತಿದ್ದರೆ, ನಿಮ್ಮ ಎಲ್ಲ ಫಿಲ್ಟರ್ ಗಳು ನಿಷ್ಕ್ರೀಯಗೊಂಡಿರುವುದನ್ನು ಖಾತರಿಪಡಿಸಿಕೊಳ್ಳಿ ಎಂದಿದ್ದಾರೆ.

ಇದನ್ನೂ ಓದಿ- Viral Video: ಕಡಲು ತೀರದಲ್ಲಿ Transparent Dressನಲ್ಲಿ ಕಂಡು ಬಂದ Nora Fatehi

Section: 
English Title: 
Viral Video:viral video of texas lawyer putting cat filter during court case hearing on zoom call
News Source: 
Home Title: 

Viral Video: ವಕೀಲರ ಜಾಗದಲ್ಲಿ ಖಟ್ಲೆ ವಾದ ಮಂಡಿಸಲು ಬಂತು ಮಾರ್ಜಾಲ!

Viral Video: ವಕೀಲರ ಜಾಗದಲ್ಲಿ ಖಟ್ಲೆ ವಾದ ಮಂಡಿಸಲು ಬಂತು ಮಾರ್ಜಾಲ!
Caption: 
Viral Video (File Photo)
Yes
Is Blog?: 
No
Tags: 
Facebook Instant Article: 
Yes
Highlights: 

ಆನ್ಲೈನ್ ಹೀರಿಂಗ್ ವೇಳೆ ನಡೆದಿದೆ ಸ್ವಾರಸ್ಯಕರ ಘಟನೆ.

ವಕೀಲರ ಜಾಗದಲ್ಲಿ ಕಾಣಿಸಿಕೊಂಡ ಪುಟಾಣಿ ಬೆಕ್ಕು.

ನ್ಯಾಯಾಧೀಶರು ಹೇಳಿದ್ದೇನು? ತಿಳಿದುಕೊಳ್ಳಲು ವಿಡಿಯೋ ವಿಕ್ಷೀಸಿ

Mobile Title: 
Viral Video: ವಕೀಲರ ಜಾಗದಲ್ಲಿ ಖಟ್ಲೆ ವಾದ ಮಂಡಿಸಲು ಬಂತು ಮಾರ್ಜಾಲ!
Nitin Tabib
Publish Later: 
No
Publish At: 
Monday, February 15, 2021 - 19:22
Created By: 
Nitin Tabib
Updated By: 
Nitin Tabib
Published By: 
Nitin Tabib
Request Count: 
2
Is Breaking News: 
No