Aadhar Card ನಲ್ಲಿದ್ದ 'ಮೊಬೈಲ್ ನಂಬರ್' ಬಂದ್ ಆಗಿದೆಯಾ? ಹೊಸ ನಂಬರ್ ಅಪ್ಡೇಟ್  ಮಾಡುವುದು ಹೇಗೆ ಇಲ್ಲಿದೆ ನೋಡಿ!

ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು, ಆಧಾರ್ ಕಾರ್ಡ್ ನಲ್ಲಿ ಸರಿಯಾದ ಮೊಬೈಲ್ ಸಂಖ್ಯೆಯನ್ನ ಹೊಂದಿರುವುದು ಅತ್ಯಂತ ಮುಖ್ಯವಾಗಿದೆ.

Last Updated : May 27, 2021, 04:39 PM IST
  • ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಮುಖ್ಯ ದಾಖಲೆ
  • ಆಧಾರ್ ಇಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ
  • ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಹೊಂದಿರುವುದು ಅತ್ಯಂತ ಮುಖ್ಯ
 title=

ನವದೆಹಲಿ : ಆಧಾರ್ ಕಾರ್ಡ್ ಇತ್ತೀಚಿನ ದಿನಗಳಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳಿಗೆ ಬಹಳ ಮುಖ್ಯವಾದ ದಾಖಲೆಯಾಗಿದೆ. ಸರ್ಕಾರದ ಯೋಜನೆಯ ಸೌಲಭ್ಯ ಪಡೆಯಲು ಅಥವಾ ಆಧಾರ್ ಇಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಸಾಧ್ಯವಿಲ್ಲ. 

ಆಧಾರ್‌ಗೆ ಸಂಬಂಧಿಸಿದ ಎಲ್ಲಾ ಸೌಲಭ್ಯಗಳ ಪ್ರಯೋಜನವನ್ನು ಪಡೆಯಲು, ಆಧಾರ್ ಕಾರ್ಡ್(Aadhar Card) ನಲ್ಲಿ ಸರಿಯಾದ ಮೊಬೈಲ್ ಸಂಖ್ಯೆಯನ್ನ ಹೊಂದಿರುವುದು ಅತ್ಯಂತ ಮುಖ್ಯವಾಗಿದೆ. ಇದಕ್ಕೆ ಕಾರಣವೆಂದ್ರೆ, ನಿಮ್ಮ ಆಧಾರ್ ಸಂಖ್ಯೆಯ ಸಹಾಯದಿಂದ ನೀವು ಸ್ವಲ್ಪ ಕೆಲಸ ಮಾಡಲು ಬಯಸಿದಾಗ, ಅದರ ಪರಿಶೀಲನೆಗಾಗಿ ಒಟಿಪಿ ಬರುತ್ತೆ. ಇದು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಗೆ ಬರುತ್ತೆ.

ಇದನ್ನೂ ಓದಿ : 'ITR E-ಫೈಲಿಂಗ್' : ಆದಾಯ ತೆರಿಗೆದಾರರಿಗೊಂದು ಮಹತ್ವದ ಮಾಹಿತಿ!

ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮೊಬೈಲ್ ನಂಬರ್(Mobile Number) ಬದಲಾಗಿದ್ರೆ, ಆಗ ಆಧಾರ್ ಮೌಲ್ಯೀಕರಿಸಲು ಬರುವ ಒಟಿಪಿ ನಿಮ್ಮ ಹಳೆಯ ಸಂಖ್ಯೆಗೆ ಬರುತ್ತೆ. ಅಂದರೆ, ನೀವು ಒಟಿಪಿ ಪರಿಶೀಲನೆಯೊಂದಿಗೆ ಪ್ರಕ್ರಿಯೆಯನ್ನ ಪೂರ್ಣಗೊಳಿಸಲು ಬಯಸಿದರೆ, ಆಗ ನೀವು ಅದನ್ನ ಮಾಡಲು ಸಾಧ್ಯವಾಗುವುದಿಲ್ಲ.

ಆಧಾರ್ ಕಾರ್ಡ್‌ನಲ್ಲಿ ಹೊಸ ಸಂಖ್ಯೆಯನ್ನು ನವೀಕರಿಸುವುದು ಹೇಗೆ?

ಇದನ್ನೂ ಓದಿ : Gold-Silver Rate : ಆಭರಣ ಪ್ರಿಯರಿಗೆ ಸಿಹಿ ಸುದ್ದಿ : ಇಳಿಕೆ ಕಂಡ ಚಿನ್ನದ ಬೆಲೆ!

- ಮೊದಲು ನೀವು ಆಧಾರ್ ದಾಖಲಾತಿ / ನವೀಕರಣ ಕೇಂದ್ರ(Aadhar Card Centers)ಕ್ಕೆ ಹೋಗಬೇಕು.

- ಇದಾದ ನಂತರ ಆಧಾರ್ ಕಾರ್ಡ್ ತಿದ್ದುಪಡಿ(Aadhar Card Update) ನಮೂನೆಯನ್ನು ಭರ್ತಿ ಮಾಡಬೇಕು.

- ಈ ಫಾರ್ಮ್ ನಲ್ಲಿ ನೀವು ಅಪ್ ಡೇಟ್ ಮಾಡಬೇಕಾದ ಮೊಬೈಲ್ ಸಂಖ್ಯೆಯನ್ನ ಭರ್ತಿ ಮಾಡಿ. ನಂತರ ನಮೂನೆಯನ್ನು ಸಲ್ಲಿಸಿ.

ಇದನ್ನೂ ಓದಿ : Petrol-Diesel Price: ವಾಹನ ಸವಾರರಿಗೆ ಬಿಗ್ ಶಾಕ್ : ಒಂದೇ ತಿಂಗಳಲ್ಲಿ 14 ಬಾರಿ ಏರಿಕೆ ಕಂಡ ಪೆಟ್ರೋಲ್-ಡೀಸೆಲ್ ಬೆಲೆ! 

- ನಂತರ ನೀವು ದೃಢೀಕರಣಕ್ಕಾಗಿ ನಿಮ್ಮ ಬಯೋಮೆಟ್ರಿಕ್ ಒದಗಿಸಬೇಕು.

- ಇದರ ನಂತರ, ಎಕ್ಸಿಕ್ಯುಟೀವ್ ನಿಮಗೆ ಮರು ಹೊಂದಿಕೆಯನ್ನು ನೀಡುತ್ತದೆ.

- ಈ ಮರು ಹೊಂದಿಕೆಯಲ್ಲಿ ನೀವು ವಿನಂತಿ ಸಂಖ್ಯೆಯನ್ನ (URN) ಪಡೆಯುತ್ತೀರಿ.

ಇದನ್ನೂ ಓದಿ : LPG Booking ವ್ಯವಸ್ಥೆಯಲ್ಲಿ ಹೊಸ ನಿಯಮ ತರಲು ಸರ್ಕಾರದ ಸಿದ್ಧತೆ

- ನೀವು URN ಬಳಸಿ ನಿಮ್ಮ ಅಪ್ಡೇಶನ್ ಸ್ಥಿತಿಯನ್ನು ಪರಿಶೀಲಿಸಬಹುದು.

- ಆಧಾರ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಅಪ್ ಡೇಟ್ ಮಾಡಿದ ನಂತ್ರ, ನೀವು ಹೊಸ ಆಧಾರ್ ಕಾರ್ಡ್ ಪಡೆಯುವ ಅಗತ್ಯವಿಲ್ಲ.

ಇದನ್ನೂ ಓದಿ : Personal Loan Requirement: ಕೇವಲ ನಿಮಿಷಗಳಲ್ಲಿ ಪರ್ಸನಲ್ ಲೋನ್ ಪಡೆಯುವ ವಿಧಾನ ತಿಳಿಯಿರಿ

- ನಿಮ್ಮ ಹೊಸ ಮೊಬೈಲ್ ಸಂಖ್ಯೆ ಆಧಾರ್ ನೊಂದಿಗೆ ನೋಂದಾಯಿಸಲ್ಪಟ್ಟಾಗ, ಆಧಾರ್ ನ ಅದೇ ಬದಲಾದ ಮೊಬೈಲ್ ಸಂಖ್ಯೆಯ ಮೇಲೆ ನೀವು ಒಟಿಪಿಯನ್ನು ಸ್ವೀಕರಿಸಲು ಪ್ರಾರಂಭಿಸುತ್ತೀರಿ.

- ನೀವು ಆಧಾರ್ ನ ನವೀಕರಣ ಸ್ಥಿತಿಯನ್ನ ನೋಡಲು ಬಯಸಿದ್ರೆ, ಯುಐಡಿಎಐನ ಟೋಲ್-ಫ್ರೀ ಸಂಖ್ಯೆ 1947 ಗೆ ಕರೆ ಮಾಡುವ ಮೂಲಕವೂ ನೀವು ತಿಳಿದುಕೊಳ್ಳಬಹುದು.

ಇದನ್ನೂ ಓದಿ : ICICI Bank: ಯುಪಿಐ ಐಡಿಯೊಂದಿಗೆ ವ್ಯವಹಾರ ನಡೆಸಲು ಇದರ ಅಗತ್ಯವಿಲ್ಲ

ಆಧಾರ್ ನಲ್ಲಿ ಫೋನ್ ಸಂಖ್ಯೆಯನ್ನ ನವೀಕರಿಸಲು ನಿಮಗೆ ಯಾವುದೇ ದಾಖಲೆಯ ಅಗತ್ಯವಿಲ್ಲ, ನಿಮ್ಮ ಆಧಾರ್ ಕಾರ್ಡ್ʼನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಲು ನೀವು ಬಯಸಿದ್ರೆ, ಆಗ ನೀವು ಯಾವುದೇ ರೀತಿಯ ದಾಖಲೆಯನ್ನ ಪ್ರಸ್ತುತಪಡಿಸಬೇಕಾಗಿಲ್ಲ. ನೀವು ಆಧಾರ್ ನವೀಕರಣ ನಮೂನೆಯನ್ನ ಭರ್ತಿ ಮಾಡಬೇಕು. ಇದರಲ್ಲಿ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆಯನ್ನ ನಮೂದಿಸಬೇಕು. ಅಲ್ಲದೆ, ಶುಲ್ಕವನ್ನು ಸಲ್ಲಿಸಬೇಕು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News