ನವದೆಹಲಿ: ಧೈರ್ಯ ಮತ್ತು ಫಿಟ್ನೆಸ್ಗೆ ಹೆಸರುವಾಸಿಯಾದ ಬಾಲಿವುಡ್ ನಟಿ ಮಲೈಕಾ ಅರೋರಾ (Malaika Arora) ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ತನ್ನ ಅಭಿಮಾನಿಗಳಿಗಾಗಿ ಆಗಾಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹೊಸ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಮಲೈಕಾ ಅವರ ಯೋಗಾಸನ ಭಂಗಿಯ ಫೋಟೋಗಳು ಮತ್ತು ವೀಡಿಯೊಗಳು ಸಹ ಯಾವಾಗಲೂ ವೈರಲ್ ಆಗುತ್ತವೆ. ಆದರೆ ಇತ್ತೀಚಿಗೆ ಮಲೈಕಾ ಅವರ ಯೋಗಾಸನದ ಫೋಟೋ ಒಂದನ್ನು ಹಂಚಿಕೊಂಡಿದ್ದು ಅದನ್ನು ಕಂಡ ಅವರ ಕೆಲವು ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಕೆಲವರು ಅಯ್ಯೋ ಹುಷಾರು ಎಂದು ಸಲಹೆ ನೀಡುತ್ತಿದ್ದಾರೆ.
ಗೋಡೆಯ ಮೇಲೆ ಅಂತಹ ಅಪಾಯಕಾರಿ ಭಂಗಿ :
ಮಲೈಕಾ ಅರೋರಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗೋಡೆಯ ಮೇಲೆ ಫಿಟ್ನೆಸ್ ಅನ್ನು ತೋರಿಸುತ್ತಿರುವ ಯೋಗ (Yoga) ಭಂಗಿಯಲ್ಲಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಕಂಡ ಮಲೈಕಾ ಅರೋರಾ (Malaika Arora) ಅವರ ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ. ವಾಸ್ತವವಾಗಿ, ನಟಿಯು ಟೆರಿಸ್ನ ಗೋಡೆಯ ಮೇಲೆ ಯೋಗ ಮಾಡುವುದನ್ನು ಕಾಣಬಹುದು. ಈ ಫೋಟೋ ನೋಡಿ ...
ಇದನ್ನೂ ಓದಿ - ಮನೆಯಲ್ಲಿಯೇ ಇದ್ದು ಫಿಟ್ ನೆಸ್ ಕಾಯ್ದುಕೊಳ್ಳುವುದು ಹೇಗೆ? ಇಲ್ಲಿದೆ ನಟಿ ಮಲೈಕಾ ಸ್ಟೋರಿ
ಕೆಲವರ ಹೊಗಳಿಕೆ, ಕೆಲವರಿಗೆ ಕಳವಳ:
ಈ ಚಿತ್ರವನ್ನು ನೋಡಿದ ಮಲೈಕಾ ಅರೋರಾ (Malaika Arora) ಅವರ ಕೆಲವು ಅಭಿಮಾನಿಗಳು ಆಕೆಯ ಧೈರ್ಯ, ಸಾಹಸಕ್ಕೆ ಹಾಡಿ ಹೊಗಳುತ್ತಿದ್ದಾರೆ. ಇನ್ನೂ ಕೆಲವರು ನೀವು ಕೆಳಗೆ ಬೀಳದಂತೆ ಜಾಗ್ರತೆ ವಹಿಸಿ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಮಲೈಕಾಳ ಲುಕ್ ಕುರಿತು ಮಾತನಾಡುವುದಾದರೆ, ಅವರು ಕಪ್ಪು ಬಣ್ಣದ ಜಿಮ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ಸಮಯದಲ್ಲಿ, ಫೋಟೋದಲ್ಲಿ ಹಿಂಬದಿಯಲ್ಲಿ ಕೆಲವು ಮರಗಳು ಮತ್ತು ಸಮುದ್ರ ಗೋಚರಿಸುತ್ತಿರುವುದನ್ನು ಕಾಣಬಹುದು. ಮರಗಳ ಎತ್ತರವನ್ನು ಗಮನಿಸಿದರೆ ಮಲೈಕಾ ಎಷ್ಟು ಎತ್ತರದಲ್ಲಿ ಈ ಯೋಗ ಮಾಡುತ್ತಿದ್ದಾರೆಂದು ಊಹಿಸಬಹುದು.
ಇದನ್ನೂ ಓದಿ - Shahid Kapoor , ಮೀರಾ ಹೋಳಿ ಸಂಭ್ರಮ ; ವೈರಲ್ ಆಯಿತು Romantic Video
ಭಾವನಾತ್ಮಕ ಶೀರ್ಷಿಕೆ:
ಈ ಚಿತ್ರವನ್ನು ಹಂಚಿಕೊಳ್ಳುತ್ತಾ, ಮಲೈಕಾ ಅರೋರಾ ಭಾವನಾತ್ಮಕ ಸಾಲುಗಳನ್ನು ಬರೆದಿದ್ದಾರೆ. ಅದು ಹೀಗಿದೆ- 'ಏನಾಗಲಿ, ನಾಳೆ ಸೂರ್ಯ ಮತ್ತೆ ಉದಯಿಸುತ್ತಾನೆ ಎಂದು ತಿಳಿದುಕೊಳ್ಳುವುದು ಒಂದು ವಿಚಿತ್ರ ಆರಾಮವಾಗಿದೆ. ಇಂದು ನಮಗಾಗಿ ಹೋರಾಟವು ನಾಳೆ ನಮಗೆ ಕಿರುನಗೆ ನೀಡುವ ಹಳೆಯ ದಿನಗಳಾಗಿ ಪರಿಣಮಿಸುತ್ತವೆ. ಜೀವನವು ನಿಮ್ಮನ್ನು ಪರೀಕ್ಷೆಗಳಿಗೆ ಒಳಪಡಿಸುತ್ತದೆ ಮತ್ತು ರೂಪವನ್ನು ನೀಡುತ್ತದೆ. ಆದರೆ ನಿಮ್ಮನ್ನು, ನಿಮ್ಮ ತನವನ್ನು ಬದಲಾಯಿಸಲು ಬಿಡಬೇಡಿ - ಆರನ್ ಲಾರಿಟ್ಸೆನ್ '.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.