ನವದೆಹಲಿ: Vi Cheapest Recharge Plan - ಭಾರಿ ಬೇಡಿಕೆ ಹಿನ್ನೆಲೆ , ವೊಡಾಫೋನ್-ಐಡಿಯಾ (Vi) ತನ್ನ ಅಗ್ಗದ ಜನಪ್ರಿಯ ಯೋಜನೆಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಮತ್ತೆ ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ, ಇದು ಕೈಗೆಟುಕುವ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯಾಗಿದ್ದು, ಗ್ರಾಹಕರು ಸಕ್ರಿಯಗೊಳಿಸಲು ಕೇವಲ 109 ರೂಗಳನ್ನು (109 Rupees Recharge Plan) ಮಾತ್ರ ಖರ್ಚು ಮಾಡಬೇಕಾಗುತ್ತದೆ ಎಂದಿದೆ.
ಇದನ್ನೂ ಓದಿ- Provident Fund: ಅಗತ್ಯವಿದ್ದರೆ ನಿಮ್ಮ PF ಹಣ ಹಿಂಪಡೆಯಬಹುದು, ಆದರೆ ಎಷ್ಟು Tax ಪಾವತಿಸಬೇಕೆಂದು ತಿಳಿಯಿರಿ
ಗ್ರಾಹಕರಿಗೆ ಸಿಗಲಿವೆ ಈ ಸೌಲಭ್ಯಗಳು
ಈ ಯೋಜನೆಯಡಿಯಲ್ಲಿ, ಕಂಪನಿಯು ಗ್ರಾಹಕರಿಗೆ 1 ಜಿಬಿ ಹೈಸ್ಪೀಡ್ ಡೇಟಾ, 300 ಸ್ಥಳೀಯ ಮತ್ತು ಅಂತರರಾಷ್ಟ್ರೀಯ ಎಸ್‌ಎಂಎಸ್ ಅನ್ನು ಅನಿಯಮಿತ ಉಚಿತ ಲೋಕಲ್-ಎಸ್‌ಟಿಡಿ ಮತ್ತು ಎಲ್ಲಾ ನೆಟ್‌ವರ್ಕ್‌ಗಳಲ್ಲಿ ರೋಮಿಂಗ್ ಕಾಲಿಂಗ್ ಅನ್ನು ನೀಡುತ್ತಿದೆ. ಯೋಜನೆ ಸಕ್ರಿಯಗೊಂಡ ನಂತರ ಮುಂದಿನ 20 ದಿನಗಳವರೆಗೆ ಈ ಎಲ್ಲಾ ಸೌಲಭ್ಯಗಳು ಲಭ್ಯವಿರಲಿವೆ. ವೊಡಾಫೋನ್ ಮತ್ತು ಐಡಿಯಾ ವಿಲೀನದ ಸಮಯದಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾದ ಈ ಯೋಜನೆಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು, ಅದಕ್ಕಾಗಿಯೇ ಕಂಪನಿಯು (Vodafone-Idea) ಅದನ್ನು ಮರುಪ್ರಾರಂಭಿಸಿದೆ.
ಇದನ್ನೂ ಓದಿ- Post Office Saving Schemes: ನಿಯಮಿತ ಆದಾಯಕ್ಕಾಗಿ ಈ ಯೋಜನೆಯಲ್ಲಿ ಹೂಡಿಕೆ ಮಾಡಿ, ಅಲ್ಪಾವಧಿಯಲ್ಲಿಯೇ ದ್ವಿಗುಣಗೊಳ್ಳುತ್ತೆ ಹಣ
149 ರೂ.ಗಳ ಯೋಜನೆ ಕೂಡ ಉತ್ತಮ ರಿಚಾರ್ಜ್ ಪ್ಲಾನ್ ಆಗಿದೆ
149 ರೂಗಳ ವೊಡಾಫೋನ್-ಐಡಿಯಾದ ಪ್ರಿಪೇಯ್ಡ್ (Prepaid Recharge Plan) ಯೋಜನೆಯನ್ನು ಮಾರುಕಟ್ಟೆಯಲ್ಲಿ ಅತ್ಯಂತ ಅಗ್ಗದ ಯೋಜನೆ ಎಂದು ಪರಿಗಣಿಸಲಾಗಿದೆ, ಇದು 28 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಯೋಜನೆಯಲ್ಲಿ ದೈನಂದಿನ 3 ಜಿಬಿ ಡೇಟಾ ಲಭ್ಯವಿದೆ. ಇದಲ್ಲದೆ ಗ್ರಾಹಕರಿಗೆ ಉಚಿತ ಕರೆ ಮತ್ತು 300 ಎಸ್‌ಎಂಎಸ್ ಸಹ ನೀಡಲಾಗುತ್ತದೆ. ಇದು ಮಾತ್ರವಲ್ಲದೆ, ಕಂಪನಿಯು 1 ಜಿಬಿ ಹೆಚ್ಚುವರಿ ಡೇಟಾ, ವಿ ಮೂವೀಸ್ ಮತ್ತು ಟಿವಿ ಚಂದಾದಾರಿಕೆಗಳನ್ನು ಸಹ ನೀಡುತ್ತಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.