Constipation : ಮಲಬದ್ದತೆ ನಿವಾರಿಸಲು ಆಯುರ್ವೇದ ಹೇಳಿದೆ ಈ ಆರು ಸೂತ್ರ.!

ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮಲಬದ್ದತೆಯಿಂದ ಬಳಲುತಿದ್ದಾರೆ. ಮಲಬದ್ದತೆಗೆ ಆಯುರ್ವೇದದಲ್ಲಿ ಸಾಕಷ್ಟು ಉತ್ತಮ ಪರಿಹಾರ ಹೇಳಲಾಗಿದೆ. ಇದರಿಂದ ಬೆಳಗ್ಗೆ ಎದ್ದು ಹೊಟ್ಟೆ ಕೂಡಾ ಫಟಾಫಟ್ ಕ್ಲಿಯರ್ ಆಗುತ್ತೆ .

Written by - Ranjitha R K | Last Updated : Feb 28, 2021, 08:29 AM IST
  • ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮಲಬದ್ದತೆಯಿಂದ ಬಳಲುತಿದ್ದಾರೆ.
  • ಮಲಬದ್ದತೆಗೆ ಆಯುರ್ವೇದದಲ್ಲಿ ಸಾಕಷ್ಟು ಉತ್ತಮ ಪರಿಹಾರ ಹೇಳಲಾಗಿದೆ.
  • ಇದರಿಂದ ಬೆಳಗ್ಗೆ ಎದ್ದು ಹೊಟ್ಟೆ ಕೂಡಾ ಫಟಾಫಟ್ ಕ್ಲಿಯರ್ ಆಗುತ್ತೆ
Constipation : ಮಲಬದ್ದತೆ ನಿವಾರಿಸಲು ಆಯುರ್ವೇದ ಹೇಳಿದೆ ಈ ಆರು ಸೂತ್ರ.! title=
ಮಲಬದ್ದತೆಗೆ ಆಯುರ್ವೇದದಲ್ಲಿ ಸಾಕಷ್ಟು ಉತ್ತಮ ಪರಿಹಾರ (file photo)

ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ದತಿಯಲ್ಲಿ (Food System)ಸಾಕಷ್ಟು ಬದಲಾವಣೆ ಆಗಿದೆ.  ಹಣ್ಣು, ತರಕಾರಿ, ಧಾನ್ಯ ಮುಂತಾದ ಫೈಬರ್ ಯುಕ್ತ ಆಹಾರಗಳನ್ನು ತಿನ್ನುವುದು ಕಡಿಮೆಯಾಗುತ್ತಿದೆ.  ಸಂಸ್ಕರಿತ ಆಹಾರಗಳಾದ ಬ್ರೆಡ್ (Bread), ಮೈದಾದಿಂದ ಮಾಡಿದ ವಸ್ತುಗಳನ್ನೇ ಹೆಚ್ಚಾಗಿ ತಿನ್ನುತ್ತಾರೆ.  ಜೊತೆಗೆ ದೈಹಿಕ ಚಟುವಟಿಕೆಗಳೂ ಕೂಡಾ ತೀರಾ ಕಡಿಮೆಯಾಗಿದೆ.  ಇದರ ನೇರ ಪರಿಣಾಮ ಕೇವಲ ನಿಮ್ಮ ಆರೋಗ್ಯ (Health) ಅಷ್ಟೇ ಅಲ್ಲ ಜೀರ್ಣಾಂಗ ವ್ಯವಸ್ಥೆಯ ಮೇಲೂ ಬೀಳುತ್ತದೆ.  ಇದೇ ಕಾರಣದಿಂದ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರು ಮಲಬದ್ದತೆಯಿಂದ (Constipation) ಬಳಲುತಿದ್ದಾರೆ. ಮಲಬದ್ದತೆಗೆ ಆಯುರ್ವೇದದಲ್ಲಿ ಸಾಕಷ್ಟು ಉತ್ತಮ ಪರಿಹಾರ ಹೇಳಲಾಗಿದೆ. ಇದರಿಂದ ಬೆಳಗ್ಗೆ ಎದ್ದು ಹೊಟ್ಟೆ ಕೂಡಾ ಫಟಾಫಟ್ ಕ್ಲಿಯರ್ ಆಗುತ್ತೆ ಜೊತೆಗೆ ಯಾವುದೇ ಅಡ್ಡಪರಿಣಾಮ ಕೂಡಾ ಇರುವುದಿಲ್ಲ. 

ಮಲಬದ್ದತೆ ನಿವಾರಿಸಲು ಆಯುರ್ವೇದ ಸೂತ್ರ..!
ಮಲಬದ್ದತೆ (Constipation) ನಿವಾರಿಸಲು ದೇಹದಲ್ಲಿ ಹೈಡ್ರೇಶನ್ ಮತ್ತು ಲುಬ್ರಿಕೇಶನ್ ಹೆಚ್ಚಿಸಬೇಕು ಎಂದು ಆಯುರ್ವೇದ (Ayurveda) ಸಲಹೆ ನೀಡುತ್ತದೆ. ಆಯುರ್ವೇದ ಹೇಳಿರುವ ಈ ಕೆಳಗಿನ ಆರು ಸೂತ್ರಗಳನ್ನು ಪಾಲಿಸಿದರೆ ಮಲಬದ್ದತೆ ಫಟಾಫಟ್  ಕಡಿಮೆಯಾಗುತ್ತದೆ.  

ಇದನ್ನೂ ಓದಿ : Sanitary Pads ಅನಾನುಕೂಲ, ಅದನ್ನು ಬಳಸುವ ಸರಿಯಾದ ಮಾರ್ಗವನ್ನು ತಿಳಿಯಿರಿ

1. ಸಂಪೂರ್ಣ ಫೈಬರ್ ಯುಕ್ತ ಆಹಾರ ಪದಾರ್ಥ ತಿನ್ನಿ. ಅನ್ನ (Rice), ಗೋಧಿ, ರಾಗಿ, ಹೆಸರುಬೇಳೆ, ಮೂಸಂಬಿ, ಹಿಂಗ್, ಬೆಳ್ಳುಳ್ಳಿ (Garlic), ಹಸಿರು ತರ್ಕಾರಿ, ಸೊಪ್ಪು ಇತ್ಯಾದಿ ಯಥೇಚ್ಛವಾಗಿ ತಿನ್ನಿ. ಮಲಬದ್ದತೆ ನಿವಾರಣೆಯಾಗುತ್ತದೆ.

2. ದಿನಕ್ಕೆ ಕನಿಷ್ಟ 2-3 ಲೀಟರ್ ನೀರು (Water) ಕುಡಿಯಿರಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ನೀರು ಕುಡಿದರೆ ಇನ್ನೂ ಉತ್ತಮ. ಖಾಲಿ ಹೊಟ್ಟೆಗೆ ಒಂದು ಗ್ಲಾಸ್ ನೀರು ಕುಡಿಯುವ ಅಭ್ಯಾಸ ಇಟ್ಟುಕೊಳ್ಳಿ. ಇದರಿಂದ ಬೆಳಗ್ಗೆ ಹೊಟ್ಟೆ ಫಟಾಫಟ್ ಕ್ಲಿಯರ್ ಆಗುತ್ತದೆ. 

3. ತುಪ್ಪ (Ghee), ಆಲಿವ್ ಆಯಿಲ್, ಶೇಂಗಾ ಎಣ್ಣೆ, ತೆಂಗಿನ ಎಣ್ಣೆ (Coconut oil) ಬಳಸಿ ಮಾಡಿದ ಪದಾರ್ಥಗಳನ್ನೇ ಭೋಜನ ವೇಳೆ ತಿನ್ನಿ. ಇವು ಹೊಟ್ಟೆಯಲ್ಲಿ ಲ್ಯೂಬ್ರಿಕೇಶನ್ ಅಂಶ ಹೆಚ್ಚು ಮಾಡಿ, ದೇಹ ಭಾರ ಕಡಿಮೆ ಮಾಡಲು ನೆರವಾಗುತ್ತವೆ. ಮಲಗುವ ಮುನ್ನ ಒಂದು ಲೋಟ ಹಾಲಿಗೆ ಒಂದು ಚಮಚ ತುಪ್ಪ ಸೇರಿಸಿ ಕುಡಿದರೆ ಇನ್ನೂ ಒಳ್ಳೆಯದು. 

ಇದನ್ನೂ ಓದಿ : Corona Vaccination : ಲಸಿಕೆ ಹಾಕಿಸಿಕೊಳ್ಳಲು ನಿಮ್ಮ ನಂಬರ್ ಬಂದಿದೆ, ಉಪಯುಕ್ತ ಮಾಹಿತಿ ಇಲ್ಲಿದೆ.

4. ಅನಾನಸ್ ಜ್ಯೂಸ್ (Pineapple) ಕುಡಿಯಿರಿ. ಇದರಿಂದ ದೇಹದ ವಾತ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಇದು ಮಲಬದ್ದತೆ ಕೂಡಾ ನಿವಾರಣೆಯಾಗುತ್ತದೆ.

5. ಅಧಿಕ ಟೀ (Tea), ಕಾಫಿ ಕುಡಿಯಬೇಡಿ. ಸ್ಮೋಕಿಂಗ್ ಕಡಿಮೆ ಮಾಡಿ. ಬೇಕಾಬಿಟ್ಟಿ ಟ್ಯಾಬ್ಲೆಟ್ (Tablet) ತಿನ್ನುವುದನ್ನು ಕಡಿಮೆ ಮಾಡಿ. 

6. ಹೊಂದಿಕೆಯಾಗದ ಆಹಾರವನ್ನು (Food) ಯಾವತ್ತಿಗೂ ತಿನ್ನಬಾರದು.  ಉದಾಹರಣೆಗೆ ಹಾಲಿನ ಜೊತೆ ನಮ್ಕೀನ್, ಬಿಸಿ ಮತ್ತು ತಂಪು ವಸ್ತುಗಳನ್ನು ಒಟ್ಟಿಗೆ ತಿನ್ನುವುದು ಇತ್ಯಾದಿ ಮಾಡಬಾರದು.

ಇದನ್ನೂ ಓದಿ : Maida : ಈ ಕಾರಣಗಳಿಗೆ ನೀವು ಮೈದಾ ಮುಟ್ಟಲೇ ಬಾರದು..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News