ವಾಷಿಂಗ್ಟನ್/ನವದೆಹಲಿ: New Corona Test Kit - COVID-19 ನ ಹೆಚ್ಚುತ್ತಿರುವ ಪ್ರಕರಣಗಳು ವಿಶ್ವಾದ್ಯಂತ ಅಪಾರ ಹಾನಿಯನ್ನುಂಟು ಮಾಡುತ್ತಿದ್ದು, ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಹೊರೆ ಬಿದ್ದಿದೆ. ಇಂತಹ ಸಮಯದಲ್ಲಿ, ಕರೋನಾ ವೈರಸ್‌ಗೆ ಹೊಸ ಸ್ವ-ಪರೀಕ್ಷಾ ತಂತ್ರವು (New Corona Test Kit) ಸಮಯದ ಅವಶ್ಯಕತೆಯಾಗಿದೆ. ಅದರ ಮೂಲಕ ಫಲಿತಾಂಶಗಳನ್ನು ಸುಲಭವಾಗಿ ಮತ್ತು ತ್ವರಿತವಾಗಿ ಪಡೆಯಬಹುದು. ಉದಾಹರಣೆಗೆ, ನಮ್ಮ ದೇಶವು ಐಸಿಎಂಆರ್ ಅನುಮೋದಿಸಿದ Covid -19 ಸ್ವಯಂ-ಪರೀಕ್ಷಾ ಕಿಟ್ ಅನ್ನು ಹೊಂದಿದ್ದು, ಇದು ಕೇವಲ 15 ನಿಮಿಷಗಳಲ್ಲಿ ಸೋಂಕಿನ ಫಲಿತಾಂಶಗಳನ್ನು ನೀಡುತ್ತದೆ.
ಕೊರೊನಾ ಪರೀಕ್ಷೆಗಳ ವೇಗ ಹೆಚ್ಚಾಗಲಿದೆ
ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಫಿಸಿಕ್ಸ್ ಪ್ರಕಾರ, ಇತ್ತೀಚೆಗೆ, ಫ್ಲೋರಿಡಾ ವಿಶ್ವವಿದ್ಯಾಲಯ ಮತ್ತು ತೈವಾನ್‌ನ ನ್ಯಾಷನಲ್ ಚಿಯಾವೊ ತುಂಗ್ ವಿಶ್ವವಿದ್ಯಾಲಯದ ಸಂಶೋಧಕರು COVID-19 ಬಯೋಮಾರ್ಕರ್‌ಗಳಿಗಾಗಿ ವೇಗವಾಗಿ ಮತ್ತು ಸೂಕ್ಷ್ಮವಾಗಿ ಪರೀಕ್ಷಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಇದರ ಸಂವೇದಕ ವ್ಯವಸ್ಥೆ ಕೇವಲ ಒಂದು ಸೆಕೆಂಡಿನೊಳಗೆ ಫಲಿತಾಂಶಗಳನ್ನು (Covid Test Result) ನೀಡುತ್ತದೆ. ಈ ವ್ಯವಸ್ಥೆಯನ್ನು ಜರ್ನಲ್ ಆಫ್ ವ್ಯಾಕ್ಯೂಮ್ ಸೈನ್ಸ್ ಅಂಡ್ ಟೆಕ್ನಾಲಜಿ ಬಿ ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಈ ಕುರಿತು ಮಾಹಿತಿ ನೆಇದುರ್ವ ಫ್ಲೋರಿಡಾ ವಿಶ್ವವಿದ್ಯಾಲಯದ ಸಂಶೋಧಕ ಮತ್ತು ಈ ಅಧ್ಯಯನದ ಲೇಖಕ ಮಿಂಗನ್ ಜಿಯಾನ್, "ಈ ತಂತ್ರವು ಕರೋನಾ (Coronavirus) ಪರೀಕ್ಷೆಯ ನಿಧಾನಗತಿಯ ವೇಗವನ್ನು ಹೆಚ್ಚಿಸುತ್ತದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ-WHO ಅನುಮೋದನೆಯ ನಿರೀಕ್ಷೆಯಲ್ಲಿ ಭಾರತ್ ಬಯೋಟೆಕ್ Covaxin
ಈ ಕಿಟ್ ನಿಂದ ಹೇಗೆ ಟೆಸ್ಟಿಂಗ್ ನಡೆಸಬೇಕು?
ಈ ಕಿಟ್ ನಲ್ಲಿ ಟೆಸ್ಟಿಂಗ್ (Corona Test) ನಡೆಸಲು ಬಯೋಸೆನ್ಸರ್ ಸ್ಟ್ರಿಪ್ ಗಳನ್ನು ಬಳಸಲಾಗುತ್ತದೆ. ಇದು ಆಕಾರದಲ್ಲಿ ಗ್ಲುಕೋಸ್ ಟೆಸ್ಟ್ ಸ್ತ್ರೀಪ್ ರೀತಿಯಲ್ಲಿಯೇ ಇರುತ್ತದೆ. ಈ ಸ್ಟ್ರಿಪ್ ಗೆ ದ್ರವ ಹಾಕಲು ಸ್ಟ್ರಿಪ್ ನ ಒಂದು ಭಾಗದಲ್ಲಿ ಒಂದು ಸಣ್ಣ ಮೈಕ್ರೋಫ್ಜುಯಿಡಿಕ್ ಚಾನೆಲ್ ಇಡಲಾಗಿದೆ. ಮೈಕ್ರೋಫ್ಜುಯಿಡಿಕ್ ಚಾನೆಲ್ ನಲ್ಲಿರುವ ಕೆಲ ಇಲೆಕ್ಟ್ರೋಡ್ ಗಳು ದ್ರವದ ಸಂಪರ್ಕಕ್ಕೆ ಬರುತ್ತವೆ. ಇದರಲ್ಲಿ ನ ಒಂದು ಇಲೆಕ್ಟ್ರೋಡ್ ಗೆ ಚಿನ್ನದ ಲೇಪ ಬಳಸಲಾಗಿದೆ. ಕೊವಿಡ್-ರೆಲೆವೆಂಟ್ ಆಂಟಿ ಬಾಡಿ ಒಂದು ರಾಶಾಯನಿಕ ವಿಧಿಯ ಮೂಲಕ ಚಿನ್ನದ ಮೇಲ್ಮೈಗೆ ಅಂಟಿಕೊಳ್ಳುತ್ತದೆ. ಟೆಸ್ಟಿಂಗ್ ಅವಧಿಯಲ್ಲಿ ಸೆನ್ಸರ್ ಸ್ಟ್ರಿಪ್, ಒಂದು ಕನೆಕ್ಟರ್ ಮಾಧ್ಯಮದ ಮೂಲಕ ಒಂದೇ ಸರ್ಕಿಟ್ ಬೋರ್ಡ್ ಗೆ ಸಂಪರ್ಕ ಹೊಂದಿರುತ್ತವೆ ಹಾಗೂ ಒಂದು ಸಣ್ಣ ಇಲೆಕ್ಟ್ರಿಕ್ ಸಿಗ್ನಲ್ ಕೊವಿಡ್ ಆಂಟಿ ಬಾಡಿ ಹಾಗೂ ಮತ್ತೊಂದು ಸಹಾಯಕ ಇಲೆಕ್ಟ್ರೋಡ್ ಜೊತೆ ಸಂಪರ್ಕ ಹೊಂದಿದ ಗೋಲ್ಡ್ ಇಲೆಕ್ಟ್ರೋಡ್ ನ ನಡುವೆ ಕಳುಹಿಸಲಾಗುತ್ತದೆ. ಈ ರೀತಿ ಸೋಂಕನ್ನು ಪತ್ತೆಹಚ್ಚಲಾಗುತ್ತದೆ.
ಇದನ್ನೂ ಓದಿ- Covid-19 : ಈ 18 ಜಿಲ್ಲೆಗಳಲ್ಲಿ ಸೋಂಕಿತರಿಗೆ 'Home Isolation' ರದ್ದು ಪಡೆಸಿದ ಸರ್ಕಾರ!
ಈ ಸರ್ಕಿಟ್ ಬೋರ್ಡ್ ಅನ್ನು ರೀಯೂಸ್ ಮಾಡಬಹುದು
ಟೆಸ್ಟ್ ಸರ್ಕ್ಯೂಟ್ ಬೋರ್ಡ್‌ಗಳನ್ನು ಮರುಬಳಕೆ ಮಾಡುವಾಗ ಸಿಸ್ಟಮ್‌ನ ಸೆನ್ಸಾರ್ ಸ್ಟ್ರಿಪ್‌ಗಳನ್ನು ಒಂದು ಬಳಕೆಯ ನಂತರ ಮತ್ತೆ ಬಳಸಬಾರದು. ಇದರರ್ಥ ಪರೀಕ್ಷೆಯ ವೆಚ್ಚವು ತುಂಬಾ ಕಡಿಮೆಯಾಗಿದೆ. ಈ ಪರೀಕ್ಷೆಯ ವಿಧಾನವು ಪ್ರಸ್ತುತ ಸಮಯದಲ್ಲಿ ಬಹಳ ಸಹಕಾರಿ ಎಂದು ಸಾಬೀತಾಗಲಿದೆ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ. ಇದರಿಂದ ಎಲ್ಲಾ ಆರೋಗ್ಯ ಕಾರ್ಯಕರ್ತರನ್ನು ಸೋಂಕಿನಿಂದ ರಕ್ಷಿಸಬಹುದು. ಇದಲ್ಲದೆ ಸೋಂಕಿತ ವ್ಯಕ್ತಿಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಬಹುದು.
ಇದನ್ನೂ ಓದಿ-ಕರೋನಾ ಕಾಲದಲ್ಲೊಂದು ಅಪರೂಪದ ಮದುವೆ ; ವಿಮಾನದಲ್ಲೇ ನೆರವೇರಿತು ವಿವಾಹ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.