PF Latest Update - PF ಕಡಿತಕ್ಕಾಗಿ ಕೇಂದ್ರ ಸರ್ಕಾರದಿಂದ Salary Ceiling ಬದಲಾವಣೆ ಸಾಧ್ಯತೆ

PF Latest Update - ಕೇಂದ್ರ ಸರ್ಕಾರ ಕಡ್ಡಾಯವಾಗಿರುವ PFನ ಸ್ಯಾಲರಿ ಸೀಲಿಂಗ್ (Salary Ceiling) ಅನ್ನು ಹೆಚ್ಚಿಸಲು ಯೋಜನೆ ರೂಪಿಸುತ್ತಿದೆ. ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಇದಕ್ಕಾಗಿ ಅಗತ್ಯವಿರುವ ಸ್ಯಾಲರಿ ಸೀಲಿಂಗ್ ಅನ್ನು ಸರ್ಕಾರ 15000 ದಿಂದ 25000 ವರೆಗೆ ಹೆಚ್ಚಿಸುವ ಸಾಧ್ಯತೆ ಇದೆ.

Written by - Nitin Tabib | Last Updated : Feb 19, 2021, 08:44 PM IST
  • ಪಿಎಫ್ ಕಡಿತಕ್ಕಾಗಿ ಸರ್ಕಾರದಿಂದ ಸ್ಯಾಲರಿ ಸೀಲಿಂಗ್ ಹೆಚ್ಚಳದ ಸಾಧ್ಯತೆ.
  • ಮೂಲ ವೇತನ ಮಿತಿಗಿಂತ ಹೆಚ್ಚಿನ ಸಂಬಳ ಹೊಂದಿರುವವರಿಗೆ, ಪಿಎಫ್‌ನ ಕೊಡುಗೆ ವೈಕಲ್ಪಿಕವಾಗಿರುತ್ತದೆ.
  • ಹೆಚ್ಚಿನ ಕೊಡುಗೆ ಪಿಎಫ್ ಖಾತೆ ಸೇರಿದರೆ ಅದರಿಂದ ಉತ್ತಮ ಆದಾಯ ಕೂಡ ಬರಲಿದೆ.
PF Latest Update - PF ಕಡಿತಕ್ಕಾಗಿ ಕೇಂದ್ರ ಸರ್ಕಾರದಿಂದ Salary Ceiling ಬದಲಾವಣೆ ಸಾಧ್ಯತೆ title=
PF Latest Update (File Photo)

ನವದೆಹಲಿ: PF Latest Update -  ಕೇಂದ್ರೀಯ ಟ್ರಸ್ಟಿಗಳ ಸಭೆ ಮುಂದಿನ ತಿಂಗಳು ಮಾರ್ಚ್ 4 ರಂದು ಶ್ರೀನಗರದಲ್ಲಿ ನಡೆಯಲಿದೆ. ಇದರಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ನಿರೀಕ್ಷಿಸಲಾಗಿದೆ. ಕಡ್ಡಾಯ ಪಿಎಫ್‌ನ ವೇತನ ಮಿತಿಯನ್ನು ಹೆಚ್ಚಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಸಾರ್ವತ್ರಿಕ ಕನಿಷ್ಠ ವೇತನದ ಪ್ರಕಾರ, ಪಿಎಫ್ ಕಡಿತಕ್ಕಾಗಿ ಅಸ್ತಿತ್ವದಲ್ಲಿರುವ ವೇತನ ಮಿತಿಯನ್ನು ಹೆಚ್ಚಿಸಲು ಸರ್ಕಾರ (Modi Government) ಸಿದ್ಧತೆ ನಡೆಸಿದೆ. ಮೂಲಗಳ ಪ್ರಕಾರ, ಪಿಎಫ್ ಕಡಿತಕ್ಕಾಗಿ ಅಸ್ತಿತ್ವದಲ್ಲಿರುವ ವೇತನ ಮಿತಿಯನ್ನು ಬದಲಾಯಿಸಲು ಸಾಧ್ಯವಿದೆ. ಅಗತ್ಯ ವೇತನ ಸೀಲಿಂಗ್ (EPF Salary Ceiling) ಅನ್ನು ಸರ್ಕಾರ 15000 ರೂ.ನಿಂದ 25000 ರೂ.ಗೆ ಹೆಚ್ಚಿಸಬಹುದು ಎನ್ನಲಾಗಿದೆ.

ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು ಈ EPFO ವ್ಯಾಪ್ತಿಗೆ ಸೇರಿಸುವ ಯೋಜನೆ
ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನೌಕರರನ್ನು EPFO ವ್ಯಾಪ್ತಿಗೆ ತರುವುದು ಇದರ ಹಿಂದಿನ ಉದ್ದೇಶವಾಗಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, FY 21 ರ ಇಪಿಎಫ್‌ಒ ರಿಟರ್ನ್ ಅನ್ನು ಈ ಸಭೆಯಲ್ಲಿ ಪರಿಶೀಲಿಸುವ ಸಾಧ್ಯತೆ ಇದೆ. ಹೂಡಿಕೆಯಿಂದ ಪಡೆದ ಲಾಭದ ಆಧಾರದ ಮೇಲೆ ಪಿಎಫ್ ಮೇಲಿನ ಬಡ್ಡಿಯನ್ನು ನಿರ್ಧರಿಸಲಾಗುತ್ತದೆ. ಪ್ರಸ್ತುತ, ಸೀಲಿಂಗ್ನ ಮೂಲ ವೇತನ 15 ಸಾವಿರ ರೂ, ಇದನ್ನು 25 ಸಾವಿರ ರೂಗಳಿಗೆ ಹೆಚ್ಚಿಸಬಹುದು. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ, ಮೂಲ ವೇತನ ಮಿತಿಗಿಂತ ಹೆಚ್ಚಿನ ಸಂಬಳ ಹೊಂದಿರುವವರಿಗೆ, ಪಿಎಫ್‌ನ (EPF) ಕೊಡುಗೆ ವೈಕಲ್ಪಿಕವಾಗಿರುತ್ತದೆ.

ಯಾಕೆ PF ಬಡ್ಡಿ ದರದಲ್ಲಿ ಇಳಿಕೆ ಸಾಧ್ಯತೆ?
ಈ ಕುರಿತು ಹೇಳಿಕೆ ನೀಡಿರುವ EPFO ಟ್ರಸ್ಟೀ ಸದಸ್ಯರಾಗಿರುವ ಕೆ. ಇ. ರಘುನಾಥನ್, ಶ್ರೀನಗರ್ ನಲ್ಲಿ ಮಾರ್ಚ್ 4 ರಂದು ನಡೆಸಲು ಉದ್ದೇಶಿಸಲಾಗಿರುವ ಈ ಸಭೆಯ ಕುರಿತು ತಮಗೆ ಈಗಾಗಲೇ ಸೂಚನೆ ಬಂದಿದೆ, ಹಾಗೂ ಶೀಘ್ರದಲ್ಲಿಯೇ ಈ ಸಭೆಯ ಅಜೆಂಡಾ ಕೂಡ ಬರಲಿದೆ. ಆದರೆ, ಸಭೆಯ ಕುರಿತಾಗಿ ಬಂದಿರುವ ಇ-ಮೇಲ್ ನಲ್ಲಿ ಬಡ್ಡಿದರದ ಚರ್ಚೆಯ ಕುರಿತು ಯಾವುದೇ ಉಲ್ಲೇಖವಿಲ್ಲ ಎಂದು ಅವರು ಹೇಳಿದ್ದಾರೆ. ಏತನ್ಮಧ್ಯೆ ಕೇಂದ್ರ ಭವಿಷ್ಯನಿಧಿ ಸಂಘಟನೆ ಆರ್ಥಿಕ ವರ್ಷ 2020-21ಕ್ಕಾಗಿ ನೌಕರರ ಭವಿಷ್ಯನಿಧಿ ಮೇಲಿನ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಅಂದಾಜು ವ್ಯಕ್ತಪಡಿಸಲಾಗುತ್ತಿದೆ.

ಇದನ್ನೂ ಓದಿ-EPFO ಖಾತೆಗೆ ಸಂಬಂಧಿಸಿದಂತೆ ಪ್ರಮುಖ ಸುದ್ದಿ, ನೀವೂ ಸಹ ಈ ತಪ್ಪು ಮಾಡಿದ್ದರೆ ಇಂದೇ ಸರಿಪಡಿಸಿ

ವರ್ಷ 2019-20 ರಲ್ಲಿ ಪ್ರಾವಿಡೆಂಟ್ ಫಂಡ್ ಮೇಲಿನ ಬಡ್ಡಿದರವನ್ನು ಶೇ.8.5 ರಷ್ಟು ನಿಗದಿಪಡಿಸಲಾಗಿತ್ತು. ಕೊರೊನಾ ಸಂಕಷ್ಟದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೌಕರರು ತಮ್ಮ ಪಿಎಫ್ ಹಣವನ್ನು (PF Claim) ಹಿಂಪಡೆದಿದ್ದು, ಕೊಡುಗೆಯಲ್ಲಿ ಕೂಡ ಇಳಿಕೆಯಾದ ಕಾರಣ ಬಡ್ಡಿದರವನ್ನು ಇಳಿಕೆ ಮಾಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. 

ಇದನ್ನೂ ಓದಿ-EPFO : ನಿಮ್ಮ PF ಖಾತೆಯಲ್ಲಿಯೂ ಬಡ್ಡಿ ಸ್ವೀಕರಿಸದಿದ್ದರೆ ಈಗಲೇ ಈ ಕೆಲಸ ಮಾಡಿ

ಕೋಟ್ಯಾಂತರ ಜನರಿಗೆ ಲಾಭ ಸಿಗುವ ನಿರೀಕ್ಷೆ
ಈ ಕುರಿತು ಮಾತನಾಡಿರುವ ಭವಿಷ್ಯ ನಿಧಿ ಸಂಘಟನೆಯ ಮಾಜಿ ಅಸಿಸ್ಟೆಂಟ್ ಕಮಿಷನರ್ ಎ. ಕೆ ಶುಕ್ಲಾ, ಈ ನಿರ್ಣಯ ಒಂದು ವೇಳೆ ಜಾರಿಯಾದರೆ ಇದರ ಲಾಭ ಸುಮಾರು 6 ಕೋಟಿ ಜನರಿಗೆ ಆಗಲಿದೆ. ಮೊದಲನೆಯದಾಗಿ ಅವರ ಪಿಎಫ್ ಕೊಡುಗೆ ಹೆಚ್ಚಾಗಲಿದೆ. ಇದರರ್ಥ ಹೆಚ್ಚಿನ ಕೊಡುಗೆ ಪಿಎಫ್ ಖಾತೆ ಸೇರಿದರೆ ಅದರಿಂದ ಉತ್ತಮ ಆದಾಯ ಕೂಡ ಬರಲಿದೆ.

ಇದನ್ನೂ ಓದಿ-ತಿಳಿದಿರಲೇಬೇಕು..! ನಿಮಗೆ ಪಿಎಫ್ ಜೊತೆ ಸಿಗುತ್ತೆ ವಿಮೆಯ ಲಾಭ.! ಸಿಗೋ ದುಡ್ಡು ಎಷ್ಟು ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News