Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ

Russia Corona Vaccine Sputnik V - ದೇಶಾದ್ಯಂತ ಹೊರಹೊಮ್ಮುತ್ತಿರುವ ದಾಖಲೆ ಪ್ರಮಾಣದ ಕೊರೊನಾ ಪ್ರಕರಣಗಳ ನಡುವೆಯೇ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಅಸ್ತ್ರ ಭಾರತದ ಬತ್ತಳಿಕೆಗೆ ಸೇರಿದೆ. 

Written by - Nitin Tabib | Last Updated : Apr 12, 2021, 05:37 PM IST
  • ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾರತದ ಬತ್ತಳಿಕೆ ಸೇರಿದ ಮತ್ತೊಂದು ಅಸ್ತ್ರ.
  • ರಷ್ಯಾ ಕೊರೊನಾ ವ್ಯಾಕ್ಸಿನ್ ತುರ್ತು ಬಳಕೆಗೆ ಕೇಂದ್ರ ಸರ್ಕಾರದ ಅನುಮತಿ.
  • ಹೈದ್ರಾಬಾದ್ ಮೂಲದ ಡಾ.ರೆಡ್ಡಿಸ್ ಲ್ಯಾಬ್ ಈ ಲಸಿಕೆಯ ಪ್ರಯೋಗ ನಡೆಸಿದೆ.
Russia Corona Vaccine Sputnik V ತುರ್ತು ಬಳಕೆಗೆ Modi ಸರ್ಕಾರದ ಅನುಮತಿ title=
Russia Corona Vaccine Sputnik V

ನವದೆಹಲಿ: Russia Corona Vaccine Sputnik V - ದೇಶಾದ್ಯಂತ ಹೊರಹೊಮ್ಮುತ್ತಿರುವ ದಾಖಲೆ ಪ್ರಮಾಣದ ಕೊರೊನಾ ಪ್ರಕರಣಗಳ ನಡುವೆಯೇ, ಕೊರೊನಾ ವಿರುದ್ಧದ ಹೋರಾಟದಲ್ಲಿ ಮತ್ತೊಂದು ಅಸ್ತ್ರ ಭಾರತದ ಬತ್ತಳಿಕೆಗೆ ಸೇರಿದೆ. ಹೌದು, ರಷ್ಯಾ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್ Sputnik V ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಇದರಿಂದ CDSCO ಅಂದರೆ ತಜ್ಞರ ತಂಡದ ಅನುಮತಿ ಪಡೆದ ಮೂರು ಲಸಿಕೆಗಳು ಇದೀಗ ಭಾರತದಲ್ಲಿವೆ. ಈಗಾಗಲೇ ಅಸ್ಟ್ರಾಜೆನಿಕಾ ಹಾಗೂ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಜಂಟಿಯಾಗಿ ಅಭಿವೃದ್ಧಿಗೊಳಿಸಿರುವ ಕೊವಿಶಿಲ್ದ್ ಹಾಗೂ ಭಾರತ್ ಬಯೋಟೆಕ್-ICMR ಅಭಿವೃದ್ಧಿಗೊಳಿಸಿರುವ ಕೊವ್ಯಾಕ್ಸಿನ್ ಲಸಿಕೆಗಳು ಈಗಾಗಲೇ ಭಾರತದಲ್ಲಿದ್ದು, ತುರ್ತು ಬಳಕೆಗೆ ಅನುಮತಿ ಪಡೆದ ಮೂರನೇ ಲಸಿಕೆ ಎಂಬ ಹೆಗ್ಗಳಿಕೆಗೆ Sputnik V ಪಾತ್ರವಾಗಿದೆ. ಈಗಾಗಲೇ ದೇಶಾದ್ಯಂತ ಸುಮಾರು 10 ಕೋಟಿಗೂ ಅಧಿಕ ಜನರಿಗೆ ಕೊವ್ಯಾಕ್ಸಿನ್ ಹಾಗೂ ಕೋವಿಶಿಲ್ದ್ ಲಸಿಕೆಯನ್ನು ನೀಡಲಾಗಿದೆ.

ಹೈದ್ರಾಬಾದ್ ಮೂಲದ ಕಂಪನಿಯಾಗಿರುವ ಡಾ. ರೆಡ್ಡಿಸ್  ಲ್ಯಾಬ್, Sputnik V ಲಸಿಕೆಯ ತುರ್ತು ಬಳಕೆಗೆ ಅನುಮತಿ ಕೋರಿ ಪತ್ರಬರೆದಿತ್ತು. ರಶಿಯನ್ ಡೈರೆಕ್ಟ್ ಇನ್ವೆಸ್ಟ್ಮೆಂಟ್ ಫಂಡ್ (RDIF), ಸೆಪ್ಟೆಂಬರ್ 2020 ರಲ್ಲಿ ಭಾರತದಲ್ಲಿ ಲಸಿಕೆಯ  ಕ್ಲಿನಿಕಲ್ ಟ್ರಯಲ್ ಗಾಗಿ ಪಾರ್ಟ್ನರ್ ಶಿಪ್ ಮಾಡಿಕೊಂಡಿತ್ತು. ರಷ್ಯಾ ಅಭಿವೃದ್ಧಿ ಪಡಿಸಿರುವ ಈ ವ್ಯಾಕ್ಸಿನ್ ಕ್ಲಿನಿಕಲ್ ಟ್ರಯಲ್ ನಲ್ಲಿ ಶೇ.91.6 ರಷ್ಟು ಪ್ರಭಾವಿಯಾಗಿದೆ ಹಾಗೂ ಯುಎಇ, ಭಾರತ, ವೆನೆಜುವೆಲಾ ಹಾಗೂ ಬೆಲಾರೂಸ್ ಕೂಡ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿವೆ.

ಡಾ. ರೆಡ್ಡಿಸ್ ಹೊರತುಪಡಿಸಿ RDIF ಕೂಡ ಭಾರತದಲ್ಲಿ ಪ್ರತಿವರ್ಷ 20 ಕೋಟಿ ಪ್ರಮಾಣಗಳ ಉತ್ಪಾದನೆಗಾಗಿ ಮಾರ್ಚ್ ತಿಂಗಳಿನಲ್ಲಿ ವಿರಚೋ ಬಯೋಟೆಕ್ ಪ್ರೈವೇಟ್ ಲಿಮಿಟೆಡ್ ಜೊತೆಗೆ ಒಪ್ಪಂದ ಮಾಡಿಕೊಂಡಿದೆ. ಇದು ಸ್ಟೆಲಿಸ್ ಬಯೋಫಾರ್ಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಪೆನ್ಸಿಯಾ ಬಯೋಟೆಕ್ ನಿಂದ ಕ್ರಮವಾಗಿ 20 ಹಾಗೂ 10 ಕೋಟಿ ಲಸಿಕೆಯ ಪ್ರಮಾಣಗಳ ಉತ್ಪಾದನೆಗಾಗಿ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ- Dr Randeep Guleria: ಅಪಾಯಕಾರಿ ರೀತಿಯಲ್ಲಿ ಹರಡುತ್ತಿದೆ SARS-Cov-2 : ಇಲ್ಲಿದೆ ಅದರ ಲಕ್ಷಣಗಳು!

ದೇಶಾದ್ಯಂತ ಕೊರೊನಾ ವೈರಸ್ (Coronavirus) ಪ್ರಕರಣಗಳ 1,68, 912 ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆ ರಷ್ಯಾದ ವ್ಯಾಕ್ಸಿನ್ ಗೆ ಭಾರತ ಸರಕಾರ ನೀಡಿದ ಈ ಅನುಮತಿ ಭಾರಿ ಮಹತ್ವ ಪಡೆದುಕೊಂಡಿದೆ. ಈ ಹೊಸ ಸೋಂಕಿತ ಪ್ರಕರಣಗಳ ಪತ್ತೆಯಿಂದ ಇದುವರೆಗೆ ಭಾರತದಲ್ಲಿ ಈ ಮಾರಕ ಸೋಂಕಿಗೆ ಗುರಿಯಾದವರ ಒಟ್ಟು ಸಂಖ್ಯೆ ಕೂಡ 1,35,27,717ಕ್ಕೆ ತಲುಪಿದೆ. ಏಪ್ರಿಲ್ 11 ರಿಂದ 14ರ ಮಧ್ಯೆ 4 ದಿನಗಳ ಲಸಿಕೆ ಉತ್ಸವದ ನಡುವೆಯೇ ಹಲವು ರಾಜ್ಯಗಳು ಲಸಿಕೆ ಕೊರತೆಯ ಕುರಿತು ದೂರುತ್ತಿವೆ. 

ಇದನ್ನೂ ಓದಿ- COVID-19 ಏರಿಕೆ: ಉತ್ತರ ಪ್ರದೇಶದಲ್ಲಿ ಏಪ್ರಿಲ್ 30 ರವರೆಗೆ ಶಾಲೆಗಳು ಬಂದ್

ಕಳೆದ 24 ಗಂಟೆಯಲ್ಲಿ ಕೊರೊನಾ ಮಾರಕ ಸೋಂಕಿನಿಂದ ಸುಮಾರು 904 ಜನರು ಪ್ರಾಣಕಳೆದುಕೊಂಡಿದ್ದಾರೆ. ಇದರಲ್ಲಿ ಮಾಹಾರಾಷ್ಟ್ರದ 349, ಚತ್ತೀಸ್ಗಡದ 122, ಉತ್ತರ ಪ್ರದೇಶದ 67, ಪಂಜಾಬ್ನ 54, ದೆಹಲಿಯ 48 ಜನರು ಶಾಮೀಲಾಗಿದ್ದಾರೆ. ಇದರೊಂದಿಗೆ ಈ ಮಾರಣಾಂತಿಕ ವೈರಸ್ ದಾಳಿಗೆ ಬಲಿಯಾದವರ ಸಂಖ್ಯೆ 1,70,179ಕ್ಕೆ ತಲುಪಿದಂತಾಗಿದೆ.

ಇದನ್ನೂ ಓದಿ- Remdesiver Export Banned: Coronavirus: Remdesivir ರಫ್ತಿನ ಮೇಲೆ ನಿರ್ಬಂಧ, ಮೊದಲು ನಮ್ಮ ದೇಶ ಎಂದ ಮೋದಿ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News