ಫೇಕ್ ನ್ಯೂಸ್ ನಿಯಂತ್ರಣಕ್ಕೆ 'cyber patrol' ನೇಮಿಸಿದ ಈ ರಾಜ್ಯ

ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಪ್ರಮಾಣದ ಏರಿಕೆ ಕಂಡು ಬರುತ್ತಿರುವ ಸಂದರ್ಭದಲ್ಲಿ ರಾಜ್ಯ ಪೊಲೀಸರು 'ಸೈಬರ್ ಪೆಟ್ರೋಲಿಂಗ್' ಅನ್ನು ಪ್ರಾರಂಭಿಸಿದ್ದಾರೆ, ಇದು ವೈರಸ್ ಬಗ್ಗೆ  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ.

Last Updated : Apr 25, 2021, 04:14 PM IST
  • ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಪ್ರಮಾಣದ ಏರಿಕೆ ಕಂಡು ಬರುತ್ತಿರುವ ಸಂದರ್ಭದಲ್ಲಿ ರಾಜ್ಯ ಪೊಲೀಸರು 'ಸೈಬರ್ ಪೆಟ್ರೋಲಿಂಗ್' ಅನ್ನು ಪ್ರಾರಂಭಿಸಿದ್ದಾರೆ.
  • ಇದು ವೈರಸ್ ಬಗ್ಗೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ.
 ಫೇಕ್ ನ್ಯೂಸ್ ನಿಯಂತ್ರಣಕ್ಕೆ 'cyber patrol' ನೇಮಿಸಿದ ಈ ರಾಜ್ಯ  title=
ಸಾಂದರ್ಭಿಕ ಚಿತ್ರ

ನವದೆಹಲಿ: ಕೇರಳದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಾಖಲೆಯ ಪ್ರಮಾಣದ ಏರಿಕೆ ಕಂಡು ಬರುತ್ತಿರುವ ಸಂದರ್ಭದಲ್ಲಿ ರಾಜ್ಯ ಪೊಲೀಸರು 'ಸೈಬರ್ ಪೆಟ್ರೋಲಿಂಗ್' ಅನ್ನು ಪ್ರಾರಂಭಿಸಿದ್ದಾರೆ, ಇದು ವೈರಸ್ ಬಗ್ಗೆ  ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡುವವರನ್ನು ಕಂಡುಹಿಡಿಯಲು ಸಹಾಯಕವಾಗುತ್ತದೆ.

ಇದನ್ನೂ ಓದಿ- ನಿಲ್ಲುತ್ತಿಲ್ಲ ಕರೋನಾಸುರ ಆರ್ಭಟ..! ಕಳೆದ 24 ಗಂಟೆಗಳಲ್ಲಿ 3.5 ಲಕ್ಷ ಜನರಿಗೆ ಸೋಂಕು

ಈಗಾಗಲೇ ಸಾಂಕ್ರಾಮಿಕ ರೋಗದ ಬಗ್ಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸುಳ್ಳು ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಚ್ಚರಿಸಿದ್ದಾರೆ.Coronavirus ಬಗ್ಗೆ ಕೆಲವು ಜನರು ಸಾಮಾಜಿಕ ಮಾಧ್ಯಮಗಳ ಮೂಲಕ ಸಾಕಷ್ಟು ಅನಧಿಕೃತ ಮತ್ತು ಅವೈಜ್ಞಾನಿಕ ವಿಷಯವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

"ಇಂತಹ ನಕಲಿ ಸುದ್ದಿಗಳನ್ನು ರಚಿಸುವುದಲ್ಲದೆ ಅದನ್ನು ಹಂಚಿಕೊಳ್ಳುವುದು ಕೂಡ ಅಪರಾಧ" ಎಂದು ಡಿಜಿಪಿ ಇಲ್ಲಿ ಹೇಳಿದರು.

ಇದನ್ನೂ ಓದಿ- ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು

ಇಂತಹ ಹೆಚ್ಚಿನ ನಿದರ್ಶನಗಳು ಗಮನಕ್ಕೆ ಬರುತ್ತಿದ್ದಂತೆ, ಪೊಲೀಸ್ ಪ್ರಧಾನ ಕಚೇರಿಯಲ್ಲಿನ ಹೈಟೆಕ್ ಅಪರಾಧ ವಿಚಾರಣಾ ಸೆಲ್ ಮತ್ತು ಸೈಬರ್ ಭದ್ರತೆಯಲ್ಲಿ ಕೇರಳ ಪೊಲೀಸರ ಶ್ರೇಷ್ಠತೆಯ ಕೇಂದ್ರವಾದ ಸೈಬರ್ ಡೋಮ್ ಅನ್ನು ಸಾಮಾಜಿಕವಾಗಿ ಕಠಿಣ ಸೈಬರ್ ಗಸ್ತು ನಡೆಸಲು ಸೂಚನೆ ನೀಡಲಾಗಿದೆ ಅಂತಹ ಸುಳ್ಳು ಸುದ್ದಿ ಮತ್ತು ಸಂದೇಶಗಳನ್ನು ರಚಿಸುವ ಮತ್ತು ಹಂಚಿಕೊಳ್ಳುತ್ತಿರುವವರನ್ನು ಬಂಧಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ- ದೇಶದ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ

ಕೇರಳದ ಸಕ್ರಿಯ ಪ್ರಕರಣಗಳು ಶನಿವಾರ 1.98 ಲಕ್ಷಕ್ಕೆ ಏರಿತು. ರಾಜ್ಯದಲ್ಲಿ 26,685 ಹೊಸ ಪ್ರಕರಣಗಳು ವರದಿಯಾಗಿವೆ, ಅವುಗಳಲ್ಲಿ 73 ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News