ನವದೆಹಲಿ: Cheapest Recharge Plan - ಒಂದು ವೇಳೆ ನೀವು ಕೂಡ ಅಗ್ಗದ ಹಾಗೂ ದೀರ್ಘ ಸಿಂಧುತ್ವದ ರೀಚಾರ್ಜ್ ಯೋಜನೆಯನ್ನು ಹುಡುಕುತ್ತಿದ್ದರೆ, ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ನೀಡುತ್ತಿರುವ ಕೊಡುಗೆ ನಿಮಗೆ ಉತ್ತಮ ಆಯ್ಕೆಯಾಗಲಿದೆ. ಬಿಎಸ್ಎನ್ಎಲ್ನ ಹೆಚ್ಚುವರಿ ರೀಚಾರ್ಜ್ ಯೋಜನೆಗಳು ಅದರ ಸ್ಪರ್ಧಾತ್ಮಕ ಕಂಪನಿಗಳಾದ Jio, Airte ಮತ್ತು Viಗೆ ಹೋಲಿಸಿದರೆ ಅಗ್ಗದ ಮತ್ತು ದೀರ್ಘ ಮಾನ್ಯತೆಯ ಯೋಜನೆಗಾಗಿವೆ. ಬಿಎಸ್ಎನ್ಎಲ್ನ ಈ ಅಗ್ಗದ ರೀಚಾರ್ಜ್ ಯೋಜನೆಗಳ ಮೂಲಕ ಕಾಲಿಂಗ್ ಹಾಗೂ ನೆಟ್ ಎರಡೂ ಸೌಲಭ್ಯಗಳ ಲಾಭವನ್ನು ನೀವೂ ಕೂಡ ಪಡೆಯಬಹುದು.
ಕೇವಲ 108 ರೂ.ಗಳಲ್ಲಿ ಸಿಗುತ್ತಿದೆ ಈ ಪ್ಲಾನ್
ಗ್ಯಾಜೆಟ್ 360 ಪೋರ್ಟಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ BSNLನ ಒಂದು ಪ್ಲಾನ್ ರೂ.108 ಕ್ಕೆ ಸಿಗುತ್ತಿದೆ. ಇದು 60 ದಿನಗಳ ಸಿಂಧುತ್ವ ಹೊಂದಿದೆ. ಈ ಪ್ಲಾನ್ ನಲ್ಲಿ ನಿಮಗೆ ನಿತ್ಯ ಡೇಟಾ ಕಾಗೂ ಉಚಿತ ಕಾಲಿಂಗ್ ಬೆನಿಫಿಟ್ ಗಳನ್ನು ಸಂಸ್ಥೆ ನೀಡುತ್ತಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ನಿತ್ಯ ಉಚಿತ ದೇತಾ ನೀಡುವ ಯಾವ ಯೋಜನೆಯೂ Jio, Airtel ಅಥವಾ Vi ನಲ್ಲಿಲ್ಲ.
ಅನಿಯಮಿತ ಕಾಲಿಂಗ್ ಹಾಗೂ 500 ಉಚಿತ SMS ಸೌಲಭ್ಯ
BSNLನ ಈ ರಿಚಾರ್ಜ್ ಪ್ಲಾನ್ ನಲ್ಲಿ ಗ್ರಾಹಕರಿಗೆ ಅನಿಯಮಿತ ಕಾಲಿಂಗ್ ಸೌಕರ್ಯ ಸಿಗುತ್ತಿದೆ. ಇದರಲ್ಲಿ ದೆಹಲಿ ಹಾಗೂ ಮುಂಬೈ ನ MTNL ನೆಟ್ವರ್ಕ್ ಗಳೂ ಕೂಡ ಶಾಮೀಲಾಗಿವೆ. ಆದರೆ, ನಿತ್ಯ 1 ಜಿಬಿ ಉಚಿತ ಡೇಟಾ ಖಾಲಿಯಾದ ಬಳಿಕ ಇಂಟರ್ನೆಟ್ ನ ವೇಗ 80Kbpsಗೆ ಇಳಿಯಲಿದೆ. ಇದರರ್ಥ 108 ಪ್ಲಾನ್ ಅಡಿ ನಿಮಗೆ ನಿತ್ಯ 1 ಜಿಬಿ ಹೈ ಸ್ಪೀಡ್ ಡೇಟಾ ಬಳಸುವ ಅವಕಾಶ ಸಿಗಲಿದೆ. ಈ ಪ್ಲಾನ್ ಅಡಿ ನಿಮಗೆ ಒಟ್ಟು 500 ಉಚಿತ SMS ಮಾಡುವ ಅವಕಾಶ ಸಿಗಲಿದೆ.
ಇದನ್ನೂ ಓದಿ-BSNL offers : 47 ರೂ ರೀಚಾರ್ಜ್ ಪ್ಲಾನ್ ನಲ್ಲಿ ಸಿಗಲಿದೆ unlimited calls, 14GB data
ಮೊದಲು 28 ದಿನಗಳ BSNL ಪ್ಲಾನ್ ಇತ್ತು
BSNLನ ಈ ಪ್ಲಾನ್ 28 ದಿನಗಳ ಸಿಂಧುತ್ವದೊಂದಿಗೆ ಸಿಗುತ್ತಿತ್ತು. ಆದರೆ ಟೆಲಿಕಾಂ ಸೆಕ್ಟರ್ ನಲ್ಲಿ ಹೆಚ್ಚಾಗುತ್ತಿರುವ ಪ್ರತಿಸ್ಪರ್ಧೆಯನ್ನು ಪರಿಗಣಿಸಿ BSNL ತನ್ನ ಈ ಪ್ಲಾನ್ ನ ಸಿಂಧುತ್ವವನ್ನು 60 ದಿನಗಳಿಗೆ ಹೆಚ್ಚಿಸಿದೆ. ಒಂದು ವೇಳೆ BSNL ನೀಡುತ್ತಿರುವ ಈ ಪ್ಲಾನ್ ಅನ್ನು ನೀವು ಇತರೆ ಕಂಪನಿಗಳ ಪ್ಲಾನ್ ಗೆ ಹೋಲಿಸಿದರೆ, Airtel ಈ ಪ್ಲಾನ್ ಅನ್ನು ರೂ.129ಕ್ಕೆ ನೀಡುತ್ತಿದ್ದು, ನಿತ್ಯ 1 ಜಿಬಿ ಡೇಟಾ, ಅನಿಯಮಿತ ಕರೆ ಕೇವಲ 24 ದಿನಗಳ ಸಿಂಧುತ್ವ ಹೊಂದಿದೆ.
ಇದನ್ನೂ-BSNL OFFER : ಬಿಎಸ್ ಎನ್ ಎಲ್ ಅಪೂರ್ವ ಆಫರ್..! ಜಸ್ಟ್ 75 ರೂಪಾಯಿ ರಿಚಾರ್ಜಿಗೆ ಸಿಮ್ ಫ್ರೀ
ಪ್ರತಿಸ್ಪರ್ಧಿ ಕಂಪನಿಗಳಲ್ಲಿಯೇ ಬೆಸ್ಟ್ ಪ್ಲಾನ್ ಇದಾಗಿದೆ
ಇನ್ನೊಂದೆಡೆ ರಿಲಯನ್ಸ್ ಮಾಲೀಕತ್ವದ Jio ರೂ.125ಗೆ ಈ ಪ್ಲಾನ್ ಲಭ್ಯವಿದ್ದು ಇದು ಕೇವಲ 28 ದಿನಗಳ ಸಿಂಧುತ್ವ ಹೊಂದಿದೆ. ಇದರ ಅಡಿ ನಿತ್ಯ 0.5 ಜಿಬಿ ಉಚಿತ ಡಾಟಾ ಮಾತ್ರ ಸಿಗುತ್ತದೆ. ಅನಿಯಮಿತ ಕಾಲಿಂಗ್ 300 ಉಚಿತ SMS ಸೌಕರ್ಯ ಈ ಪ್ಲಾನ್ ಒಳಗೊಂಡಿದೆ. Vi ಕೂಡ ರೂ.129ಕ್ಕೆ ಇಂತಹುದೇ ಪ್ಲಾನ್ ಆಫರ್ ಮಾಡುತ್ತದೆ. ಈ ಪ್ಲಾನ್ ಸಿಂಧುತ್ವ ಕೂಡ ಕೇವಲ 24 ದಿನಗಳದ್ದಾಗಿದೆ. ಆದರೆ, Vi ತನ್ನ ಪ್ಲಾನ್ ನಲ್ಲಿ ನಿತ್ಯ 2 ಜಿಬಿ ಉಚಿತ ಡಾಟಾ ನೀಡುತ್ತದೆ. ಜೊತೆಗೆ ಅನಿಯಮಿತ ಕಾಲಿಂಗ್ ಹಾಗೂ 300 ಉಚಿತ SMS ಸೌಲಭ್ಯ ಕೂಡ ನೀಡುತ್ತದೆ.
ಇದನ್ನೂ ಓದಿ-ಹೊಸ ರೀಚಾರ್ಜ್ ಯೋಜನೆ ಪ್ರಾರಂಭಿಸಿದ BSNL, ಸಿಗಲಿದೆ ಈ ಎಲ್ಲಾ ಪ್ರಯೋಜನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.