ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಬಳಸಿ ಪೇರಳೆ ಎಲೆಯ ಫೇಸ್ ಪ್ಯಾಕ್

ಬೇಸಿಗೆಯಲ್ಲಿ ಪೇರಳೆ ಹಣ್ಣು ಬಹಳ ಪ್ರಯೋಜನಕಾರಿಯಾಗಿರತ್ತದೆ. ಪೇರಳೆ ಹಣ್ಣು ಆರೋಗ್ಯದ  ಮೇಲೆ ಉತ್ತಮ ಪರಿಣಾಮ ಬೀರಿದರೆ, ಪೇರಳೆ ಎಲೆಗಳು ತ್ವಚೆಯ ಕಾಂತಿ ಉಳಿಸಲು ಅಥವಾ ಹೆಚ್ಚಿಸಲು ಸಹಕಾರಿಯಾಗಿದೆ. 

Written by - Ranjitha R K | Last Updated : Mar 31, 2021, 07:21 PM IST
  • ಬೇಸಿಗೆ ಬಂತೆಂದರೆ ಸಾಕು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  • ಬೇಸಿಗೆಯಲ್ಲಿ ಮೊಡವೆ ಮತ್ತು ಟ್ಯಾನಿಂಗ್ ಸಮಸ್ಯೆ ಸಾಮಾನ್ಯ
  • ಸಮಸ್ಯೆಗೆ ಮನೆಯಲ್ಲಿಯೇ ಕಂಡುಕೊಳ್ಳಬಹುದು ಪರಿಹಾರ
ಬೇಸಿಗೆಯಲ್ಲಿ ತ್ವಚೆಯ ರಕ್ಷಣೆಗೆ ಬಳಸಿ ಪೇರಳೆ ಎಲೆಯ ಫೇಸ್ ಪ್ಯಾಕ್ title=
ಬೇಸಿಗೆ ಬಂತೆಂದರೆ ಸಾಕು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. (file photo)

ಬೆಂಗಳೂರು : Guava Leaves Face Pack:ಬೇಸಿಗೆ (Summer)ಬಂತೆಂದರೆ ಸಾಕು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖದ ಮೇಲೆ ಗುಳ್ಳೆಗಳು ಬೀಳುವುದು, ಬೆವರು ಸಾಲೆ, ಮುಂತಾದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಇವುಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸನ್‌ಸ್ಕ್ರೀನ್ ನ ಮೊರೆ ಹೋಗುತ್ತಾರೆ ಮಹಿಳೆಯರು. ಆದರೂ ಕೆಲವೊಮ್ಮೆ ಯಾವುದೇ ಪ್ರಯೋಜನವಾಗುವುದಿಲ್ಲ. ಬೇಸಿಗೆಯಲ್ಲಿ ಮೊಡವೆ (Pimple)ಮತ್ತು ಟ್ಯಾನಿಂಗ್ ಸಮಸ್ಯೆಯಿಂದ ನೀವು ಕೂಡ ಬಳಲುತ್ತಿದ್ದರೆ, ಅದಕ್ಕೆ ಪರಿಹಾರ ಇಲ್ಲಿದೆ. 

ಬೇಸಿಗೆಯಲ್ಲಿ ಪೇರಳೆ ಹಣ್ಣು (Guava) ಬಹಳ ಪ್ರಯೋಜನಕಾರಿಯಾಗಿರತ್ತದೆ. ಪೇರಳೆ ಹಣ್ಣು ಆರೋಗ್ಯದ (Health) ಮೇಲೆ ಉತ್ತಮ ಪರಿಣಾಮ ಬೀರಿದರೆ, ಪೇರಳೆ ಎಲೆಗಳು ತ್ವಚೆಯ ಕಾಂತಿ ಉಳಿಸಲು ಅಥವಾ ಹೆಚ್ಚಿಸಲು ಸಹಕಾರಿಯಾಗಿದೆ. ಪೇರಳೆ ಎಲೆಗಳು isoflavonoids, ಗ್ಯಾಲಿಕ್ ಆಸಿಡ್, ಆಸ್ಕೋರ್ಬಿಕ್ ಆಸಿಡ್, ಕ್ಯಾರೊಟಿನಾಯ್ಡ್ ಗಳಂತಹ ಪದಾರ್ಥಗಳನ್ನ ಒಳಗೊಂಡಿದೆ.  ಹಾಗಾಗಿ ಪೇರಳೆ ಎಲೆ ಚರ್ಮದ ಸಮಸ್ಯೆಗಳನ್ನು (Skin Problems) ಹೋಗಲಾಡಿಸಲು ಸಹಾಯ ಮಾಡುತ್ತದೆ. ಈ ಕಾರಣದಿಂದಾಗಿಯೇ ಪೇರಳೆ ಎಲೆಯ ಫೇಸ್ ಪ್ಯಾಕ್ (face Pack) ಮಾಡಿ ಮುಖಕ್ಕೆ ಹಚ್ಚುವುದರಿಂದ ಬೇಸಿಗೆಯಲ್ಲಿ (Summer) ಚರ್ಮದ ಸಮಸ್ಯೆಗೆ ಕಾರಣವಾಗುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. 

ಇದನ್ನೂ ಓದಿ : ನಿಮ್ಮ ಆರೋಗ್ಯ ಹೇಗಿದೆ ಅಂತ ನಿಮ್ಮ ಚರ್ಮವೇ ಹೇಳುತ್ತದೆ! ಹೇಗೆ ಗೊತ್ತಾ?

ಪೇರಳೆ ಎಲೆಗಳ ಫೇಸ್ ಪ್ಯಾಕ್ ಮಾಡುವುದು ಹೇಗೆ? 

-ಮೊದಲು ಪೇರಳೆಯ ಮೃದುವಾದ ಎಲೆಗಳನ್ನು ತೆಗೆದುಕೊಳ್ಳಿ. 
-ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. 
-ಸ್ವಲ್ಪ ನೀರು (water) ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿ.

ಪೇರಳೆ ಎಲೆ ಫೇಸ್ ಪ್ಯಾಕ್ ಅಪ್ಲೈ ಮಾಡುವುದು ಹೇಗೆ ? 
-ಮೊದಲು ಮುಖವನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಿ
- ಮೈಲ್ಡ್ ಕ್ಲೆನ್ಸರ್ ಬಳಸಿ ಅಥವಾ 5 ನಿಮಿಷಗಳ ಕಾಲ ಸ್ಟೀಮ್ ತೆಗೆದುಕೊಳ್ಳಿ. ಹೀಗೆ ಮಾಡುವುದರಿಂದ ಮುಖದ ರಂಧ್ರಗಳು ತೆರೆದುಕೊಳ್ಳುತ್ತವೆ. 
-ಈಗ ಪೇರಳೆ ಎಲೆಯೆ ಪೇಸ್ಟ್ (Guava Leaves Face Pack)ಅನ್ನು ಮುಖಕ್ಕೆ ಹಚ್ಚಿ. 
-ಪೇಸ್ಟ್ ಒಣಗಿದ ನಂತರ, ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

ಇದನ್ನೂ ಓದಿ : ಪ್ರತಿದಿನದ ಈ ಸಣ್ಣ ಕೆಲಸ ನಿಮಗೆ ನೀಡುತ್ತೆ ಸುಂದರ, ಹೊಳೆಯುವ ತ್ವಚೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News