ಬೆಂಗಳೂರು: 'ಚಾಲೆಂಜಿಂಗ್ ಸ್ಟಾರ್' ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾದ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕೊರೊನಾದಿಂದಾಗಿ ಕಳೆದ ಒಂದು ವರ್ಷಗಳಿಂದ ಕಳೆ ಕಳೆದುಕೊಂಡಿದ್ದ ಚಿತ್ರಮಂದಿರಗಳಲ್ಲಿ ಈಗ ಸಂಭ್ರಮ ಕಾಣುತ್ತಿದೆ. ಶಿವರಾತ್ರಿ ಹಬ್ಬದ ಪ್ರಯುಕ್ತ ಮಾರ್ಚ್ 11ರಂದು 'ರಾಬರ್ಟ್' ತೆರೆಕಂಡಿತ್ತು. ಮೊದಲ ದಿನವೇ ಈ ಸಿನಿಮಾ ದಾಖಲೆಯ 17.24 ಕೋಟಿ ರೂ. ಗಳಿಸಿತ್ತು. ಇದೀಗ ಮೂರು ದಿನದ ಗಳಿಕೆಯಲ್ಲಿ ಮತ್ತೊಂದು ದಾಖಲೆ ಬರೆದಿದೆ.
ಮೂರು ದಿನಕ್ಕೆ ಬರೋಬ್ಬರಿ 44.12 ಕೋಟಿ ರೂ. ಗಳಿಕೆ! ವಿಶ್ವಾದ್ಯಂತ 'ರಾಬರ್ಟ್'(Roberrt) ಕನ್ನಡ ವರ್ಷನ್ನಿಂದ ಮೊದಲ ದಿನ ಆದ ಗಳಿಕೆ 17.24 ಕೋಟಿ ರೂ. ಕನ್ನಡ ಸಿನಿಮಾರಂಗದ ಮಟ್ಟಿಗೆ ಇದು ದೊಡ್ಡ ದಾಖಲೆ. ನಂತರ ಎರಡನೇ ದಿನ (ಶುಕ್ರವಾರ) ಕಲೆಕ್ಷನ್ ಪ್ರಮಾಣ (12.78 ಕೋಟಿ ರೂ.) ಮೊದಲ ದಿನಕ್ಕಿಂತ ಕೊಂಚ ಕಮ್ಮಿ ಆಗಿತ್ತು. ಇದೀಗ ಮೂರನೇ ದಿನಕ್ಕೆ (ಶನಿವಾರ) 'ರಾಬರ್ಟ್' ಕಲೆಕ್ಷನ್ನಲ್ಲಿ ಮತ್ತೆ ಏರಿಕೆ ಕಂಡಿದೆ. 3ನೇ ದಿನಕ್ಕೆ ಈ ಸಿನಿಮಾ 14.10 ಕೋಟಿ ರೂ.ಗಳನ್ನು ಕಲೆ ಹಾಕಿದೆ. ಅಲ್ಲಿಗೆ ಮೊದಲ ಮೂರು ದಿನಕ್ಕೆ ಒಟ್ಟು 44.12 ಕೋಟಿ ರೂ. ಗಳಿಕೆ ಆಗಿದೆ.
Salman Khan: 'ಈದ್' ದಿನದಂದೇ ಸಲ್ಮಾನ್ ಖಾನ್ ನ 'ರಾಧೆ' ಎಂಟ್ರಿ..!
ಮೊದಲ ವಾರಾಂತ್ಯಕ್ಕೆ 50+ ಕೋಟಿ ರೂ.! ಇಂದು ಭಾನುವಾರ ವಾರಾಂತ್ಯ ಆಗಿರುವುದರಿಂದ ಕಲೆಕ್ಷನ್(Collection) ಇನ್ನೂ ಜಾಸ್ತಿ ಆಗುವ ನಿರೀಕ್ಷೆ ಇದೆ. ಶನಿವಾರ 14 ಕೋಟಿ ರೂ. ಗಳಿಕೆ ಆಗಿರುವುದರಿಂದ ಭಾನುವಾರ ಕೂಡ ಅಷ್ಟೇ ಪ್ರಮಾಣದ ಕಲೆಕ್ಷನ್ ಆಗುವ ನಿರೀಕ್ಷೆ ಇದೆ. ಅಲ್ಲಿಗೆ ಮೊದಲ ವಾರಾಂತ್ಯಕ್ಕೆ ಏನಿಲ್ಲವೆಂದರೂ, 'ರಾಬರ್ಟ್' ಕನ್ನಡ ವರ್ಷನ್ನಿಂದ ಬರೋಬ್ಬರಿ 58+ ಕೋಟಿ ರೂ. ಗಳಿಕೆ ಆಗಲಿದೆ. ಇನ್ನು, 'ರಾಬರ್ಟ್' ತೆಲುಗು ವರ್ಷನ್ಗೆ ಮೊದಲ ದಿನ 3.12 ಕೋಟಿ ರೂ. ಗಳಿಕೆ ಆಗಿತ್ತು. ಅಲ್ಲಿಯೂ ನಾಲ್ಕು ದಿನಕ್ಕೆ ಸುಮಾರು 10 ಕೋಟಿ ರೂ.ಗಳಷ್ಟು ಗಳಿಕೆ ಆಗುವ ನಿರೀಕ್ಷೆ ಇದೆ. ಅಲ್ಲಿಗೆ ಎರಡೂ ವರ್ಷನ್ಗಳಿಂದ ಮೊದಲ ವಾರಾಂತ್ಯಕ್ಕೆ 'ರಾಬರ್ಟ್' ಗಳಿಕೆ 70 ಕೋಟಿ ರೂ. ಸನಿಹಕ್ಕೆ ಹೋಗಲಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ದೊಡ್ಡ ದಾಖಲೆಯೇ ಸರಿ.
ನಟಿ ಕಂಗನಾ ರನೌತ್ ಮೇಲೆ ಕಾಪಿರೈಟ್ ಉಲ್ಲಂಘನೆ ಪ್ರಕರಣ ದಾಖಲು
ರಾಜ್ಯಾದ್ಯಂತ ಹೌಸ್ಫುಲ್: 'ರಾಬರ್ಟ್' ಚಿತ್ರದಲ್ಲಿ ದರ್ಶನ್ ಅವರು ಡಿಫರೆಂಟ್ ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಎರಡು ಶೇಡ್ನ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ತರುಣ್ ಸುಧೀರ್(Tharun Sudhir) ನಿರ್ದೇಶನದ ಬಗ್ಗೆ ಬಹಳ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಸದ್ಯ ರಾಜ್ಯಾದ್ಯಂತ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ 'ರಾಬರ್ಟ್' ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹೂಡಿರುವ ಸಿನಿಮಾವಿದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.